ಚಾಮರಾಜ ಕ್ಷೇತ್ರಕ್ಕೆ ಈವರೆಗೂ ಸಚಿವ ಸ್ಥಾನ ಸಿಕ್ಕಿಲ್ಲ: ಶಾಸಕ ಎಲ್‌.ನಾಗೇಂದ್ರ

ಮೈಸೂರು: ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಬೇಸರ ಇಲ್ಲ ಎಂದು ಶಾಸಕ ಎಲ್‌.ನಾಗೇಂದ್ರ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ರೀತಿ ಲಾಬಿ ಮಾಡಿಲ್ಲ. ಬಿಜೆಪಿ ಹೈಕಮಾಂಡ್‌ ತೀರ್ಮಾನಕ್ಕೆ ನಾನು ಬದ್ಧ. ಕ್ಷೇತ್ರದ ಜನ, ಸಂಘ ಸಂಸ್ಥೆಗಳು, ಬೆಂಬಲಿಗರು ನನಗೆ . ಪಕ್ಷಾತೀತವಾಗಿ ಹಲವರೂ ನನ್ನ ಪರ ನಿಂತಿದ್ದರು. ಅವರಿಗೆಲ್ಲ ನಾನು ಋಣಿ ಎಂದು ಕೃತಜ್ಞತೆ ಸಲ್ಲಿಸಿದರು.

1972ರಿಂದಲೂ ಚಾಮರಾಜ ಕ್ಷೇತ್ರದಲ್ಲಿ ಈವರೆಗೂ ಯಾವ ಪಕ್ಷದಲ್ಲೂ ತಮ್ಮ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಹಾಗಾಗಿ, ಈ ಬಾರಿ ನಾನು ಕೂಡ ಒಂದು ಪ್ರಯತ್ನ ಮಾಡಿದ್ದೆ. ಮೈಸೂರು ಭಾಗಕ್ಕೆ ಸಚಿವ ಸ್ಥಾನ ನೀಡಬೇಕು ಎಂದು ಕೂಡ ಒತ್ತಾಯಿಸಿದ್ದೆ. ಆದರೆ, ಕೊಡಲಿಲ್ಲ. ಸಚಿವನಾಗಿಯೇ ಕೆಲಸ ಮಾಡಬೇಕು ಎಂಬುದೇನು ಇಲ್ಲ. ಶಾಸಕನಾಗಿ ನನ್ನ ಕ್ಷೇತ್ರದ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ. ಸರ್ಕಾರದಿಂದ ಹೆಚ್ಚು ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡುವುದೇ ನನ್ನ ಗುರಿ ಎಂದು ತಿಳಿಸಿದರು.

× Chat with us