`ಮುಂದೆ ರೌಡಿಗಳೂ ಮುಖ್ಯಮಂತ್ರಿಯಾಗಬಹುದು’ ಎಂದು ವಾಟಾಳ್ ವ್ಯಂಗ್ಯವಾಡಿದ್ದು ಏಕೆ ಗೊತ್ತಾ?

ಮೈಸೂರು: ಮುಂದಿನ ದಿನದಲ್ಲಿ ರೌಡಿಗಳೂ ಮುಖ್ಯಮಂತ್ರಿಯಾಗಬಹುದು. ಸ್ಲೇಟ್ ಹಿಡಿದುಕೊಂಡಿದ್ದವರು ಅವುಗಳನ್ನು ಬಿಸಾಕಿ ವಿಧಾನಸೌಧಕ್ಕೆ ಬಂದಾಗ ಪೊಲೀಸ್ ಇಲಾಖೆಯವರೇ ಸೆಲ್ಯೂಟ್ ಮಾಡುವಂತಹ ಪರಿಸ್ಥಿತಿ ಬರಲಿದೆ ಎಂದು ಕನ್ನಡ ಚಳವಳಿಗಾರ ವಾಟಾಳಾ ನಾಗರಾಜ್ ಮಾರ್ಮಿಕವಾಗಿ ನುಡಿದರು.

ಇಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನದಲ್ಲಿ ಪಕ್ಷಗಳೇ ವ್ಯಾಪಾರಗಾರರಾಗಿ ಬಿಟ್ಟಿದ್ದಾರೆ. ಇಂತಹ ಕ್ಷೇತ್ರಕ್ಕೆ ನಿಲ್ಲಬೇಕಾದರೇ ಇಷ್ಟು ಹಣ ಎಂದು ನಿಗದಿ ಮಾಡಿಬಿಟ್ಟಿದ್ದಾರೆ. ಆದ್ದರಿಂದ ಇವರಿಂದ ಬೇರೇನೂ ನಿರೀಕ್ಷಿಸಲು ಸಾಧ್ಯ? ಎಂದು ಕಟಕಿಯಾಡಿದರು.

ಶಾಸನ ಸಭೆಯಲ್ಲಿ ಕನ್ನಡ ಪರ ಧ್ವನಿಯತ್ತಲು ಹಾಗೂ ಜನ ವಿರೋಧಿ ಸಚಿವರ ಹಾಗೂ ಶಾಸಕರ ವಿರುದ್ಧ ಮಾತನಾಡಲು ಎಂಎಲ್‌ಎ ಅಥವಾ ಎಂಎಲ್‌ಸಿಯಾಗುವ ಅನಿವಾರ್ಯತೆ ನನಗೆ ಇದೆ. ಆದ್ದರಿಂದ ನೀವು ಎಲ್ಲರೂ ಪಕ್ಷಾತೀತವಾಗಿ ನನಗೆ ಬೆಂಬಲ ನೀಡಬೇಕು ಎಂದು ಪಕ್ಕದಲ್ಲಿ ಕುಳಿತ್ತಿದ್ದ ವಿ.ಶ್ರೀನಿವಾಸ ಪ್ರಸಾದ್ ಅವರಿಗೆ ಕೈ ಮುಗಿದು ಬೇಡಿಕೊಂಡರು.

× Chat with us