`ಮತಾಂತರ ನಿಷೇಧ ಮಸೂದೆ ಪ್ರತಿʼ ಹರಿದು ಹಾಕಿ ವಿರೋಧ!

ಮೈಸೂರು: ಕ್ರೈಸ್ತ ಸಮುದಾಯಕ್ಕೆ ಮತಾಂತರದ ಹೆಸರಿನಲ್ಲಿ ಅನಗತ್ಯ ಕಿರುಕುಳ ಕೊಡಲು ರಾಜ್ಯಸರ್ಕಾರ ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತರುವ ಕೆಲಸ ಮಾಡುತ್ತಿದ್ದು, ಸಂವಿಧಾನಕ್ಕೆ ವಿರುದ್ಧವಾಗಿ ಬಿಜೆಪಿ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.

ಮೈಸೂರು ನಗರ ಕಾಂಗ್ರೆಸ್ ಭವನದಲ್ಲಿಂದು  ಮತಾಂತರ ನಿಷೇಧ ಕಾಯಿದೆ ಮಸೂದೆ ಪ್ರತಿ ಹರಿದು ಹಾಕಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಗುಜರಾತ್ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯಿದಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅದೇ ರೀತಿ ಇತರ ರಾಜ್ಯಗಳಲ್ಲಿ ಮಸೂದೆ ಪಾಸಾಗಿದ್ದರೂ ಜಾರಿಯಾಗಲು ಕೋರ್ಟ್ ಅವಕಾಶ ಕೊಟ್ಟಿಲ್ಲ. ಹೀಗಿದ್ದರೂ, ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಕಳ್ಳರ ಹಾಗೆ ಕಾಯ್ದೆ ತರಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಸಂವಿಧಾನದ 25ನೇ ವಿಧಿ ಸ್ವಇಚ್ಛೆಯಿಂದ ಮತ ಸ್ವೀಕಾರ ಹಾಗೂ ಬಲವಂತದ ಮತಾಂತರಕ್ಕೆ ನಿಷೇಧ ಹೇರಿರುವಾಗ ಮತ್ತೆ ಹೊಸದಾಗಿ ಕಾಯ್ದೆ ಯಾಕೆ? ಬಿಜೆಪಿ ಜನಸಾಮಾನ್ಯರಿಗೆ ಕಿರುಕುಳ ನೀಡಲು ಕ್ರೈಸ್ತರಿಗೆ ತೊಂದರೆ ಕೊಡುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಕ್ರೈಸ್ತರು ಶೇ.೩ರಷ್ಟು ಇತ್ತು.ಈಗ ಶೇ.1.87ರಷ್ಟು ಇದ್ದಾರೆ. ಹಾಗಿದ್ದರೆ, ಮತಾಂತರ ಎಲ್ಲಿ ನಡೆಯುತ್ತಿದೆ ಎಂದು ಪ್ರಶ್ನಿಸಿದರು.

× Chat with us