ಪಿಎಂ ಕಿಸಾನ್ ನಿಧಿಯಲ್ಲಿ 22,000 ಕೋಟಿ ರೂ. ಮುಂದಿನ ತಿಂಗಳು ಬಿಡುಗಡೆ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಥವಾ ಪಿಎಂ ಕಿಸಾನ್ ಯೋಜನೆಯ ಭಾಗವಾಗಿ ರೈತರ ಖಾತೆಗೆ 22,000 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ಬಿಡುಗಡೆ ಮಾಡಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ. ಶೀಘ್ರದಲ್ಲೇ ಬಿಡುಗಡೆ ಆಗಲಿರುವ ಹಣವು FY22ರ ಡಿಸೆಂಬರ್‌ನಿಂದ ಮಾರ್ಚ್ ತ್ರೈಮಾಸಿಕಕ್ಕೆ ಮೂರನೇ ಕಂತಾಗಿದೆ. ಇದುವರೆಗೆ ಕೇಂದ್ರವು ಈ ಯೋಜನೆಯಡಿ ರೈತ ಕುಟುಂಬಗಳಿಗೆ ಸುಮಾರು 1.57 ಲಕ್ಷ ಕೋಟಿ ರೂಪಾಯಿ ಬಿಡುಗಡೆ ಆಗಿದೆ. ವರದಿಗಳ ಪ್ರಕಾರ, 10ನೇ ಕಂತು ಡಿಸೆಂಬರ್ 15ರಿಂದ 25ರ ನಡುವೆ ಯೋಜನೆ ಅಡಿಯಲ್ಲಿ ಸರ್ಕಾರದಿಂದ ಬಿಡುಗಡೆ ಮಾಡಲಾಗುವುದು.

ಸರ್ಕಾರಿ ಮೂಲಗಳು ಮಂಗಳವಾರ ಸಿಎನ್​ಬಿಸಿ ಟಿವಿ18ಗೆ ತಿಳಿಸಿದ್ದು, ರೈತರ ಕುಟುಂಬಗಳಿಗೆ ಸಹಾಯ ಮಾಡಲು 2022ರ ಹಣಕಾಸು ವರ್ಷದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಗಾಗಿ ಕೇಂದ್ರವು ಇದುವರೆಗೆ 43,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಡಿಸೆಂಬರ್‌ನಿಂದ ಮಾರ್ಚ್ ತ್ರೈಮಾಸಿಕಕ್ಕೆ ಮೂರನೇ ಕಂತಿನ ಬಿಡುಗಡೆಯೊಂದಿಗೆ ಈ ಹಣಕಾಸು ವರ್ಷಕ್ಕೆ ನಿಗದಿಪಡಿಸಿದ 65,000 ಕೋಟಿ ರೂ. ಹೆಚ್ಚು ಹೆಚ್ಚು ರೈತರು ಯೋಜನೆಗೆ ನೋಂದಾಯಿಸಿಕೊಳ್ಳುತ್ತಿರುವುದರಿಂದ FY22ರಲ್ಲಿ ಪಿಎಂ ಕಿಸಾನ್‌ಗೆ ಇನ್ನೂ 500 ಕೋಟಿಯಿಂದ 1,000 ಕೋಟಿಗಳಷ್ಟು ಹೆಚ್ಚುವರಿಯಾಗಿ ಬೇಕಾಗಬಹುದು ಎಂದು ಅವರು ಹೇಳಿವೆ.

ಪಶ್ಚಿಮ ಬಂಗಾಳದಲ್ಲಿ ಇನ್ನೂ 15 ಲಕ್ಷ ರೈತರನ್ನು ಯೋಜನೆಗೆ ಸೇರಿಸುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ. ರಾಜ್ಯದಲ್ಲಿ ಈಗಿರುವ 35 ಲಕ್ಷ ರೈತರ ಸಂಖ್ಯೆ 50 ಲಕ್ಷಕ್ಕೆ ಏರಲಿದೆ ಎಂದು ಮೂಲಗಳು ತಿಳಿಸಿವೆ. ಸರ್ಕಾರವು ಈ ವರ್ಷ ಸುಮಾರು 11 ಕೋಟಿ ಫಲಾನುಭವಿಗಳನ್ನು ಪಿಎಂ ಕಿಸಾನ್ ಯೋಜನೆಗೆ ಸೇರಿಸಿದೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ಪ್ರಸ್ತುತ ನಿಯಮಗಳಲ್ಲಿ ಯಾವುದೇ ಬದಲಾವಣೆಯನ್ನು ತರಲು ಕೇಂದ್ರವು ಬಯಸುತ್ತಿಲ್ಲ. PM-KISAN ಯೋಜನೆಯಡಿ ರೂ. 6,000 ವಾರ್ಷಿಕ ಆರ್ಥಿಕ ಲಾಭವನ್ನು ಅರ್ಹ ಫಲಾನುಭವಿ ರೈತ ಕುಟುಂಬಗಳಿಗೆ ಒದಗಿಸಲಾಗುತ್ತದೆ. ಇದನ್ನು ಮೂರು ಸಮಾನ ನಾಲ್ಕು-ಮಾಸಿಕ ಕಂತುಗಳಲ್ಲಿ ರೂ. 2,000ರಂತೆ ಪಾವತಿಸಲಾಗುತ್ತದೆ. ಈ ಯೋಜನೆಯನ್ನು ಫೆಬ್ರವರಿ 2019ರ ಬಜೆಟ್‌ನಲ್ಲಿ ಘೋಷಿಸಲಾಯಿತು. ಮೊದಲ ಕಂತು 2018ರ ಡಿಸೆಂಬರ್- 2019 ಮಾರ್ಚ್ ಅವಧಿಗೆ ಆಗಿತ್ತು. ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.

ಈ ವರ್ಷದ ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರದ ಪಿಎಂ-ಕಿಸಾನ್ ಯೋಜನೆಯಡಿ ಸುಮಾರು 9.75 ಕೋಟಿ ಫಲಾನುಭವಿಗಳಿಗೆ ಅಂದಾಜು 19,500 ಕೋಟಿ ರೂಪಾಯಿಗಳನ್ನು ವರ್ಗಾಯಿಸಿದ್ದರು. ಪ್ರಧಾನಮಂತ್ರಿ ಅವರ ಸಮ್ಮುಖದಲ್ಲಿ ನಡೆದ ವರ್ಚುವಲ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಒಂಬತ್ತನೇ ಕಂತಿನ ಮೊದಲು ಕೇಂದ್ರ ಸರ್ಕಾರವು ಸುಮಾರು 11 ಕೋಟಿ ಫಲಾನುಭವಿಗಳಿಗೆ ಅಂದಾಜು 1.37 ಲಕ್ಷ ಕೋಟಿ ರೂಪಾಯಿಗಳನ್ನು ವಿತರಿಸಿದೆ ಎಂದು ಹೇಳಿದರು.

× Chat with us