ನಂಜನಗೂಡು ದೇಗುಲ ತೆರವು ಪ್ರಕರಣ: ತಹಸಿಲ್ದಾರ್‌ ವರ್ಗಾವಣೆ

ಮೈಸೂರು: ನಂಜನಗೂಡು ದೇಗುಲ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ತಹಸಿಲ್ದಾರ್‌ ಮೋಹನ ಕುಮಾರಿ ಅವರನ್ನು ವರ್ಗಾವಣೆ ಮಾಡಲಾಗಿದೆ.

ಮೋಹನ ಕುಮಾರಿ ಅವರನ್ನು ವರ್ಗಾಯಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ನಂಜನಗೂಡಿನ ಹುಚ್ಚಗಣಿ ಮಹದೇವಮ್ಮ ದೇಗುಲ ತೆರವುಗೊಳಿಸಿದ್ದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಹೇಳಿತ್ತು. ಈ ಸಂಬಂಧ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ದೇಗುಲ ತೆರವು ಸರಿಯಲ್ಲ ಎಂದು ಟೀಕಿಸಿದ್ದರು. ಇದರಿಂದ ಎಚ್ಚೆತ್ತ ಸರ್ಕಾರ ಮೈಸೂರು ಜಿಲ್ಲಾಡಳಿತ ಹಾಗೂ ತಹಸಿಲ್ದಾರ್‌ಗೆ ನೋಟಿಸ್‌ ನೀಡಿತ್ತು.

ಇದನ್ನೂ ಓದಿ: ದೇಗುಲ ತೆರವು: ಮೈಸೂರು ಡಿಸಿ, ನಂಜನಗೂಡು ತಹಸಿಲ್ದಾರ್‌ಗೆ ನೊಟೀಸ್

× Chat with us