ಕಮಲಾ ಹ್ಯಾರಿಸ್‌ಗೆ ವಿಶಿಷ್ಟ ಉಡುಗೊರೆ ನೀಡಿದ ಮೋದಿ!

ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತಿತರ ಕ್ವಾಡ್ ನಾಯಕರಿಗೆ ವಿಶಿಷ್ಠ ಉಡುಗೊರೆಗಳನ್ನು ನೀಡಿ ಅವರನ್ನು ಸಂತುಷ್ಟಗೊಳಿಸಿದರು.

ಕಮಲಾ ಹ್ಯಾರಿಸ್ ಅವರ ತಾತಾ ಪಿವಿ ಗೋಪಾಲನ್ ಅವರಿಗೆ ಸಂಬಂಧಿಸಿದ ಹಳೆಯ ಅಧಿಸೂಚನೆಗಳ ಪ್ರತಿಯನ್ನು ಮರದ ಕರಕುಶಲತೆಯ ಫ್ರೇಮ್ ನಲ್ಲಿ ಅಮೆರಿಕ ಉಪಾಧ್ಯಕ್ಷರಿಗೆ ನೀಡಿದರು. ಸರ್ಕಾರದ ಉನ್ನತಾಧಿಕಾರಿಯಾಗಿದ್ದ ಪಿ. ವಿ. ಗೋಪಾಲನ್ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಕಾಶಿಯಲ್ಲಿ ವಿಶೇಷವಾಗಿ ನಿರ್ಮಿಸಲಾದ ಅಕರ್ಷಕ ಚದುರಂಗ ನೀಡಿದರು.

ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರಿಗೆ ಸಿಲ್ವರ್ ಗುಲಾಬಿ ಮೀನಿನಾಕಾರದ ನೌಕೆಯ ಪ್ರತಿರೂಪ ಹಾಗೂ ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಅವರಿಗೆ ಶ್ರೀಗಂಧದ ಬುದ್ಧನ ವಿಗ್ರಹವನ್ನು ಉಡುಗೊರೆಯಾಗಿ ನೀಡಿದರು.

× Chat with us