ಮಾಸ್ಕೋ : ಭಾರತ ಮತ್ತು ಭಾರತೀಯರಿಗೆ ಹಿತಾಸಕ್ತಿಗೆ ಧಕ್ಕೆ ತರಬಲ್ಲ ಯಾವುದೇ ಕ್ರಮ ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಯಾರೂ ಹೆದರಿಸಲು ಸಾಧ್ಯವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ರಷ್ಯಾದ ಮಾಸ್ಕೋದಲ್ಲಿ ನಡೆದ ʼರಷ್ಯಾ ಕಾಲಿಂಗ್ʼ ಹೂಡಿಕೆ ವೇದಿಕೆಯಲ್ಲಿ ಪ್ರಧಾನಿ ಮೋದಿ ಅವರ ನಾಯಕತ್ವದ ಕುರಿತು ಮಾತನಾಡಿದ ಪುಟಿನ್, ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ನಿರ್ಧಾರ ತೆಗೆದುಕೊಳ್ಳುವಂತೆ ಬಲವಂತಪಡಿಸಬಹುದು. ಆದರೆ, ಅಂತಹ ಒತ್ತಡಗಳನ್ನು ಅವರು ಸಲೀಸಾಗಿ ನಿಭಾಯಿಸುತ್ತಾರೆ. ಇದನ್ನು ಯಾರು ಊಹಿಸಲು ಸಾಧ್ಯವಿಲ್ಲ. ನಾನು ಸದಾ ಗಮನಿಸುತ್ತಿರುತ್ತೇನೆ, ಭಾರತ ಹಿತಾಸಕ್ತಿಗಳನ್ನು ರಕ್ಷಿಸುವ ಅವರ ಕಠಿಣ ನಿರ್ಧಾರಗಳು ನನ್ನನ್ನು ಆಶ್ಚರ್ಯಚಕಿತಗೊಳಿಸುತ್ತದೆ. ಅವರು ಎಂದಿಗೂ ಬಾಹ್ಯ ಒತ್ತಡಗಳ ಬಗ್ಗೆ ನನ್ನೊಂದಿಗೆ ಚರ್ಚಿಸಿಲ್ಲ.
ಮಾಸ್ಕೋದಲ್ಲಿ ನಡೆದ ʼರಷ್ಯಾ ಕಾಲಿಂಗ್ʼ ಹೂಡಿಕೆ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಕುರಿತು ಮಾತನಾಡುತ್ತಾ, ‘ಮೋದಿಯವರನ್ನು ಯಾರೂ ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧ ನಿರ್ಧಾರ ತೆಗೆದುಕೊಳ್ಳುವಂತೆ ಬಲವಂತಪಡಿಸಬಹುದು, ಅಂಥ ಒತ್ತಡವನ್ನು ಅವರು ಅನುಭವಿಸಬಹುದು ಎಂದು ಊಹಿಸಲು ಸಾಧ್ಯವಿಲ್ಲ. ನಾನು ಸದಾ ಗಮನಿಸುತ್ತಿರುತ್ತೇನೆ, ಭಾರತೀಯ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವ ಅವರ ಕಠಿಣ ನಿಲುವು ನನಗೆ ಆಶ್ಚರ್ಯಕರವಾಗಿದೆ. ʼಸ್ನೇಹರಹಿತ ದೇಶಗಳʼ ಬಾಹ್ಯ ಒತ್ತಡದ ನಡುವೆಯೂ ಪ್ರಧಾನಿ ನರೇಂದ್ರ ಮೋದಿಯವರ ದೃಢವಾದ ನಾಯಕತ್ವ ಭಾರತಕ್ಕೆ ದೊರೆತಿದೆ. ಅವರು ಎಂದಿಗೂ ಬಾಹ್ಯ ಒತ್ತಡಗಳ ಬಗ್ಗೆ ತನ್ನೊಂದಿಗೆ ಮಾತನಾಡಿಯೇ ಇಲ್ಲ ಎಂದು ಶ್ಲಾಘಿಸಿದ್ದಾರೆ.
ಜೊತೆಗೆ ಭಾರತ- ರಷ್ಯಾ ಬಾಂಧವ್ಯವು ಎಲ್ಲಾ ರಂಗಗಳಲ್ಲಿ ಪ್ರಗತಿಯಲ್ಲಿದೆ. ಉಭಯ ದೇಶಗಳ ನಡುವಿನ ಸಂಬಂಧಗಳು ಎಲ್ಲಾ ಪಥಗಳಲ್ಲಿ ಪ್ರಗತಿಪರವಾಗಿ ಅಭಿವೃದ್ಧಿ ಹೊಂದುತ್ತಿವೆ. ಇದರ ಮುಖ್ಯ ಭರವಸೆ ಪ್ರಧಾನಿ ಮೋದಿ ಅವರು ಅನುಸರಿಸುತ್ತಿರುವ ನೀತಿಯಾಗಿದೆ ಎಂದು ಪುಟಿನ್ ಹೇಳಿದ್ದಾರೆ.
ಟ್ವಿಟರ್ ನಲ್ಲಿ ಈ ಕುರಿತು 45 ಸೆಕೆಂಡ್‌ಗಳ ಈ ಸಂದರ್ಶನದ ವಿಡಿಯೋ ಅಪ್ಲೋಡ್ ಆಗಿದ್ದು, ಲಕ್ಷಾಂತರ ವೀಕ್ಷಣೆ ಪಡೆದಿದೆ. ಎರಡು ದಿನಗಳ ʼಮಾಸ್ಕೋ ಕಾಲಿಂಗ್ʼ ಇವೆಂಟ್‌ನಲ್ಲಿ ಚೀನಾ, ಭಾರತ, ಟರ್ಕಿ, ಗಲ್ಫ್ ದೇಶಗಳು, ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಏಷ್ಯಾದ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…
ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಮೈಸೂರು ಸ್ವಚ್ಛ ನಗರಿಯಾಗಲು ಪೌರ ಕಾರ್ಮಿಕರ…
ಸೆಪ್ಟೆಂಬರ್ ಕೊನೆಯಲ್ಲಿ ಆರ್ಥಿಕ ವರ್ಷದ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯಗೊಳಿಸುವ ಅತ್ಯಂತ ನಿರ್ಣಾಯಕ ಸಮಯದಲ್ಲಿ ಬ್ಯಾಂಕ್ ಒಕ್ಕೂಟಗಳು (ಯುಎಫ್ಬಿ) ಮೂರು ದಿನಗಳ…
ವೈಡ್ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೆಹಲಿ ಸಹಜ ವಿಳಾಸವಾಗಿತ್ತು. ದೇಶದ…
ಕೆ.ಬಿ.ರಮೇಶನಾಯಕ ಕರ್ನಾಟಕ ರಾಜ್ಯದ ಗತವೈಭವ, ದೇಶದ ಅಖಂಡತೆ ಬಿಂಬಿಸುವ ಮಾದರಿಗಳ ಸವಾರಿ ೩೧ ಜಿಲ್ಲೆಗಳ ಬದಲಿಗೆ ಆಯ್ದ ೧೫ ಜಿಲ್ಲೆಗಳ…