BREAKING NEWS

ಚಂದ್ರಯಾನ-3ರ ಉಡಾವಣಾ ಪ್ಯಾಡ್‌ ನಿರ್ಮಿಸಿದ್ದ ಇಂಜಿನಿಯರ್‌ಗಳಿಗೆ ಒಂದು ವರ್ಷದ ವೇತನ ಬಾಕಿ: ವರದಿ

ನವದೆಹಲಿ: ಚಂದ್ರಾನ್ವೇಷಣೆಯ ಭಾಗವಾಗಿ ಜುಲೈ 14ರಂದು ನಡೆದ ಐತಿಹಾಸಿಕ ಚಂದ್ರಯಾನ-3 ಉಡಾವಣೆಯ ಯಶಸ್ಸಿಗೆ ಇಡೀ ಜಗತ್ತೇ ಸಾಕ್ಷಿಯಾಗಿರುವ ಹೊತ್ತಿನಲ್ಲಿ, ಈ ಯೋಜನೆಗಾಗಿ ಉಡಾವಣಾ ವೇದಿಕೆ ನಿರ್ಮಿಸಿದ ಇಂಜಿನಿಯರ್‌ಗಳಿಗೆ ಕಳೆದ ಒಂದು ವರ್ಷದಿಂದ ವೇತನವನ್ನೇ ಪಾವತಿಸಿಲ್ಲ ಎಂದು ವರದಿಯಾಗಿದೆ.

ರಾಂಚಿಯ ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಜಿನಿಯರ್‌ಗಳಿಗೆ ಕಳೆದ 17 ತಿಂಗಳಿಂದ ವೇತನ ಪಾವತಿಯಾಗಿಲ್ಲ ಎಂದು ಐಎಎನ್‌ಎಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಂಬಳ ಪಾವತಿಯಾಗದ ಸಮಸ್ಯೆಯ ಹೊರತಾಗಿಯೂ ನಿಗದಿತ ಚಂದ್ರಯಾನ-3 ಉಡಾವಣೆಯ ದಿನಾಂಕಕ್ಕೂ ಮುಂಚಿತವಾಗಿಯೇ ಡಿಸೆಂಬರ್, 2022ರಲ್ಲಿ ಈ ಸಂಸ್ಥೆಯು ಸಂಚಾರಿ ಉಡಾವಣಾ ವೇದಿಕೆ ಹಾಗೂ ಇನ್ನಿತರ ಅತ್ಯಗತ್ಯ ಮತ್ತು ಸಂಕೀರ್ಣ ಸಾಧನಗಳನ್ನು ಪೂರೈಸಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಹೆವಿ ಎಂಜಿನಿಯರಿಂಗ್ ಕಾರ್ಪೊರೇಷನ್ ಭಾರಿ ಕೈಗಾರಿಕಾ ಸಚಿವಾಲಯದ ಅಧೀನದಲ್ಲಿರುವ ಸಾರ್ವಜನಿಕ ಸಂಸ್ಥೆಯಾಗಿದೆ. ಈ ಸಂಸ್ಥೆಯು ರಾಂಚಿಯ ಧುವ್ರಾದಲ್ಲಿದೆ. ಕಳೆದ ಒಂದು ವರ್ಷದಿಂದ ಈ ಸಂಸ್ಥೆಯ ಸಿಬ್ಬಂದಿಗಳಿಗೆ ವೇತನ ಪಾವತಿಯಾಗಿಲ್ಲ ಎಂದು ಹಲವಾರು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಈ ವರ್ಷದ ಮೇ ತಿಂಗಳಲ್ಲಿ ಫ್ರಂಟ್‌ ಲೈನ್‌ ಪತ್ರಿಕೆಯು, ಈ ಸಂಸ್ಥೆಯ 2,700 ನೌಕರರು ಹಾಗೂ 450 ಅಧಿಕಾರಿಗಳಿಗೆ ಕಳೆದ 14 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂದು ವರದಿ ಮಾಡಿತ್ತು.

ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಐಎಎನ್‌ಎಸ್‌ ಸುದ್ದಿ ಸಂಸ್ಥೆಯು ಈ ಸಂಸ್ಥೆಯ ಅಧಿಕಾರಿಗಳು ವರ್ಷಪೂರ ವೇತನ ಸ್ವೀಕರಿಸಿಲ್ಲ ಹಾಗೂ ನೌಕರರಿಗೆ ಕಳೆದ ಎಂಟು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂದು ವರದಿ ಮಾಡಿತ್ತು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ರಕ್ಷಣಾ ಸಚಿವಾಲಯ, ರೈಲ್ವೆ, ಕೋಲ್ ಇಂಡಿಯಾ ಹಾಗೂ ಉಕ್ಕು ವಲಯಗಳಿಂದ ರೂ. 1,500 ಮೌಲ್ಯದ ಕಾರ್ಯಾದೇಶವಿದ್ದರೂ, ನಿಧಿಯ ಕೊರತೆಯಿಂದಾಗಿ ಈ ಕಾರ್ಯಾದೇಶದ ಶೇ. 80ರಷ್ಟು ಕೆಲಸಗಳು ಇನ್ನೂ ಬಾಕಿ ಉಳಿದಿವೆ ಎಂದು ವರದಿಯಲ್ಲಿ ಹೇಳಲಾಗಿತ್ತು.

ಚಂದ್ರಯಾನ-3ರ ಯಶಸ್ವಿ ಉಡಾವಣೆಯನ್ನು ಸಂಭ್ರಮಿಸಿದ ತಂತ್ರಜ್ಞರ ಪೈಕಿ ಒಬ್ಬರಾಗಿದ್ದ ಸುಭಾಶ್‌ ಚಂದ್ರ, “ಹೆವಿ ಎಂಜಿನಿಯರಿಂಗ್ ಕಾರ್ಪೊರೇಷನ್‌ನ ಸಿಬ್ಬಂದಿಗಳು ತಮ್ಮ ತಲೆಯನ್ನು ಮತ್ತೆ ಹೆಮ್ಮೆಯಿಂದ ಮೇಲೆತ್ತಿದ್ದಾರೆ. ದೇಶದ ಈ ಮಹತ್ವದ ಯೋಜನೆಯಲ್ಲಿ ನಾವೂ ಪಾಲುದಾರರಾಗಿರುವುದಕ್ಕೆ ನಮಗೆ ಖುಶಿಯಾಗುತ್ತಿದೆ” ಎಂದು ಹೇಳಿದ್ದಾರೆ.

ಹೆವಿ ಎಂಜಿನಿಯರಿಂಗ್ ಕಾರ್ಪೊರೇಷನ್ ತನಗೆ ರೂ. 1,000 ಕೋಟಿ ಉತ್ಪಾದನಾ ಬಂಡವಾಳ ಒದಗಿಸುವಂತೆ ಭಾರಿ ಕೈಗಾರಿಕೆಗಳ ಸಚಿವಾಲಯಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಕೇಂದ್ರ ಸರ್ಕಾರ ಯಾವುದೇ ನೆರವನ್ನು ಒದಗಿಸಲು ಸಾಧ್ಯವಿಲ್ಲ ಎಂದು ಸಚಿವಾಲಯವು ಪ್ರತ್ಯುತ್ತರ ನೀಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಐಎಎನ್‌ಎಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದು ಮಾತ್ರವಲ್ಲದೆ, ಕಳೆದ ಎರಡೂವರೆ ವರ್ಷಗಳಲ್ಲಿ ಹೆವಿ ಎಂಜಿನಿಯರಿಂಗ್ ಕಾರ್ಪೊರೇಷನ್ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಖಾಯಂ ನೇಮಕಾತಿಯನ್ನೇ ಮಾಡಿಲ್ಲ. ಚಂದ್ರಯಾನ-3 ಯೋಜನೆಯ ನಿರ್ಮಾಣ ವೆಚ್ಚವು ಸುಮಾರು ರೂ. 600 ಕೋಟಿ ಆಗಿದೆ.

andolanait

Recent Posts

ತಿರುವಿನಲ್ಲಿ ಉರುಳಿಬಿದ್ದ ಲಾರಿ: ತಪ್ಪಿದ ಭಾರೀ ಅನಾಹುತ

ಕೊಡಗು: ಕೊಡಗು ಜಿಲ್ಲೆ ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಶನಿವಾರಸಂತೆ–ಅರಕಲಗೂಡು ರಸ್ತೆಯ ಗುಡುಗಳಲೆ ತಿರುವಿನಲ್ಲಿ ಘಟನೆ…

8 hours ago

ದುಬಾರೆ ಆನೆ ಶಿಬಿರದಲ್ಲಿ19 ವರ್ಷದ ಗಂಡಾನೆ ಸಾವು

ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ…

9 hours ago

ಪ್ರೀತಿಗೆ ನಿರಾಕರಣೆ: ಮೈಸೂರಿನಲ್ಲಿ ಬೆಚ್ಚಿಬೀಳಿಸಿದ ಒನ್‌ ಸೈಡ್‌ ಲವ್‌ ಕೃತ್ಯ

ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…

10 hours ago

ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಶಿವಕುಮಾರ್ ಅರೆಸ್ಟ್​!

ಮಂಡ್ಯ: ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…

12 hours ago

ಭಾರೀ ಮಳೆಗೆ ರೈತರ ಬೆಳೆ ನಾಶ: ಲಕ್ಷಾಂತರ ರೂ. ನಷ್ಟ, ಮನೆ ಗೋಡೆ ಕುಸಿತ

ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…

12 hours ago

ಸ್ಕೂಲ್ ಬಸ್‌ ಹರಿದು ಒಂದೂವರೆ ವರ್ಷದ ಮಗು ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…

13 hours ago