BREAKING NEWS

ಸಂಸತ್‌ ಭದ್ರತಾಲೋಪ: ಆರೋಪಿ ಡೈರಿಯಲ್ಲಿ ಇದ್ದದ್ದೇನು?

ನವದೆಹಲಿ: ಎರಡು ದಿನಗಳ ಹಿಂದೆ ಸಂಸತ್‌ ಕಲಾಪದ ವೇಳೆ ಗ್ಯಾಲರಿಗೆ ನುಗ್ಗಿದ್ದಲ್ಲದೇ ಕಲರ್‌ ಗ್ಯಾಸ್‌ ಸಿಡಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ 6 ಆರೋಪಿಗಳನ್ನು ಬಂಧಿಸಿಲಾಗಿದೆ. ಇವರಲ್ಲಿ ಸಾಗರ್‌ ಶರ್ಮ ಎಂಬಾತನ ಡೈರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ್‌ ಮನೆಯನ್ನು ಶೋಧಿಸಿದ ಪೊಲೀಸರಿಗೆ ಆತನ ಪರ್ಸನಲ್‌ ಡೈರಿ ಸಿಕ್ಕಿದೆ. ಈ ಡೈರಿಯಲ್ಲಿ 30ಮಂದಿಯ ಹೆಸರು ಹಾಗೂ ಫೋನ್‌ ನಂಬರ್‌ ಪತ್ತೆಯಾಗಿದೆ.

ಸದ್ಯ ಆ ಡೈರಿಯಲ್ಲಿ ಸಿಕ್ಕಿರುವ ಹೆಸರು ಹಾಗೂ ಫೋನ್‌ ನಂಬರ್‌ಗಳನ್ನು ಹಿಡಿದು ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ನಾನು ದೇಶಕ್ಕಾಗಿ ದುಡಿಯುತ್ತಿದ್ದೇನೆ: ಪೊಲೀಸರಿಗೆ ಸಿಕ್ಕಿರುವ ಸಾಗರ್‌ ಡೈರಿಯಲ್ಲಿ ಒಂದಿಷ್ಟು ಟಿಪ್ಪಣಿಗಳು ಕಂಡುಬಂದಿದೆ. ಅವುಗಳಲ್ಲಿ ನಾನು ದೇಶಕ್ಕಾಗಿ ಪ್ರಾಮಾಣಿಕಾವಾಗಿ ದುಡಿಯುತ್ತಿದ್ದೇನೆ. ನನ್ನ ಜೊತೆ ದೇಶಕ್ಕಾಗಿ ಪ್ರಾಮಾಣಿಕವಾಗಿ ದುಡಿಯುವವರು ಬೇಕು ಎಂದು ಬರೆದಿದ್ದಾನೆ ಎಂದು ತಿಳಿದು ಬಂದಿದೆ.

ಅಷ್ಟೇ ಅಲ್ಲದೇ ದೇಶಕ್ಕೆ ಸಂಬಂಧಪಟ್ಟಂತೆ ಅನೇಕ ಟಿಪ್ಪಣಿಗಳು, ದೇಶಪ್ರೇಮ ಗೀತೆಗಳು, ಕವನಗಳು ಬರೆದರುವುದು ಕಂಡುಬಂದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

andolanait

Recent Posts

ಕೊಡಗು ಜಿಲ್ಲೆಯಲ್ಲಿ ಮನೆ ಗಣತಿ ಕಾರ್ಯ ಚುರುಕು

ನವೀನ್ ಡಿಸೋಜ ಜಿಲ್ಲೆಯಲ್ಲಿ ಸು.೧೭೪,೧೧೪ ಕುಟುಂಬಗಳು, ಗಣತಿ ಕಾರ್ಯಕ್ಕೆ ಗುರುತು, ೭,೩೭೯ ಕುಟುಂಬಗಳಿಂದ ಸ್ವಯಂ ಗಣತಿ ಮಡಿಕೇರಿ: ನಮ್ಮ ಗಣತಿ,…

3 hours ago

ಏರುತ್ತಿರುವ ತಾಪಮಾನ; ತಂಪು ಪಾನೀಯಗಳಿಗೆ ಮೊರೆ

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆಯಲ್ಲಿ ೩೫ರಿಂದ ೪೦ ಡಿಗ್ರಿ ಉಷ್ಣಾಂಶ, ಬಿಸಿಗಾಳಿಗೆ ಹೈರಾಣಾದ ಜನರು ಗುಂಡ್ಲುಪೇಟೆ: ಬೇಸಿಗೆಯ ಬಿಸಿಲಿನ ತಾಪ ದಿನೇದಿನೇ…

3 hours ago

ಆಗ ಟೈಲರ್ ಕಾಲ, ಈಗ ಆನ್ ಲೈನ್ ಕಾಲ…

ಮಧುಕರ ಮಳವಳ್ಳಿ (ಈ ಲೇಖನಕ್ಕೆ ಕೃತಕ ಬುದ್ಧಿಮತ್ತೆಯ ಚಿತ್ರ ಬಳಸಲಾಗಿದೆ) ಹಬ್ಬಕ್ಕೆ ಯಾರಿಗೆ ತಾನೆ ಹೊಸ ಬಟ್ಟೆ ಇಷ್ಟ ಇಲ್ಲ…

3 hours ago

ಸೈಕಲ್ಲು, ಸಿರೀಂದ್ರ ಮತ್ತು ನನ್ನ ನಟರಾಜ ಸರ್ವೀಸು

ಭಾರತಿ ಬಿ.ವಿ. ಅವನೆದುರು ಮಾನ ತೆಗೆದ ಸೈಕಲ್ಲಿನ ಸಹವಾಸ ನನಗೆ ಮತ್ತೆ ಬೇಕೆನ್ನಿಸಲಿಲ್ಲ ನಾವೆಲ್ಲ ‘ನಟರಾಜ ಸರ್ವೀಸ್’ನಲ್ಲೇ ಬದುಕು ಕಳೆದವರು.…

3 hours ago

ತರುಣ ತಲೆಮಾರಿನ ಕೈಯಲ್ಲಿ ನೆರೆಯ ನೇಪಾಳದ ಚುಕ್ಕಾಣಿ…

ಶುಭಾ ಖಟಾವಕರ ಮ್ಹೆತ್ರಸ್ ನೇಪಾಳದ ಕನಸುಗಣ್ಣಿನ ಯುವಜನಾಂಗದ ಈ ಹೊಸ ಸರ್ಕಾರ ಈಗ ಇಟ್ಟಿರುವ ಹೆಜ್ಜೆಗಳು ಯಶಸ್ವಿಯಾದರೆ ದಕ್ಷಿಣ ಏಷ್ಯಾದಲ್ಲಿ…

3 hours ago

ದೇವನೂರಿಗೆ ಆಗಮಿಸಿದ ಪಂಪ

ಪಂಪ ಪ್ರಶಸ್ತಿ ಪಡೆಯುತ್ತಿರುವ ಮಹಾದೇವರಿಗೆ ಎಲ್ಲಾ ಮನೆಗಳ ಜೋತಮ್ಮದೀರು ಹರಸಲಿ ರಾಜೇಂದ್ರ ಚೆನ್ನಿ ೧ ತಮ್ಮ ಒಟ್ಟು ಬರಹಗಳು ಇಷ್ಟು ಕಡಿಮೆ…

3 hours ago