ಸರ್ಕಾರಿ ಪ್ರೌಢ ಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶ

ಮೈಸೂರು: ಕೋವಿಡ್-19 ಭೀತಿಯ ನಡುವೆಯೂ 2020-21ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ 3,473 ಅತಿಥಿ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ನೇಮಕವಾದ ಅತಿಥಿ ಶಿಕ್ಷಕರಿಗೆ ಗೌರವ ಸಂಭಾವನೆಯನ್ನು ಫೆ.21ರಿಂದ ಮೇ 21ರ ವರೆಗೆ ನೀಡಲಾಗುತ್ತದೆ. ಪ್ರತಿ ಶಿಕ್ಷಕರಿಗೆ ತಿಂಗಳಿಗೆ 8 ಸಾವಿರ ರೂ. ಅನ್ನು ನಾಲ್ಕು ತಿಂಗಳವರೆಗೆ ನೀಡಲಾಗುತ್ತದೆ. ಮೈಸೂರು ಜಿಲ್ಲೆಯಲ್ಲಿ 70, ಚಾಮರಾಜನಗರ- 62, ಮಂಡ್ಯ- 174, ಕೊಡಗು- 21 ಅತಿಥಿ ಶಿಕ್ಷಕರ ನೇಮಕಾತಿಗೆ ಆಯಾ ಡಿಡಿಪಿಐಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಆಯ್ಕೆ ಮಾಡಿಕೊಂಡ ಅತಿಥಿ ಶಿಕ್ಷಕರ ತಾಲ್ಲೂಕು/ ವಲಯವಾರು ವಿವರಗಳನ್ನು ಡಿಡಿಪಿಐ ಕ್ರೋಢೀಕರಿಸಿ, ದೃಢೀಕರಿಸಿ, ನಮೂನೆಯಲ್ಲಿ ಫೆ.25ರೊಳಗೆ ಸ್ಪೀಡ್ ಪೋಸ್ಟ್ ಮುಖಾಂತರ ನಿರ್ದೇಶಕರು, ಆಯುಕ್ತರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ನೃಪತುಂಗ ರಸ್ತೆ, ಬೆಂಗಳೂರು. ಇಲ್ಲಿಗೆ ಕಳುಹಿಸುವುದು. ವರದಿಯ ಸ್ಕ್ಯಾನ್ ಪ್ರತಿಯನ್ನು ಪ್ರೌಢ ಶಾಲೆಗಳಿಗೆ ಸಂಬಂಧಿಸಿದ ಇಮೇಲ್- est4cpibng@gmail.com ಮುಖಾಂತರ ಕಚೇರಿಗೆ ಸಲ್ಲಿಸುವಂತೆ ಆದೇಶ ಪ್ರತಿಯಲ್ಲಿ ತಿಳಿಸಲಾಗಿದೆ.

× Chat with us