ಕಾಶ್ಮೀರದಲ್ಲಿ ಯೋಧರೊಂದಿಗೆ ದೀಪಾವಳಿ ಅಚರಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ : ಪ್ರತಿ ವರ್ಷದಂತೆ ಈ ವರ್ಷವೂ ಯೋಧರೊಂದಿಗೆ ದೀಪಾವಳಿ ಆಚರಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಈ ಸಂಬಂಧ ಗುರುವಾರ ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್‌ನಲ್ಲಿರುವ ಸೇನಾ ಯೋಧರನ್ನು ಭೇಟಿಯಾಗಿದ್ದಾರೆ.

ಪ್ರಧಾನಿ ಮೋದಿ ಪ್ರತಿ ವರ್ಷ ದೀಪಾವಳಿಯಂದು ದೇಶದ ಗಡಿ ಭಾಗದಲ್ಲಿರುವ ಯೋಧರನ್ನು ಭೇಟಿ ಮಾಡಿ ಅವರಿಗೆ ಸಿಹಿ ಹಂಚಿ, ಉಡುಗೊರೆಗಳನ್ನು ನೀಡಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ವಾಡಿಕೆ. ಈ ಬಾರಿಯೂ ಕಾಶ್ಮೀರ ಕಣಿವೆಯ ನೌಶೇರಾ ವಲಯದಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದರು.

ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ರೀರದ ಈ ಗಡಿ ಪ್ರದೇಶದಲ್ಲಿ ಇತ್ತೀಚೆಗೆ ಸೇನೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿಗೆ ಸಾಕ್ಷಿಯಾಗಿತ್ತು. ದೀಪಾವಳಿ ಅಂಗವಾಗಿ ಪ್ರಧಾನಿಯವರು ಭೇಟಿ ನೀಡಿರುವ ಫೋಟೊಗಳನ್ನು ಅಧಿಕೃತ ಮೂಲಗಳು ನೌಶೇರಾದ ಸೇನಾ ಪೋಸ್ಟನಲ್ಲಿ ಹಂಚಿಕೊಂಡಿವೆ.

× Chat with us