BREAKING NEWS

ಅಧಿಕಾರಕ್ಕೆ ಬಂದು ಎರಡು ವಾರ ಆಗಿಲ್ಲ ಕಾಂಗ್ರೆಸ್ ನವರು ಆಕಾಶದ ಮೇಲೆ ನಡೆಯುತ್ತಿದ್ದಾರೆ : ಅಶ್ವತ್ಥ ನಾರಾಯಣ ವಾಗ್ದಾಳಿ

ಬೆಂಗಳೂರು : ಅಧಿಕಾರಕ್ಕೆ ಬಂದು ಎರಡು ವಾರ ಆಗಿಲ್ಲ, ಕಾಂಗ್ರೆಸ್ ನವರು ಆಕಾಶದ ಮೇಲೆ ನಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಅಶ್ವತ್ಥ ನಾರಾಯಣ ವಾಗ್ದಾಳಿ ನಡೆಸಿದರು.

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತಕ್ಕೆ ಬಂದ ಪ್ರಥಮ ದಿನಗಳಲ್ಲಿ ಬೆಲೆ ಏರಿಕೆ ಮಾಡುತ್ತಿದ್ದಾರೆ. ಐದು ಗ್ಯಾರಂಟಿ ಕೊಡುವ ಭರವಸೆ ನೀಡಿ ಮಾತು ತಪ್ಪಿದ್ದಾರೆ. ಗ್ಯಾರಂಟಿಯಲ್ಲಿ ಫ್ರೀ ಕೊಡುತ್ತೇವೆ ಎಂದು ಹೇಳಿದವರು ಅದನ್ನು ಈಡೇರಿಸಿಲ್ಲ ಎಂದರು.

ಉಚಿತ ವಿದ್ಯುತ್ ಎಂದು ಹೇಳಿ ಇದೀಗ ವಿದ್ಯುತ್ ದರ ಏರಿಕೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಚೊಚ್ಚಲ ಕೊಡುಗೆ ಬೆಲೆ ಏರಿಕೆಯಾಗಿದೆ. ವಿದ್ಯುತ್ ಉತ್ಪಾದನೆ ವೆಚ್ಚ ಕಡಿಮೆ ಆದರೂ ವಿದ್ಯುತ್ ದರ ಏರಿಕೆ ಆಗುತ್ತಿದೆ. ಇದಕ್ಕೆ ಡಿಕೆಶಿ‌ ಕೊಡುಗೆ ಇದೆ. ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಇಂಧನ ಸಚಿವರಾಗಿದ್ದ ಡಿಕೆಶಿ ಸೋಲಾರ್ ಯೋಜನೆಯನ್ನು ಬೇಕಾದವರಿಗೆ ಹರಾಜು ಮಾಡಿರುವ ಪರಿಣಾಮ ಇದು. ಜನರ ರಕ್ತ ಹೀರುವುದೇ ಕಾಂಗ್ರೆಸ್ ‌ಕೊಡುಗೆ ಆಗಿದೆ ಎಂದು ಟೀಕಿಸಿದರು.

ಇನ್ನು ಚಕ್ರವರ್ತಿ ಸೂಲಿಬೆಲೆಯನ್ನು ಜೈಲಿಗೆ ಹಾಕುವ ಎಚ್ಚರಿಕೆ ನೀಡುವ ಸಚಿವ ಎಂಬಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ,‌ ಜೈಲಿಗೆ ಹಾಕುತ್ತೇನೆ ಎಂದು ಹೇಳಲು ನೀವು ಜಡ್ಜಾ? ಇದೆಲ್ಲಾ ಕರ್ನಾಟಕದಲ್ಲಿ ನಡೆಯಲ್ಲ, ನಡವಳಿಕೆಯಲ್ಲಿ ಸುಧಾರಣೆ ತರಬೇಕು. ಜನ ಪರವಾಗಿ ಆಡಳಿತ ಮಾಡಿದರೆ ಸಹಕಾರ ಕೊಡುತ್ತೇವೆ. ದ್ವೇಷದ ರಾಜಕಾರಣ ಮಾಡಬೇಡಿ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವಾರ ಆಗಿಲ್ಲ, ಆಕಾಶದ ಮೇಲೆ ನಡೆಯುತ್ತೀರಿ,ಭೂಮಿ ಮೇಲೆ ‌ನಡೆಯಿರಿ ಎಂದು ಅಶ್ವತ್ಥ ನಾರಾಯಣ ಸಲಹೆ ನೀಡಿದರು.
ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಗ್ಯಾರಂಟಿಗಳ‌ ಯೂಟರ್ನ್ ಹೊಡೆಯುತ್ತಿದೆ ಸರ್ಕಾರ ಎಂದು‌ ಕಿಡಿಕಾರಿದರು. ಸಾವಿರ ಸುಳ್ಳು ಹೇಳಿ ಸರ್ಕಾರ ತಂದಿದ್ದಾರೆ. ಅಧಿಕಾರಕ್ಕೆ ಬಂದ ಬಳಿಕ ಇದೀಗ ಉತ್ತರ ಕೊಡಬೇಕಾಗಿದೆ. ಇನ್ನು ಮುಂದೆ ಗ್ಯಾರಂಟಿ ಅಂದರೆ ಸುಳ್ಳು ಎಂಬಂತಾಗಿದೆ ಎಂದು ಕಿಡಿಕಾರಿದರು.

ಪರಿಷತ್ ಸದಸ್ಯ ಕೇಶವ ಪ್ರಸಾದ್ ಮಾತನಾಡಿ, ‌ಉಚಿತ ಎಂದು ಘೋಷಣೆ ಮಾಡಿದ್ದರು. ವೇದಿಕೆ ಮೇಲೆ ಇದ್ದ ಎಲ್ಲರಿಗೂ ಕರೆಂಟ್ ಉಚಿತ ಎಂದಿದ್ದರು. ಮೊದಲ ಕ್ಯಾಬಿನೆಟ್ ನಲ್ಲಿ ಈಡೇರಿಸುವ ಭರವಸೆ ಕೊಟ್ಟಿದ್ದರು. ಆದರೆ ನೂರೆಂಟು ಷರತ್ತುಗಳನ್ನು ಹಾಕಿದ್ದಾರೆ. ಇವಾಗ ಗೊಂದಲಮಯ ವಾತಾವರಣ ಸೃಷ್ಟಿ ಮಾಡಿದ್ದಾರೆ.
ಮಹಿಳೆಯರಿಗೆ ಎರಡು ಸಾವಿರ ರೂಪಾಯಿ ಕೊಡುವ ಮೂಲಕ ಮನೆಯನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ನಿರುದ್ಯೋಗಿಗಳಿಗೆ ಮೂರು ಸಾವಿರ ಕೊಡುತ್ತೇವೆ ಎಂದವರು ಇವಾಗ 2022-23 ಅವಧಿಗೆ ಎಂದು ಷರತ್ತು ಹಾಕಿದ್ದಾರೆ ಎಂದು ಕಿಡಿಕಾರಿದರು.

lokesh

Recent Posts

ಗೃಹಲಕ್ಷ್ಮೀ ಸಹಕಾರ ಸಂಘ ಸೇರುವ ಮಹಿಳೆಯರಿಗೆ ಸಾಲ ಸೌಲಭ್ಯ

ಬೆಂಗಳೂರು: ರಾಜ್ಯ ಸರ್ಕಾರವು 2000 ಗೃಹಲಕ್ಷ್ಮೀ ಹಣ ಪಡೆಯುತ್ತಿರುವ ಫಲಾನುಭವಿಗಳಿಗಾಗಿ ಗೃಹಲಕ್ಷ್ಮೀ ಸಹಕಾರ ಸಂಘಗಳನ್ನು ಅಸ್ತಿತ್ವಕ್ಕೆ ತರಲು ಮುಂದಾಗಿದೆ. ಈ…

2 mins ago

ಹನೂರು| ಲೊಕ್ಕನಹಳ್ಳಿ ಗ್ರಾಮದಲ್ಲಿ ನಿರಂತರ ಕಾಡಾನೆ ದಾಳಿ

ಮಹಾದೇಶ್‌ ಎಂ ಗೌಡ  ಹನೂರು: ಲೊಕ್ಕನಹಳ್ಳಿ ಗ್ರಾಮದ ತಮಿಳ್ ಸೆಲ್ವ ಎಂಬುವವರ ಜಮೀನಿನಲ್ಲಿ ಬೆಳೆದಿರುವ ಬಾಳೆ, ಬೆಳ್ಳುಳ್ಳಿ, ಕೃಷಿ ಪರಿಕರಗಳನ್ನು…

32 mins ago

ಬಳ್ಳಾರಿ ಹಿಂಸಾಚಾರಕ್ಕೆ ರಾಜಕೀಯ ಅಸೂಯೆ ಕಾರಣ: ಕಾಂಗ್ರೆಸ್‍ನ ಸತ್ಯಶೋಧನಾ ಸಮಿತಿ ವರದಿ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ರಾಜಶೇಖರ್ ಸಾವಿಗೆ ಕಾರಣವಾದ ಬಳ್ಳಾರಿ ಹಿಂಸಾಚಾರಕ್ಕೆ ರಾಜಕೀಯ ಅಸೂಯೆ ಕಾರಣ ಎಂದು ಕಾಂಗ್ರೆಸ್‍ನ ಸತ್ಯಶೋಧನಾ…

45 mins ago

ನಾಡಬಾಂಬ್‌ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರ ಪ್ರಕರಣ: ಮೂವರು ಆರೋಪಿಗಳ ಬಂಧನ

ರಾಮನಗರ: ನಾಡಬಾಂಬ್‌ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಡುಹಂದಿ ಬೇಟೆಗಾಗಿ ನಾಡಬಾಂಬ್‌ ಇಟ್ಟಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.…

2 hours ago

ರಾಜ್ಯಪಾಲರು ದ್ವೇಷ ಭಾಷಣ ಬಿಲ್‌ ತಮ್ಮ ಬಳಿ ಇಟ್ಟುಕೊಂಡಿದ್ದಾರೆ: ಸಚಿವ ಪರಮೇಶ್ವರ್‌

ಬೆಂಗಳೂರು: ರಾಜ್ಯಪಾಲರು ದ್ವೇಷಭಾಷಣ ಬಿಲ್‌ ಸ್ವೀಕಾರವೂ ಮಾಡಿಲ್ಲ. ತಿರಸ್ಕಾರವೂ ಮಾಡಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ. ಈ ಕುರಿತು…

2 hours ago

ದರ್ಶನ್‌ ಪತ್ನಿ ವಿರುದ್ಧ ಅಶ್ಲೀಲ ಕಮೆಂಟ್‌ ಪ್ರಕರಣ: 6 ಮಂದಿ ವಿರುದ್ಧ ಚಾರ್ಜ್‌ಶೀಟ್‌

ಬೆಂಗಳೂರು: ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್‌ ಪ್ರಕರಣದ ತನಿಖೆ ಕೊನೆಯ ಹಂತಕ್ಕೆ ಬಂದು…

3 hours ago