ಮೈಮುಲ್‌ ಚುನಾವಣೆಯಲ್ಲಿ ಸೋಲು: ವಿಷ ಸೇವಿಸಿ ಸಿದ್ದರಾಮಯ್ಯ ಆಪ್ತ ಬಲರಾಮ್‌ ಆತ್ಮಹತ್ಯೆ!

ಮೈಸೂರು: ಈಚೆಗೆ ನಡೆದ ಮೈಮುಲ್‌ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತಗೊಂಡು ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕೆ.ಸಿ.ಬಲರಾಮ್‌ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೆ.ಸಿ.ಬಲರಾಮ್‌ ಅವರು ಚುನಾವಣೆಯಲ್ಲಿ ಸೋತ ಕಾರಣ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಕೆ.ಸಿ.ಬಲರಾಮ್‌ ಜಿಲ್ಲಾ ಪಂಚಾಯಿತಿ ಅಧ್ಯಕ್ಷರೂ ಆಗಿದ್ದರು. ಮೂರು ದಶಕಗಳಿಂದ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರೂ ಹೌದು.

× Chat with us