BREAKING NEWS

ನೀಟ್ ಪಿಜಿ: ನೀಟ್​ ಪರೀಕ್ಷೆ ಕಟ್​ ಆಫ್​ ಅಂಕ ರದ್ದು, ಎಲ್ಲರಿಗೂ ಕೌನ್ಸೆಲಿಂಗ್​ಗೆ ಅರ್ಹತೆ

ಹೈದರಾಬಾದ್ : ಮಹತ್ವದ ಬೆಳವಣಿಗೆಯೊಂದರಲ್ಲಿ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (ಎಂಸಿಸಿ) ಮೂರನೇ ಸುತ್ತಿನ ನೀಟ್ ಪಿಜಿ ವೈದ್ಯಕೀಯ ಕೌನ್ಸೆಲಿಂಗ್‌ಗೆ ಇದ್ದ ಅರ್ಹತಾ ಅಂಕಗಳು (ಕಟ್​​ ಆಫ್​) ರದ್ದುಗೊಳಿಸುವುದಾಗಿ ಘೋಷಿಸಿದೆ. ಇದರಿಂದಾಗಿ ಪ್ರಸಕ್ತ ವರ್ಷ ನೀಟ್‌ ಪರೀಕ್ಷೆ ಬರೆಯುವ ಅಭ್ಯರ್ಥಿಗಳೆಲ್ಲರೂ ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯಲಿದ್ದಾರೆ.

ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ಕ್ರಮಕ್ಕೆ ಅನುಮೋದನೆ ನೀಡಿದ್ದು, ಕಟ್​ ಆಫ್​ ಅಂಕಗಳನ್ನು ಶೂನ್ಯಕ್ಕೆ ಇಳಿಸಿದ್ದರಿಂದ ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳಿಗೆ ಸ್ಪರ್ಧಿಸಲು ಎಲ್ಲ ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ.

https://x.com/DrRohanKrishna3/status/1704425699187237128?s=20

ಈ ಹಿಂದೆ, ನೀಟ್​ ಪಿಜಿ ಕೌನ್ಸೆಲಿಂಗ್‌ನ ಅರ್ಹತಾ ಮಾನದಂಡವು ಸಾಮಾನ್ಯ ವರ್ಗಕ್ಕೆ ಒಟ್ಟು 800 ಅಂಕಗಳಲ್ಲಿ 291 ಮತ್ತು ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ 257 ಅಂಕಗಳ ಕನಿಷ್ಠ ಕಟ್-ಆಫ್ ಅಂಕವನ್ನು ಕಡ್ಡಾಯಗೊಳಿಸಿತ್ತು. ಇದರಿಂದಾಗಿ ಇಷ್ಟು ಅಂಕ ಗಳಿಸಲು ವಿಫಲವಾದ ವಿದ್ಯಾರ್ಥಿಗಳು ಮೂರನೇ ಸುತ್ತಿನ ಕೌನ್ಸೆಲಿಂಗ್​ನಲ್ಲಿ ಪಾಲ್ಗೊಳ್ಳಲು ಅವಕಾಶ ಇರಲಿಲ್ಲ. ಇದೀಗ ಎಲ್ಲರೂ ಕೌನ್ಸೆಲಿಂಗ್​ನಲ್ಲಿ ಭಾಗಿಯಾಗಬಹುದಾಗಿದೆ.

https://x.com/draviralmathur/status/1704440891069579422?s=20

ಅಂಕ ರದ್ದಿನಿಂದ ಲಾಭವೇನು?: ಅರ್ಹತಾ ಕನಿಷ್ಠ ಅಂಕ ರದ್ದಾದ್ದರಿಂದ ಮೂರನೇ ಸುತ್ತಿನ ಕೌನ್ಸೆಲಿಂಗ್‌ಗೆ ಎಲ್ಲ ವಿದ್ಯಾರ್ಥಿಗಳು ತೆರಳಲಿದ್ದು, 13,000 ಕ್ಕೂ ಹೆಚ್ಚು ಖಾಲಿ ಸೀಟುಗಳಿಗೆ ಪೈಪೋಟಿ ನಡೆಯಲಿದೆ. ಇದು ಅಭ್ಯರ್ಥಿಗಳು ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳನ್ನು ಮಾಡುವ ಅವರ ಕನಸುಗಳನ್ನು ಸಾಕಾರ ಮಾಡಲಿದೆ.

ಈ ಬಗ್ಗೆ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯು ಅಧಿಕೃತ ಸೂಚನೆ ಹೊರಡಿಸಿದ್ದು, NEET PG ಕೌನ್ಸೆಲಿಂಗ್ 2023 ಕ್ಕೆ ಅನ್ವಯವಾಗುವಂತೆ ಪಿಜಿ ಕೋರ್ಸ್‌ಗಳಿಗೆ (ವೈದ್ಯಕೀಯ/ದಂತ) ಅರ್ಹತಾ ಕಟ್​ ಆಫ್​ ಅಂಕಗಳನ್ನು ರದ್ದು ಮಾಡಲಾಗಿದೆ ಎಂದಿದೆ. ಆದರೆ, ಈ ನಿರ್ಧಾರಕ್ಕೆ ವೈದ್ಯಕೀಯ ಸಮುದಾಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಏನಿದು ಕಟ್​ ಆಫ್​ ಅಂಕ: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳನ್ನು ಮಾಡುವ ಕನಸು ಇಟ್ಟುಕೊಂಡಿದ್ದ ವಿದ್ಯಾರ್ಥಿಗಳು ಬರೆಯುವ ನೀಟ್​ ಪಿಜಿ ಪರೀಕ್ಷೆಯಲ್ಲಿ ಇಂತಿಷ್ಟು ಅಂಕಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕೆಂಬ ನಿಯಮ. ನಿಗದಿಪಡಿಸಿದ ಅಂಕಗಳನ್ನು ಮುಟ್ಟುವಲ್ಲಿ ವಿದ್ಯಾರ್ಥಿ ವಿಫಲವಾದರೆ, ಅವರು ಮುಂದಿನ ಹಂತಕ್ಕೆ ಅನರ್ಹತೆ ಹೊಂದುತ್ತಿದ್ದರು. ಆ ಗೋಜಲು ಈಗ ತಪ್ಪಿದೆ.

ಕಟ್​ ಆಫ್​ ಅಂಕಗಳೇ ಅನರ್ಥ: ನೀಟ್​ ಪರೀಕ್ಷೆಯನ್ನೇ ರದ್ದು ಮಾಡಬೇಕು ಎಂದು ಪಟ್ಟು ಹಿಡಿದಿರುವ ತಮಿಳುನಾಡು ಸರ್ಕಾರ, ಕಟ್​ ಆಫ್​ ಅಂಕಗಳನ್ನು ಶೂನ್ಯಕ್ಕೆ ಇಳಿಸಿದ್ದನ್ನು ಟೀಕಿಸಿದೆ. ಈ ಬಗ್ಗೆ ಮಾತನಾಡಿರುವ ಸಿಎಂ ಎಂಕೆ ಸ್ಟಾಲಿನ್​ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿನ ಎಲಿಜಿಬಲ್​ ಅಂಕಗಳೇ ಅರ್ಥಹೀನ. ಇದರಿಂದ ಕೇವಲ ಕೋಚಿಂಗ್ ಸೆಂಟರ್‌ಗಳು ಮತ್ತು ಪರೀಕ್ಷೆಗೆ ಪಾವತಿಸುವ ಹಣ ಪೋಲಾಗಲಿದೆ. ಇದನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದರೂ ಕೇಂದ್ರ ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಅವರು ಟೀಕಿಸಿದ್ದಾರೆ.

andolanait

Recent Posts

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಮಾತುಕತೆ: ಇರಾನಿನ ಕೆಲ ಬೇಡಿಕೆಗಳಿಗೆ ಅಮೇರಿಕಾ ತಾತ್ವಿಕ ಒಪ್ಪಿಗೆ

ಇಸ್ಲಾಮಾಬಾದ್:‌ ಪಶ್ಚಿಮ ಏಷ್ಯಾ ಯುದ್ಧವನ್ನು ಕೊನೆಗೊಳಿಸಲು ಇಸ್ಲಾಮಾಬಾದ್‌ನಲ್ಲಿ ಅಮೇರಿಕಾ-ಇರಾನ್‌ ನಡುವೆ ಕದನ ವಿರಾಮ ಮಾತುಕತೆ ನಡೆದಿದೆ. ಸಂಸದೀಯ ಸ್ಪೀಕರ್‌ ಮೊಹಮ್ಮದ್‌…

2 hours ago

ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದ ಉಷ್ಣಾಂಶ: ಜನತೆಗೆ ಆರೋಗ್ಯ ಇಲಾಖೆ ಸೂಚನೆ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಹೀಟ್‌ ವೇವ್‌ ಎಚ್ಚರಿಕೆ…

5 hours ago

ಆರು ಹಸುಗಳ ಸಜೀವ ದಹನ ಪ್ರಕರಣ: ಆರೋಪಿ ಬಂಧನ

ಬೆಂಗಳೂರು: ಇಲ್ಲಿನ ಡಿ.ಜೆ.ಹಳ್ಳಿ ಬಳಿಯ ಶಾಂಪುರ ರಸ್ತೆಯಲ್ಲಿ ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿ ಆರು ಹಸುಗಳನ್ನು ಸಜೀವ ದಹನ ಮಾಡಿದ್ದ ಪ್ರಕರಣಕ್ಕೆ…

6 hours ago

ಅಮರನಾಥ ಯಾತ್ರೆಗೆ ಏಪ್ರಿಲ್.15ರಿಂದ ನೋಂದಣಿ‌

ನವದೆಹಲಿ: ಇದೇ ಏಪ್ರಿಲ್.‌15ರಿಂದ ಈ ವರ್ಷದ ಅಮರನಾಥ ಯಾತ್ರೆಗೆ ಮುಂಗಡ ನೋಂದಣಿ ಆರಂಭವಾಗಲಿದೆ. ಭಾರತದಾದ್ಯಂತ ಒಂದೇ ಸಮಯಕ್ಕೆ ಬುಕಿಂಗ್ ಪ್ರಾರಂಭವಾಗಲಿದ್ದು,…

6 hours ago

ಕಾಫಿ ತೋಟದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ

ಕೊಡಗು: ಕಾಫಿ ತೋಟದಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬೇತ್ರಿ ಗ್ರಾಮದಲ್ಲಿ ನಡೆದಿದೆ.…

6 hours ago

ಪ್ರಧಾನಿ ಮೋದಿ-ರಾಹುಲ್ ಗಾಂಧಿ ಮಾತುಕತೆ: ವಿಡಿಯೋ ವೈರಲ್

ನವದೆಹಲಿ: ಸಂಸತ್ತಿನ ಆವರಣದಲ್ಲಿ ಕಾರಿನಿಂದ ಇಳಿದು ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ…

6 hours ago