ನೀರಾ ಟಂಡನ್ ಶ್ವೇತ ಭವನದ ಕಾರ್ಯದರ್ಶಿ

ವಾಷಿಂಗ್ಟನ್: ಭಾರತ ಮೂಲದ ಅಮೆರಿಕ ನಿವಾಸಿ, ನೀತಿ ರಚನಾ ತಜ್ಞೆ ನೀರಾ ಟಂಡನ್ ಅವರನ್ನು ಶ್ವೇತಭವನದ ಸಿಬ್ಬಂದಿ ಕಾರ್ಯದರ್ಶಿಯಾಗಿ ಅಧ್ಯಕ್ಷ ಜೋ ಬೈಡನ್ ಅವರು ನೇಮಕ ಮಾಡಿದ್ದಾರೆ.

51 ವರ್ಷದ ಟಂಡನ್ ಅವರು ಅಧ್ಯಕ್ಷ ಬೈಡನ್ ಅವರ ಹಿರಿಯ ಸಲಹೆಗಾರರಾಗಿದ್ದರು. ಆಡಳಿತಕ್ಕೆ ಸಂಬಂಧಿತ ಪತ್ರಗಳ ನಿರ್ವಹಣೆಯಲ್ಲಿ ಸಿಬ್ಬಂದಿ ಕಾರ್ಯದರ್ಶಿ ಪಾತ್ರ ಪ್ರಮುಖವಾದುದು. ಈ ಹುದ್ದೆಗೆ ನೇಮಕವಾಗುವ ವ್ಯಕ್ತಿ, ಶ್ವೇತಭವನದ ಪ್ರಭಾವಿ ಅಧಿಕಾರಿಗಳಲ್ಲಿ ಒಬ್ಬರಾಗಿರುತ್ತಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.

× Chat with us