ನವದೆಹಲಿ : ಚಂದ್ರಯಾನ-3 ಮಿಷನ್ ಅಂಗವಾಗಿ ಆಗಸ್ಟ್ 23ರಂದು ಚಂದಿರನ ಅಂಗಳದ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಕಾಲಿಟ್ಟ ಹಲವು ದಿನಗಳ ನಂತರ ವಿಕ್ರಮ್ ಮತ್ತೊಮ್ಮೆ ಚಂದ್ರನ ಮೇಲ್ಮೈಯಲ್ಲಿ “ಸಾಫ್ಟ್ ಲ್ಯಾಂಡ್” ಆಗಿದೆ ಎಂದು ಇಸ್ರೋ ಇಂದು ಹೇಳಿದೆ.
“ವಿಕ್ರಮ್ ಲ್ಯಾಂಡರ್ ಚಂದ್ರಯಾನ-3 ಮಿಷನ್ ಉದ್ದೇಶಗಳನ್ನು ಮೀರಿದೆ ಹಾಗೂ ಯಶಸ್ವಿಯಾಗಿ “ಹಾಪ್ ಪ್ರಯೋಗವನ್ನು” ಪೂರ್ಣಗೊಳಿಸಿದೆ,” ಎಂದು ಇಸ್ರೋ ಹೇಳಿದೆ.
“ಆದೇಶದ ಮೇರೆಗೆ ಅದರ ಇಂಜಿನ್‌ಗಳು ಆರಂಭಗೊಂಡು ಅದು 40 ಸೆಂ.ಮೀ ಮೇಲಕ್ಕೆ ಹೋಗಿ ನಿರೀಕ್ಷೆಯಂತೆ ಸುರಕ್ಷಿತವಾಗಿ 30-40 ಸೆಂ.ಮೀ ದೂರದಲ್ಲಿ ಲ್ಯಾಂಡ್ ಆಗಿದೆ,” ಎಂದು ಸಂಸ್ಥೆ ಮಾಹಿತಿ ನೀಡಿದೆ.
“ಈ ಸಾಧನೆಯು ಭವಿಷ್ಯದ ಯೋಜನೆಗಳಿಗೆ ಮತ್ತು ಮಾನವ ಮಿಷನ್‌ಗಳಿಗೆ ಪ್ರೇರಣೆಯಾಗಿದೆ,” ಎಂದು ಇಸ್ರೋ ಹೇಳಿದೆ.
ಕಳೆದ ವಾರ ಚಂದ್ರಯಾನ-3 ಮಿಷನ್‌ನ ಪ್ರಜ್ಞಾನ ರೋವರ್ ಅನ್ನು”ಸ್ಲೀಪ್ ಮೋಡ್”ನಲ್ಲಿರಿಸಲಾಯಿತು ಆದರೆ ಅದರ ಬ್ಯಾಟರಿಗಳು ಚಾರ್ಜ್ ಆಗುತ್ತಿವೆ ಹಾಗೂ ರಿಸೀವರ್ ಆನ್ ಆಗಿದೆ ಎಂದು ಇಸ್ರೋ ಹೇಳಿದೆ.
ಲಕ್ಷಾಂತರ ರೂ. ಫಸಲು ನಾಶವಾಗುತ್ತಿದೆ ಎಂದು ರೈತರ ಅಳಲು; ಸೂಕ್ತ ಕ್ರಮಕ್ಕೆ ಅರಣ್ಯ ಇಲಾಖೆಗೆ ಆಗ್ರಹ ಹನೂರು: ತಾಲ್ಲೂಕಿನ ಕಾವೇರಿ…
ಹನೂರು: ಉಡುತೊರೆ ಹಳ್ಳ ಜಲಾಶಯದಿಂದ ರೈತರ ಜಮೀನುಗಳಿಗೆ ನೀರು ಹರಿಸಲು ನಿರ್ಮಾಣ ಮಾಡಿದ್ದ ಸಣ್ಣ ಸಣ್ಣ ಕಾಲುವೆಗಳನ್ನು ಮುಚ್ಚಿ ಜಮೀನು…
ಗಿರೀಶ್ ಹುಣಸೂರು ಜ್ವರ, ಶೀತ, ಕೆಮ್ಮು ಕಾಯಿಲೆಗಳ ಭೀತಿ; ಆಸ್ಪತ್ರೆಗಳಿಗೆ ಎಡತಾಕುವ ಪರಿಸ್ಥಿತಿ ಮೈಸೂರು: ರಾಜ್ಯದಲ್ಲಿ ತಾಪಮಾನ ಕುಸಿತದಿಂದಾಗಿ ಚಳಿಯ…
ಎಸ್.ಎಸ್.ಭಟ್ ನಂಜನಗೂಡು: ಭಾನುವಾರ ನಿಧನರಾದ ಆಧುನಿಕ ದಾವಣಗೆರೆಯ ನಿರ್ಮಾತೃ ಶಾಮನೂರು ಶಿವಶಂಕರಪ್ಪ ಅವರಿಗೂ ಹಾಗೂ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ…
ಬೆಂಗಳೂರು: ರಾಜ್ಯದ ಎಲ್ಲಾ ಮಾದರಿ ಬೋರ್ಡ್ಗಳು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು. ಇಲ್ಲದೇ ಹೋದರೆ ಅಂತಹ ಶಾಲೆಗಳ ಮೇಲೆ ಕ್ರಮ…