ಬಿಹಾರ್‌: ಎನ್‌ಡಿಎಗೆ ಗದ್ದುಗೆ, ನಿತೀಶ್‌ ಕುಮಾರ್‌ ಮತ್ತೆ ಸಿಎಂ

ಪಟ್ನಾ: ಬಿಹಾರ್‌ ವಿಧಾನಸಭೆ ಚುನಾವಣೆಯ ಫಲಿತಾಂಶವು ಮತ್ತೆ ಎನ್‌ಡಿಎಗೆ ಅಧಿಕಾರ ನೀಡಿದೆ. ಅಲ್ಲದೇ, ಸತತ ನಾಲ್ಕನೇ ಅವಧಿಗೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಸ್ಥಾನ ಉಳಿಸಿಕೊಳ್ಳುವುದು ಖಚಿತವಾಗಿದೆ.

ಚುನಾವಣಾ ಆಯೋಗವು ಬುಧವಾರ ಮುಂಜಾನೆ ವೇಳೆಗೆ ರಾಜ್ಯದ ಎಲ್ಲ 243 ಕ್ಷೇತ್ರಗಳ ಫಲಿತಾಂಶವನ್ನು ಘೋಷಿಸಿದೆ.

ಬಿಜೆಪಿ, ಜೆಡಿಯು ನೇತೃತ್ವದ ಎನ್‌ಡಿಎ 125 ಕ್ಷೇತ್ರಗಳಲ್ಲಿ ಜಯಭೇರಿ ಸಾಧಿಸಿದೆ. ಆರ್‌ಜೆಡಿ ನೇತೃತ್ವದ ಮಹಾಗಟ್‌ಬಂಧನ್ 110 ಸ್ಥಾನಗಳನ್ನಷ್ಟೇ ಗಳಿಸಿದೆ. ಆರ್‌ಜೆಡಿಯು 75 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಯಾವ ಪಕ್ಷ ಎಷ್ಟು ಸ್ಥಾನ

ಬಿಜೆಪಿ 74
ಜೆಡಿಯು 43
ವಿಐಪಿ 4
ಎಚ್‌ಎಎಂ 4
ಆರ್‌ಜೆಡಿ 75
ಕಾಂಗ್ರೆಸ್ 19 ಹಾಗೂ ಎಡಪಕ್ಷಗಳು 16
ಉಳಿದಂತೆ ಎಐಎಂಐಎಂ 5, ಬಿಎಸ್‌ಪಿ 1, ಎಲ್‌ಜೆಪಿ 1 ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ತೇಜಸ್ವಿ ಯಾದವ್‌ (ರಾಘೋಪುರ ಕ್ಷೇತ್ರ), ತೇಜ್‌ ಪ್ರತಾಪ್‌ (ಹಸನ್‌ಪುರ ಕ್ಷೇತ್ರ), ಶ್ರೇಯಸಿ ಸಿಂಗ್‌ (ಜಮುಯಿ ಕ್ಷೇತ್ರ) ಪ್ರಮುಖರು ಗೆಲುವಿನ ನಗೆ ಬೀರಿದ್ದಾರೆ. ಲವ ಸಿನ್ಹಾ (ಬಂಕಿಪುರ), ಸುಭಾಷಿಣಿ ಯಾದವ್‌ (ಬಿಹಾರಿಗಂಜ್) ಪ್ರಮುಖರು ಸೋಲನ್ನು ಅನುಭವಿಸಿದ್ದಾರೆ.

× Chat with us