ಬಾಲಿವುಡ್‌ ಡ್ರಗ್ಸ್‌… ಹಾಸ್ಯ ನಟಿ ಭಾರ್ತಿ ಸಿಂಗ್‌ ಮನೆ ಮೇಲೆ ಎನ್‌ಸಿಬಿ ದಾಳಿ

ಮುಂಬೈ: ಮಾದಕ ವಸ್ತುಗಳ ಸೇವನೆ, ಡೀಲ್‌ ಪ್ರಕರಣಗಳ ಸಂಬಂಧ ಬಾಲಿವುಡ್‌ ನಟ ನಟಿಯರ ಮೇಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ಮುಂದುವರಿಸಿದ್ದು, ಹಾಸ್ಯನಟಿ ಭಾರ್ತಿ ಸಿಂಗ್‌ ಹಾಗೂ ಪತಿ ಹರ್ಷ ಅವರ ನಿವಾಸದ ಮೇಲೆ ದಾಳಿ ನಡೆಸಿ ಡ್ರಗ್ಸ್‌ ವಶಕ್ಕೆ ಪಡೆದಿದ್ದಾರೆ.

ಮುಂಬೈನ ಲೋಖಂಡವಾಲಾದಲ್ಲಿರುವ ಭಾರ್ತಿ ಸಿಂಗ್‌ ಅವರ ಮನೆ ಮೇಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದರು.

ಡ್ರಗ್‌ ಡೀಲರ್‌ವೊಬ್ಬ ಬಾಯ್ಬಿಟ್ಟ ಮಾಹಿತಿ ಆಧರಿಸಿ ಈ ದಾಳಿ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಭಾರ್ತಿ ಸಿಂಗ್‌ ಅವರು ಅನೇಕ ಸಿನಿಮಾಗಳಲ್ಲಿ ಹಾಗೂ ಕಾಮಿಡಿ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

× Chat with us