ನವದೆಹಲಿ: ಚಂದ್ರಾನ್ವೇಷಣೆಯ ಭಾಗವಾಗಿ ಜುಲೈ 14ರಂದು ನಡೆದ ಐತಿಹಾಸಿಕ ಚಂದ್ರಯಾನ-3 ಉಡಾವಣೆಯ ಯಶಸ್ಸಿಗೆ ಇಡೀ ಜಗತ್ತೇ ಸಾಕ್ಷಿಯಾಗಿರುವ ಹೊತ್ತಿನಲ್ಲಿ, ಈ ಯೋಜನೆಗಾಗಿ ಉಡಾವಣಾ ವೇದಿಕೆ ನಿರ್ಮಿಸಿದ ಇಂಜಿನಿಯರ್‌ಗಳಿಗೆ ಕಳೆದ ಒಂದು ವರ್ಷದಿಂದ ವೇತನವನ್ನೇ ಪಾವತಿಸಿಲ್ಲ ಎಂದು ವರದಿಯಾಗಿದೆ.
ರಾಂಚಿಯ ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಜಿನಿಯರ್‌ಗಳಿಗೆ ಕಳೆದ 17 ತಿಂಗಳಿಂದ ವೇತನ ಪಾವತಿಯಾಗಿಲ್ಲ ಎಂದು ಐಎಎನ್‌ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಂಬಳ ಪಾವತಿಯಾಗದ ಸಮಸ್ಯೆಯ ಹೊರತಾಗಿಯೂ ನಿಗದಿತ ಚಂದ್ರಯಾನ-3 ಉಡಾವಣೆಯ ದಿನಾಂಕಕ್ಕೂ ಮುಂಚಿತವಾಗಿಯೇ ಡಿಸೆಂಬರ್, 2022ರಲ್ಲಿ ಈ ಸಂಸ್ಥೆಯು ಸಂಚಾರಿ ಉಡಾವಣಾ ವೇದಿಕೆ ಹಾಗೂ ಇನ್ನಿತರ ಅತ್ಯಗತ್ಯ ಮತ್ತು ಸಂಕೀರ್ಣ ಸಾಧನಗಳನ್ನು ಪೂರೈಸಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
ಹೆವಿ ಎಂಜಿನಿಯರಿಂಗ್ ಕಾರ್ಪೊರೇಷನ್ ಭಾರಿ ಕೈಗಾರಿಕಾ ಸಚಿವಾಲಯದ ಅಧೀನದಲ್ಲಿರುವ ಸಾರ್ವಜನಿಕ ಸಂಸ್ಥೆಯಾಗಿದೆ. ಈ ಸಂಸ್ಥೆಯು ರಾಂಚಿಯ ಧುವ್ರಾದಲ್ಲಿದೆ. ಕಳೆದ ಒಂದು ವರ್ಷದಿಂದ ಈ ಸಂಸ್ಥೆಯ ಸಿಬ್ಬಂದಿಗಳಿಗೆ ವೇತನ ಪಾವತಿಯಾಗಿಲ್ಲ ಎಂದು ಹಲವಾರು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಈ ವರ್ಷದ ಮೇ ತಿಂಗಳಲ್ಲಿ ಫ್ರಂಟ್ ಲೈನ್ ಪತ್ರಿಕೆಯು, ಈ ಸಂಸ್ಥೆಯ 2,700 ನೌಕರರು ಹಾಗೂ 450 ಅಧಿಕಾರಿಗಳಿಗೆ ಕಳೆದ 14 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂದು ವರದಿ ಮಾಡಿತ್ತು.
ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಐಎಎನ್‌ಎಸ್ ಸುದ್ದಿ ಸಂಸ್ಥೆಯು ಈ ಸಂಸ್ಥೆಯ ಅಧಿಕಾರಿಗಳು ವರ್ಷಪೂರ ವೇತನ ಸ್ವೀಕರಿಸಿಲ್ಲ ಹಾಗೂ ನೌಕರರಿಗೆ ಕಳೆದ ಎಂಟು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂದು ವರದಿ ಮಾಡಿತ್ತು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ರಕ್ಷಣಾ ಸಚಿವಾಲಯ, ರೈಲ್ವೆ, ಕೋಲ್ ಇಂಡಿಯಾ ಹಾಗೂ ಉಕ್ಕು ವಲಯಗಳಿಂದ ರೂ. 1,500 ಮೌಲ್ಯದ ಕಾರ್ಯಾದೇಶವಿದ್ದರೂ, ನಿಧಿಯ ಕೊರತೆಯಿಂದಾಗಿ ಈ ಕಾರ್ಯಾದೇಶದ ಶೇ. 80ರಷ್ಟು ಕೆಲಸಗಳು ಇನ್ನೂ ಬಾಕಿ ಉಳಿದಿವೆ ಎಂದು ವರದಿಯಲ್ಲಿ ಹೇಳಲಾಗಿತ್ತು.
ಚಂದ್ರಯಾನ-3ರ ಯಶಸ್ವಿ ಉಡಾವಣೆಯನ್ನು ಸಂಭ್ರಮಿಸಿದ ತಂತ್ರಜ್ಞರ ಪೈಕಿ ಒಬ್ಬರಾಗಿದ್ದ ಸುಭಾಶ್ ಚಂದ್ರ, “ಹೆವಿ ಎಂಜಿನಿಯರಿಂಗ್ ಕಾರ್ಪೊರೇಷನ್‌ನ ಸಿಬ್ಬಂದಿಗಳು ತಮ್ಮ ತಲೆಯನ್ನು ಮತ್ತೆ ಹೆಮ್ಮೆಯಿಂದ ಮೇಲೆತ್ತಿದ್ದಾರೆ. ದೇಶದ ಈ ಮಹತ್ವದ ಯೋಜನೆಯಲ್ಲಿ ನಾವೂ ಪಾಲುದಾರರಾಗಿರುವುದಕ್ಕೆ ನಮಗೆ ಖುಶಿಯಾಗುತ್ತಿದೆ” ಎಂದು ಹೇಳಿದ್ದಾರೆ.
ಹೆವಿ ಎಂಜಿನಿಯರಿಂಗ್ ಕಾರ್ಪೊರೇಷನ್ ತನಗೆ ರೂ. 1,000 ಕೋಟಿ ಉತ್ಪಾದನಾ ಬಂಡವಾಳ ಒದಗಿಸುವಂತೆ ಭಾರಿ ಕೈಗಾರಿಕೆಗಳ ಸಚಿವಾಲಯಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಕೇಂದ್ರ ಸರ್ಕಾರ ಯಾವುದೇ ನೆರವನ್ನು ಒದಗಿಸಲು ಸಾಧ್ಯವಿಲ್ಲ ಎಂದು ಸಚಿವಾಲಯವು ಪ್ರತ್ಯುತ್ತರ ನೀಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಐಎಎನ್‌ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದು ಮಾತ್ರವಲ್ಲದೆ, ಕಳೆದ ಎರಡೂವರೆ ವರ್ಷಗಳಲ್ಲಿ ಹೆವಿ ಎಂಜಿನಿಯರಿಂಗ್ ಕಾರ್ಪೊರೇಷನ್ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಖಾಯಂ ನೇಮಕಾತಿಯನ್ನೇ ಮಾಡಿಲ್ಲ. ಚಂದ್ರಯಾನ-3 ಯೋಜನೆಯ ನಿರ್ಮಾಣ ವೆಚ್ಚವು ಸುಮಾರು ರೂ. 600 ಕೋಟಿ ಆಗಿದೆ.
ಹೊಸದಿಲ್ಲಿ: ನಾನು ಮನುಷ್ಯ, ದೇವರಲ್ಲ ಹೀಗಾಗಿ ತಪ್ಪುಗಳನ್ನು ಮಾಡಿರಬಹುದು. ಆದರೆ, ಕೆಟ್ಟ ಉದ್ದೇಶದಿಂದ ತಪ್ಪುಗಳನ್ನು ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ…
ಹೊಸದಿಲ್ಲಿ: ಯುವ ಉದ್ಯಮಿ ಜೆರೋಧಾ ಮುಖ್ಯಸ್ಥ ನಿಖಿಲ್ ಕಾಮತ್ ಅವರೊಂದಿಗೆ ತಮ್ಮ ಮೊದಲ ಪಾಡ್‌ಕ್ಯಾಸ್ಟ್ ನಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ…
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಪ್ರತಿಯೊಂದಕ್ಕೆ ರೇಟ್ ಕಾರ್ಡ್ ಫಿಕ್ಸ್ ಆಗಿದೆ. ಕಂದಾಯ ಇಲಾಖೆಯಲ್ಲಿ ಎಲ್ಲಾ ಪೋಸ್ಟ್ ಗಳಿಗೂ ರೇಟ್…
ಸಾಲಕ್ಕೆ ಹೆದರಿ ಅಪ್ಪ ಅಮ್ಮ ನನ್ನನ್ನ ಬಿಟ್ಟು ಹೋಗಿದ್ದಾರೆ: ಗ್ರಾಮದ ಯುವಕನ ಅಳಲು ಚಾಮರಾಜನಗರ: ಇತ್ತೀಚೆಗೆ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್…
ಬೆಂಗಳೂರು: ಮೈಸೂರು ಸಮಗ್ರ ಅಭಿವೃದ್ಧಿಯ ಮುನ್ನೋಟ ಕಾರ್ಯಕ್ರಮದಲ್ಲಿ ಮುಡಾದ ಬಡಾವಣೆಗಳ ಬಗೆಗಿನ ಅವ್ಯವಸ್ಥೆಯ ಕುರಿತು ಎಲ್ಲಾ ಪಕ್ಷದ ಶಾಸಕರನ್ನು ಪ್ರಶ್ನಿಸಿ…
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಲಾಖೆ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಅಂತಿಮ…