ನವದೆಹಲಿ : ಕುಖ್ಯಾತ ನಿಥಾರಿ ಹತ್ಯಾಕಾಂಡ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ ದೋಷಿ ಎಂದು ಘೋಷಿತನಾಗಿ ಮರಣದಂಡನೆ ಶಿಕ್ಷೆ ವಿಧಿಸಲ್ಪಟ್ಟ ಸುರೀಂದರ್ ಕೋಲಿ ಎಂಬಾತನನ್ನು 12 ಪ್ರಕರಣಗಳಲ್ಲಿ ಇಂದು ಅಲಹಾಬಾದ್ ಹೈಕೋರ್ಟ್ ಖುಲಾಸೆಗೊಳಿಸಿದೆ. ಈ ಪ್ರಕರಣದ ಇನ್ನೋರ್ವ ಆರೋಪಿ ಮೊನಿಂದರ್ ಸಿಂಗ್ ಪಂಧೇರ್ ಎಂಬಾತನನ್ನು ಎರಡು ಪ್ರಕರಣಗಳಲ್ಲಿ ಖುಲಾಸೆಗೊಳಿಸಲಾಗಿದೆ.
ಹೈಕೋರ್ಟ್ ಆದೇಶದ ನಂತರ ಕೋಲಿ ಮತ್ತು ಪಂಧೇರ್ ಇಬ್ಬರ ಮರಣದಂಡನೆ ಶಿಕ್ಷೆಗಳು ರದ್ದುಗೊಂಡಂತಾಗಿವೆ.
ಸರಣಿ ಹತ್ಯೆಗಳು ಉತ್ತರ ಪ್ರದೇಶದ ನೊಯ್ಡಾದ ನಿಥಾರಿ ಪ್ರದೇಶದ ಮೊನಿಂದರ್ ಸಿಂಗ್ ಪಂಧೇರ್‌ನ ನಿವಾಸದಲ್ಲಿ 2005 ಮತ್ತು 2006 ನಡುವೆ ನಡೆದಿದ್ದವು. ಪಂಧೇರ್ ನಿವಾಸದಲ್ಲಿ ಸುರೀಂದರ್ ಕೊಲಿ ಸಹಾಯಕನಾಗಿ ದುಡಿಯುತ್ತಿದ್ದ.
ತನ್ನ ಉದ್ಯೋಗದಾತನ ಮನೆಯಲ್ಲಿ ಹಲವಾರು ಮಕ್ಕಳನ್ನು ಅತ್ಯಾಚಾರಗೈದು ಕೊಲೆಗೈದ ಪ್ರಕರಣದಲ್ಲಿ ಸುರೀಂದರ್ ದೋಷಿ ಎಂದು ಘೋಷಿತನಾಗಿದ್ದ. ಇಬ್ಬರೂ 20 ವರ್ಷದ ಯುವತಿಯ ಅತ್ಯಾಚಾರ ಹತ್ಯೆ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾಗಿತ್ತು.
ನಾಪತ್ತೆಯಾದ ಮಗುವೊಂದರ ದೇಹದ ಒಂದು ಭಾಗ ಪಂಧೇರ್ ನಿವಾಸದ ಪಕ್ಕದ ಚರಂಡಿಯಲ್ಲಿ ನೆರೆಹೊರೆಯವರು ಪತ್ತೆ ಹಚ್ಚಿದಾಗ ಇಡೀ ದೇಶವೇ ಬೆಚ್ಚಿ ಬೀಳುವ ವಿದ್ಯಮಾನ ಬೆಳಕಿಗೆ ಬಂದಿತ್ತು.
ತನಿಖೆ ಮುಂದುವರಿದಾಗ ಇನ್ನಷ್ಟು ಮಕ್ಕಳ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿತ್ತು.
ಸಿಬಿಐ 2017ರಲ್ಲಿ ಇಬ್ಬರ ವಿರುದ್ಧವೂ 19 ಪ್ರಕರಣ ದಾಖಲಿಸಿತ್ತು.
ಸುರೀಂದರ್ ಮಕ್ಕಳಿಗೆ ಆಮಿಷವೊಡ್ಡಿ ಮನೆಗೆ ಕರೆತರುತ್ತಿದ್ದರೆ, ನಂತರ ಆತ ಮತ್ತು ಪಂಧೇರ್ ಇಬ್ಬರೂ ಸೇರಿ ಅತ್ಯಾಚಾರಗೈದು ಕೊಲೆಗೈಯ್ಯುತ್ತಿದ್ದರೆಂದು ಆರೋಪಿಸಲಾಗಿತ್ತು.
ನವೀನ್ ಡಿಸೋಜ ಜಿಲ್ಲೆಯಲ್ಲಿ ಸು.೧೭೪,೧೧೪ ಕುಟುಂಬಗಳು, ಗಣತಿ ಕಾರ್ಯಕ್ಕೆ ಗುರುತು, ೭,೩೭೯ ಕುಟುಂಬಗಳಿಂದ ಸ್ವಯಂ ಗಣತಿ ಮಡಿಕೇರಿ: ನಮ್ಮ ಗಣತಿ,…
ಮಹೇಂದ್ರ ಹಸಗೂಲಿ ಗುಂಡ್ಲುಪೇಟೆಯಲ್ಲಿ ೩೫ರಿಂದ ೪೦ ಡಿಗ್ರಿ ಉಷ್ಣಾಂಶ, ಬಿಸಿಗಾಳಿಗೆ ಹೈರಾಣಾದ ಜನರು ಗುಂಡ್ಲುಪೇಟೆ: ಬೇಸಿಗೆಯ ಬಿಸಿಲಿನ ತಾಪ ದಿನೇದಿನೇ…
ಮಧುಕರ ಮಳವಳ್ಳಿ (ಈ ಲೇಖನಕ್ಕೆ ಕೃತಕ ಬುದ್ಧಿಮತ್ತೆಯ ಚಿತ್ರ ಬಳಸಲಾಗಿದೆ) ಹಬ್ಬಕ್ಕೆ ಯಾರಿಗೆ ತಾನೆ ಹೊಸ ಬಟ್ಟೆ ಇಷ್ಟ ಇಲ್ಲ…
ಭಾರತಿ ಬಿ.ವಿ. ಅವನೆದುರು ಮಾನ ತೆಗೆದ ಸೈಕಲ್ಲಿನ ಸಹವಾಸ ನನಗೆ ಮತ್ತೆ ಬೇಕೆನ್ನಿಸಲಿಲ್ಲ ನಾವೆಲ್ಲ ‘ನಟರಾಜ ಸರ್ವೀಸ್’ನಲ್ಲೇ ಬದುಕು ಕಳೆದವರು.…
ಶುಭಾ ಖಟಾವಕರ ಮ್ಹೆತ್ರಸ್ ನೇಪಾಳದ ಕನಸುಗಣ್ಣಿನ ಯುವಜನಾಂಗದ ಈ ಹೊಸ ಸರ್ಕಾರ ಈಗ ಇಟ್ಟಿರುವ ಹೆಜ್ಜೆಗಳು ಯಶಸ್ವಿಯಾದರೆ ದಕ್ಷಿಣ ಏಷ್ಯಾದಲ್ಲಿ…
ಪಂಪ ಪ್ರಶಸ್ತಿ ಪಡೆಯುತ್ತಿರುವ ಮಹಾದೇವರಿಗೆ ಎಲ್ಲಾ ಮನೆಗಳ ಜೋತಮ್ಮದೀರು ಹರಸಲಿ ರಾಜೇಂದ್ರ ಚೆನ್ನಿ ೧ ತಮ್ಮ ಒಟ್ಟು ಬರಹಗಳು ಇಷ್ಟು ಕಡಿಮೆ…