BREAKING NEWS

ಪೆಪ್ಪರ್‌ಫ್ರೈ ಸಹ ಸಂಸ್ಥಾಪಕ ಅಂಬರೀಶ್‌ ಮೂರ್ತಿ ನಿಧನ

ಪೀಠೋಪಕರಣಗಳು ಮತ್ತು ಗೃಹಾಲಂಕಾರಕ ವಸ್ತುಗಳ ಆನ್‌ಲೈನ್‌ ಮಾರಾಟ ತಾಣ ಪೆಪ್ಪರ್‌ಫ್ರೈನ ಸಹ-ಸಂಸ್ಥಾಪಕ ಅಂಬರೀಶ್ ಮೂರ್ತಿ ನಿಧನರಾಗಿದ್ದಾರೆ. ಕಂಪನಿಯ ಇನ್ನೋರ್ವ ಸಹ-ಸಂಸ್ಥಾಪಕ ಆಶಿಶ್ ಷಾ ಅವರು ‘ಎಕ್ಸ್‌’ನಲ್ಲಿ ಈ ವಿಷಯ ತಿಳಿಸಿದ್ದಾರೆ.

ಲೇಹ್‌ನಲ್ಲಿ ಹೃದಯ ಸ್ತಂಭನದಿಂದಾಗಿ ತಮ್ಮ ಸ್ನೇಹಿತ, ಮಾರ್ಗದರ್ಶಕ, ಸಹೋದರ ನಿಧನರಾಗಿದ್ದಾರೆ ಎಂದು ಆಶಿಶ್‌ ಶಾ ತಿಳಿಸಿದ್ದಾರೆ. ಅಂಬರೀಶ್‌ ಮೂರ್ತಿ ಅವರಿಗೆ 51 ವರ್ಷ ವಯಸ್ಸಾಗಿತ್ತು. ಬೈಕ್ ಉತ್ಸಾಹಿಯಾಗಿದ್ದ ಅವರು ಮುಂಬೈನಿಂದ ಲೇಹ್‌ಗೆ ಬೈಕ್‌ನಲ್ಲಿ ಪ್ರವಾಸ ಹೋಗಿದ್ದರು. ಈ ವೇಳೆ ಅಲ್ಲೇ ಹೃದಯ ಸ್ಥಂಭನಕ್ಕೆ ಒಳಗಾಗಿ ಅಸುನೀಗಿದ್ದಾರೆ.

2011ರಲ್ಲಿ ಅವರು ಪೆಪ್ಪರ್‌ಫ್ರೈ ಅನ್ನು ಸ್ಥಾಪಿಸಿದ್ದರು. ಮತ್ತು ಇದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿದ್ದರು. “ನಿನ್ನೆ ರಾತ್ರಿ ಲೇಹ್‌ನಲ್ಲಿ ಹೃದಯ ಸ್ತಂಭನದಿಂದ ಅಂಬರೀಶ್‌ ಮೂರ್ತಿ ಅವರನ್ನು ಕಳೆದುಕೊಂಡೆ. ದಯವಿಟ್ಟು ಅವರಿಗಾಗಿ ಮತ್ತು ಅವರ ಕುಟುಂಬ ಮತ್ತು ಬಂಧುಗಳಿಗಾಗಿ ಪ್ರಾರ್ಥಿಸಿ,” ಎಂದು ಆಶಿಶ್‌ ಶಾ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಅವರ ಆತ್ಮೀಯರು, ಕಂಪನಿ ಉದ್ಯೋಗಿಗಳು ಅಂಬರೀಶ್‌ ಮೂರ್ತಿ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಲಡಾಖ್‌ ಪ್ರವಾಸಕ್ಕೆ ತೆರಳಿದ್ದ ಅಂಬರೀಶ್‌ ಮೂರ್ತಿ ಅವರು ತಮ್ಮ ಪ್ರವಾಸದ ಫೋಟೋಗಳು ಮತ್ತು ವಿಡಿಯೋಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು.

ಕ್ರಂಚ್‌ಬೇಸ್ ಪ್ರಕಾರ ಅಂಬರೀಶ್‌ ಮೂರ್ತಿ ಅವರು ಅಡೋನಿಯಾ ಹಾಸ್ಪಿಟಾಲಿಟಿ ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದರು. ಅವರು 1996ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಕೊಲ್ಕತ್ತಾದಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ (ಎಂಬಿಎ) ಸ್ನಾತಕೋತ್ತರ ಪದವಿ ಪಡೆದಿದ್ದರು.

ಉದ್ಯಮಶೀಲತೆಯ ಬಗ್ಗೆ ಆರಂಭದಿಂದಲೂ ಆಸಕ್ತರಾಗಿದ್ದ ಅಂಬರೀಶ್‌ ಮೂರ್ತಿಯವರು ಪದವಿ ಓದುವ ವೇಳೆ ಮನೆಯಲ್ಲಿ ಟ್ಯೂಷನ್ ನೀಡಲು ಪ್ರಾರಂಭಿಸಿದ್ದರು. ಅವರು ಟ್ಯೂಟರ್ಸ್ ಬ್ಯೂರೋ ಎಂಬ ಸಣ್ಣ ಉದ್ಯಮವನ್ನೂ ಸ್ಥಾಪಿಸಿದ್ದರು. ಇದು ಶಾಲಾ ವಿದ್ಯಾರ್ಥಿಗಳೊಂದಿಗೆ ಬೋಧಕರನ್ನು ಸಂಪರ್ಕಿಸುವ ವ್ಯವಸ್ಥೆಯಾಗಿತ್ತು, ಅವರು 1990ರ ದಶಕದ ಆರಂಭದಲ್ಲಿ ಎರಡು ವರ್ಷಗಳ ಕಾಲ ಈ ಉದ್ಯಮವನ್ನು ನಡೆಸಿದ್ದರು.

ನಂತರ ಅವರು ಸ್ಥಾಪಿಸಿದ್ದೇ ಪೆಪ್ಪರ್‌ಫ್ರೈ. ಇದು ಸುಮಾರು 500 ಮಿಲಿಯನ್ ಡಾಲರ್‌ (ಸುಮಾರು 4,150 ಕೋಟಿ ರೂ.) ಮೌಲ್ಯದ್ದಾಗಿದೆ. 2020ರ ಹೊತ್ತಿಗೆ ಇದು ಎಂಟು ಸುತ್ತುಗಳಲ್ಲಿ 244 ಮಿಲಿಯನ್ ಡಾಲರ್‌ (2,000 ಕೋಟಿ ರೂ.) ಹೂಡಿಕೆ ಸಂಗ್ರಹಿಸಿತ್ತು. ಕಂಪನಿಯ ಹೂಡಿಕೆದಾರರಲ್ಲಿ ಗೋಲ್ಡ್‌ಮನ್ ಸ್ಯಾಚ್ಸ್ ಮತ್ತು ಬರ್ಟೆಲ್ಸ್‌ಮನ್ ಇಂಡಿಯಾ ಇನ್ವೆಸ್ಟ್‌ಮೆಂಟ್‌ಗಳು ಸೇರಿವೆ.

andolanait

Recent Posts

ಓದುಗರ ಪತ್ರ: ಕರುನಾಡ ಹೆಮ್ಮೆ…

ಭಾರತೀಯ ಚಿತ್ರರಂಗದ ಹಲವಾರು ಭಾಷೆಗಳಲ್ಲಿ ಸಹಜ ನಟನೆಯ ಪ್ರಸದ್ಧಿ ಪಡೆದು... ಮೇರುನಟರಾಗಿ ಕಲಾಸೇವೆಗಾಗಿ ತಮನ್ನು ತಾವು ಮುಡಿಪಿಟ್ಟು ಭಾರತೀಯ ಚಿತ್ರರಂಗದ…

4 hours ago

ಓದುಗರ ಪತ್ರ: ಪಾಲಿಕೆ ಯೋಜನೆ ಸ್ವಾಗತಾರ್ಹ

ಜನನ ಹಾಗೂ ಮರಣ ಪ್ರಮಾಣ ಪತ್ರ ಪಡೆಯಲು ಜನರು ಮೈಸೂರು ಮಹಾ ನಗರ ಪಾಲಿಕೆಗೆ ಅರ್ಜಿ ಸಲ್ಲಿಸಿ ಪದೇ ಪದೇ…

4 hours ago

ಓದುಗರ ಪತ್ರ: ಯುಪಿಐ ಶುಲ್ಕ: ಚರ್ಚೆಯ ನಂತರ ಕ್ರಮ ಕೈಗೊಳ್ಳಿ

ದೇಶದಾದ್ಯಂತ ಸಣ್ಣ ಪುಟ್ಟ ವ್ಯಾಪಾರಗಳಿಂದ ಹಿಡಿದು ದೇಶದ ಬಹುದೊಡ್ಡ ವ್ಯಾಪಾರ ವಹಿವಾಟಿನವರೆಗೆ ಯುಪಿಐ ಮೂಲಕವೇ ಹಣ ಪಾವತಿಸಲು ಕೇಂದ್ರ ಸರ್ಕಾರ…

4 hours ago

ಬದಲಾದ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಬ್ರಿಕ್ಸ್ ಪಾತ್ರ

ಡಾ. ಬಸವರಾಜ್ ಇಟ್ನಾಳ ಇತ್ತೀಚೆಗೆ ಬ್ರಿಕ್ಸ್ ಶೃಂಗ ಸಭೆ ದೆಹಲಿಯಲ್ಲಿ ನಡೆಯಿತು. ಬ್ರಿಕ್ಸ್ ದೇಶಗಳ ಪರಸ್ಪರ ಸಹಕಾರ ಮತ್ತು ಸ್ಥಳೀಯ…

4 hours ago

ಬಿಹಾರದಲ್ಲಿ ಯುಸಿಸಿಗೆ ನಿತೀಶ್, ಚಿರಾಗ್ ಪಕ್ಷಗಳ ಭಿನ್ನರಾಗ

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌  ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ…

5 hours ago

ಕೆಡ್ಲಿ ಬಾಳ್ಲಿ ನಮ್‌ ಬದ್ಕ್‌ ನಾಮ್‌ ನೋಡ್ಬೇಕು ಕಣ ಕುಸೋ

ಚಂದ್ರಶೇಖರ್ ಮೂರ್ತಿ ಕೆ.ಎಸ್. ಊರಿಂದ ಊರಿಗೆ ಬಸ್ ಹತ್ತಿ ಇಳಿದು ದುಡಿಮೆ ಮಾಡೋದು ಇದೆಯಲ್ಲ ಅದು ಅನುಭವಿಸುವ ಊರು ಬಿಟ್ಟ…

5 hours ago