BREAKING NEWS

ಭಾರತದ ಮೋಸ್ಟ್ ವಾಂಟೆಡ್‌ ಭಯೋತ್ಪಾದಕರ ಪಟ್ಟಿಯಲ್ಲಿದ್ದ 17 ಉಗ್ರರ ನಿಗೂಢ ಸಾವು

ಇಸ್ಲಾಮಾಬಾದ್‌ : ಕಳೆದ ಒಂದೇ ವರ್ಷದಲ್ಲಿ ಭಾರತದ ಮೋಸ್ಟ್ ವಾಂಟೆಡ್‌ ಭಯೋತ್ಪಾದಕರ ಪಟ್ಟಿಯಲ್ಲಿದ್ದ 17 ಉಗ್ರರು ಬೇರೆ ಬೇರೆ ದೇಶಗಳಲ್ಲಿ ಸಾವಿಗೀಡಾಗಿದ್ದಾರೆ. ವಿಶೇಷವೆಂದರೆ ಇವರೆಲ್ಲಾ ಪಾಕಿಸ್ತಾನ, ಅಫ್ಘಾನಿಸ್ತಾನ, ಕೆನಡಾ ಹಾಗೂ ಬ್ರಿಟನ್‌ನಲ್ಲಿ ನಾನಾ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಈ ಪೈಕಿ ಬಹುತೇಕರು ನಿಗೂಢವಾಗಿ ಇಲ್ಲವೇ ಅನಾಮಿಕರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

ಭಾರತಕ್ಕೆ ಬೇಕಾದ ಲಷ್ಕರ್ ಎ ತೊಯ್ಬಾ ಉಗ್ರ ಕೈಸರ್ ಫಾರೂಖ್‌ನನ್ನು ಭಾನುವಾರ ಪಾಕ್‌ನಲ್ಲಿ ಹತ್ಯೆಗೈದ ಬೆನ್ನಲ್ಲೇ ಈ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ತೀವ್ರಗೊಂಡಿದೆ. ಭಾರತಕ್ಕೆ ಬೇಕಾದ ಉಗ್ರರ ಸಾವು ಕಳೆದ ಸುಮಾರು ಒಂದೂವರೆ ವರ್ಷದಲ್ಲಿ ಹೆಚ್ಚಾಗಿ ನಡೆಯುತ್ತಿರುವುದು ಏಕೆ? ಇದರ ಹಿಂದೆ ಯಾರಿದ್ದಾರೆ ಎಂಬಿತ್ಯಾದಿ ಚರ್ಚೆಗಳು ನಡೆದಿವೆ, 2022ರ ಮಾರ್ಚ್ ನಂತರ ಈವರೆಗೆ ಈ ಹತ್ಯೆಗಳು ನಡೆದಿವೆ.

ಹತ್ಯೆಯಾದ ಉಗ್ರರು

1 ಜಹೂರ್ ಮಿಸ್ತಿ : ಕಂದಹಾರ್ ಏರ್‌ ಇಂಡಿಯಾ ವಿಮಾನ ಅಪಹರಣಕಾರ 2022ರ ಮಾ.1ರಂದು ಕರಾಚಿಯಲ್ಲಿ ಹತ್ಯೆ.
2 ರಿಪುದಮನ್ ಸಿಂಗ್ ಮಲ್ಕ್ : 1995ರ ಏರಿಂಡಿಯಾ ಬಾಂಬ್ ದಾಳಿ ಆರೋಪಿ ಕೆನಡಾದಲ್ಲಿ 2022, ಜು.14ರಂದು ಹತ್ಯೆ.
3 ಮೊಹಮ್ಮದ್ ಲಾಲ್‌ : ಐಎಸ್‌ಐ ಏಜೆಂಟ್, 2022 ರ ಸೆಪ್ಟೆಂಬರ್ 19 ರಂದು ನೇಪಾಳದಲ್ಲಿ ಗುಂಡಿಕ್ಕಿ ಕೊಲೆ.
4 ಪರ್ವಿಂದರ್‌ಸಿಂಗ್ ಸಂಧು : 2021 ಪಂಜಾಬ್ ಪೊಲೀಸ್ ಮುಖ್ಯ ಕಚೇರಿ ಮೇಲಿನ ದಾಳಿ ಆರೋಪಿ, ಲಾಹೋರ್‌ನ ಆಸ್ಪತ್ರೆಯಲ್ಲಿ ಡ್ರಗ್ ಓವರ್‌ಡೋಸ್‌ನಿಂದ ಸಾವು.
5 ಬಶೀರ್‌ಅಹ್ಮದ್ ರ್ಪೀ : ಕಾಶ್ಮೀರ ವಿರುದ್ಧ ಕುತಂತ್ರ ರೂಪಿಸಿದ ಕುಖ್ಯಾತ ಉಗ್ರ ಕಮಾಂಡರ್, ರಾವಲ್ಪಿಂಡಿಯಲ್ಲಿ ಗುಂಡಿಕ್ಕಿ ಹತ್ಯೆ.
6 ಸೈಯದ್‌ ಖಾಲಿದ್ ರಜಾ : ಅಲ್ ಬದ‌ರ್‌ ಕಮಾಂಡರ್, 2023ರ ಫೆ.26ರಂದು ಕರಾಚಿಯಲ್ಲಿ ಕೊಲೆ.
7 ಏಜಾಜ್ ಅಹ್ಮದ್ ಅಹಂರ್ಗ : ಇಸ್ಲಾಮಿಕ್ ಸ್ಟೇಟ್ ಆಫ್ ಜಮ್ಮು-ಕಾಶ್ಮೀರ ಸಂಘಟನೆ ಉಗ್ರ, ಅಫ್ಘಾನಿಸ್ತಾನದಲ್ಲಿ ಗುಂಡಿಕ್ಕಿ ಹತ್ಯೆ
8 ಸೈಯದ್ ನೂರ್ ಶಲೋರ್ಬ್‌ : ಕಾಶ್ಮೀರದಲ್ಲಿ ಉಗ್ರವಾದಕ್ಕೆ ಕುಮ್ಮಕ್ಕು ನೀಡುತ್ತಿದ್ದ ಉಗ್ರ, ಪಾಕಿಸ್ತಾನದ ಬಾರಾ ಬೈಬರ್‌ನಲ್ಲಿ ಗುಂಡಿಕ್ಕಿ ಹತ್ಯೆ
9 ಪರಮ್‌ ಜಿತ್ ಸಿಂಗ್ ಪಂಜ್ವಾ : ಖಲಿಸ್ತಾನ್ ಕಮಾಂಡೋ ಫೋರ್ಸ್ ಮುಖ್ಯಸ್ಥ, 2023ರ ಮೇ 6ರಂದು ಲಾಹೋರ್‌ನಲ್ಲಿ ಗುಂಡಿಕ್ಕಿ ಹತ್ಯೆ
10 ಅವತಾರ್‌ ಸಿಂಗ್‌ ಖಂಡಾ : ಖಲಿಸ್ತಾನಿ ಉಗ್ರ 16 ಜೂನ್ 2023ರಂದು ಬ್ರಿಟನ್‌ನ ಬರ್ಮಿಂಗ್‌ಹ್ಯಾಂನಲ್ಲಿ ವಿಷಪ್ರಾಶನದಿಂದ ಸಾವು
11 ಹರ್ದೀಪ್ ಸಿಂಗ್ ನಿಜ್ಜರ್ : ಖಲಿಸ್ತಾನಿ ಉಗ್ರ, 2023ರ ಜೂ.18ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾದ ಗುರುದ್ವಾರದ ಹೊರಗೆ ಅಪರಿಚಿತರಿಂದ ಹತ್ಯೆ
12 ಸರ್ದಾರ್‌ಹುಸೇನ್ ಅಲೈನ್ : ಪಾಕಿಸ್ತಾನಿ ಜಮಾತ್‌ ಉದ್ ದಾವಾ ಉಗ್ರ, ಸಿಂದ್ ನಲ್ಲಿ 2023ರ ಆ.1ರಂದು ಗುಂಡಿಕ್ಕಿ ಹತ್ಯೆ
13 ರಿಯಾಜ್ ಅಹ್ಮದ್ ಅಕಾ ಆಬು ಖಾಸಿಂ : ಲಷ್ಕರ್‌ ಕಮಾಂಡರ್ 2023ರ ಜ.1ರಂದು ಪಿಒಕೆಯ ರಾವಲ್‌ ಕೋಟ್ ಮಸೀದಿಯೊಳಗೆ ಗುಂಡಿಕ್ಕಿ ಕೊಲೆ.
14 ಸುಯ್ದಿಲ್ ಸಿಂಗ್ : ಖಲಿಸ್ತಾನಿ ಉಗ್ರ 2023ರ ಸೆ.20ರಂದು ಕೆನಡಾದ ವಿನ್ನಿಪೆಗ್‌ನಲ್ಲಿ ಗುಂಡಿಕ್ಕಿ ಹತ್ಯೆ.
15 ಜಿಯಾವುರ್ ರೆಹಮಾನ್‌ : ಹಿಜ್ಬುಲ್ ಮುಜಾಹಿದೀನ್ ಉಗ್ರ ನಾಯಕ, 2023ರ ಸೆಪ್ಟೆಂಬರ್‌ನಲ್ಲಿ ಗುಂಡಿಕ್ಕಿ ಹತ್ಯೆ
16 ಮುಫ್ತಿ ಕೈಸರ್‌ ಫಾರೂಖ್: ಎಲ್‌ಇಟಿ ಸಂಸ್ಥಾಪಕ ಸದಸ್ಯ, ಸೆ. 30 ರಂದು ಪಾಕಿಸ್ತಾನದ ಕರಾಚಿಯ ಸೊಹ್ರಾಬ್ ಗೋ‌ನಲ್ಲಿ ಗುಂಡಿಕ್ಕಿ ಹತ್ಯೆ.
17 ರೂವಾರಿ ಹಫೀಜ್ ಸಯೀದ್‌ ಆಪ್ತ ಪಾಕಲ್ಲಿ ಹತ್ಯೆ

lokesh

Recent Posts

ರೈತಾಪಿ ವರ್ಗಕ್ಕೆ ಬಿಗ್‌ ಶಾಕ್‌ ಕೊಟ್ಟ ಹವಾಮಾನ ಇಲಾಖೆ: ಏನದು ಗೊತ್ತಾ.?

ನವದೆಹಲಿ: ಈ ವರ್ಷ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮುಂಗಾರು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.…

20 mins ago

ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನಜೀರ್‌ ಅಹಮ್ಮದ್‌ ರಾಜೀನಾಮೆ

ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಎಂಎಲ್‌ಸಿ ನಜೀರ್‌ ಅಹಮ್ಮದ್‌ ಅವರು ರಾಜೀನಾಮೆ ನೀಡಿದ್ದಾರೆ. ನಜೀರ್‌ ಅಹಮ್ಮದ್‌ ಅವರು ಸಿಎಂ…

1 hour ago

ಓದುಗರ ಪತ್ರ: ನದಿ ಮಾಲಿನ್ಯ ತಡೆಗಟ್ಟಿ

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಮೂಲಕ ಹರಿಯುವ ಲಕ್ಷ್ಮಣತೀರ್ಥ ನದಿ ಕಾವೇರಿ ನದಿಯ ಉಪನದಿಯಾಗಿದ್ದು, ಹುಣಸೂರು ಭಾಗದ ಬಹಳ ಮುಖ್ಯವಾದ…

4 hours ago

ಓದುಗರ ಪತ್ರ: ಸಚಿವ ಸೋಮಣ್ಣ ಹೇಳಿಕೆ ಸ್ವಾಗತಾರ್ಹ

ರೈಲ್ವೆ ನೇಮಕಾತಿ ಪರೀಕ್ಷೆಗಳನ್ನು ಕರ್ನಾಟಕದವರು ಇನ್ನು ಮುಂದೆ ಕನ್ನಡದಲ್ಲಿ ಬರೆಯಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಹಾಗೂ ರೈಲ್ವೆ ಇಲಾಖೆ…

4 hours ago

ಓದುಗರ ಪತ್ರ: ಅಪಾಯಕಾರಿ ಮರದ ಕೊಂಬೆ ತೆರವುಗೊಳಿಸಿ

ಮೈಸೂರಿನ ಮಾನಸಗಂಗೋತ್ರಿಯಿಂದ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿಗೆ (ಎಸ್‌ಜೆಸಿಇ) ಸಂಪರ್ಕ ಕಲ್ಪಿಸುವ ರಸ್ತೆಯ ಎಡ ಬದಿಯಲ್ಲಿ ಇರುವ ಮರವೊಂದರ ಕೊಂಬೆ…

4 hours ago

ಓದುಗರ ಪತ್ರ: ನವ ಭಾರತದ ನಿರ್ಮಾತೃ ಡಾ.ಅಂಬೇಡ್ಕರ್

ಶ್ರೇಷ್ಠ ಸಂವಿಧಾನದ ಮೂಲಕ ಶೋಷಿತ ಸಮುದಾಯಗಳಿಗೆ ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮೀಸಲು ಸೌಲಭ್ಯ ಕಲ್ಪಿಸುವ ಮೂಲಕ ಅವರ ಬಾಳಿಗೆ…

4 hours ago