ಮೈಸೂರು: ಅರಮನೆಯಲ್ಲಿ ಬಣ್ಣ ಬಳಿಯುವಾಗ ಕೆಳಕ್ಕೆ ಬಿದ್ದ ಕಾರ್ಮಿಕ!

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಸಿದ್ಧತೆ ಕಾರ್ಯ ನಡೆಯುತ್ತಿದೆ. ಬಣ್ಣ ಬಳಿಯುವಾಗ (ಪೇಯಿಂಟ್‌) ವ್ಯಕ್ತಿಯೊಬ್ಬ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.

ಗೌಸಿಯಾನಗರದ ನಿವಾಸಿ ಆಪ್ತಾಬ್ ಗಾಯಾಗೊಂಡ ವ್ಯಕ್ತಿ ಎನ್ನಲಾಗಿದೆ.

ಅರಮನೆಯ ಜಯಮಾರ್ತಾಂಡ ಗೇಟ್‌ನ ಗೋಪುರದಲ್ಲಿ ಬಣ್ಣ ಬಳಿಯುತ್ತಿದ್ದಾಗ ಕಾರ್ಮಿಕ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

× Chat with us