ಕೆ-ಸೆಟ್‌ ಅಕ್ರಮ ಆರೋಪ: ಲೋಪವಿದ್ದರೆ ತಜ್ಞರ ಸಮಿತಿಗೆ ನೀಡಿ ಪರಿಶೀಲನೆ- ಕುಲಪತಿ ಹೇಮಂತ್‌ಕುಮಾರ್

ಮೈಸೂರು: ಕೆ-ಸೆಟ್‌ ಪರೀಕ್ಷೆ ಪ್ರಶ್ನೆ ಪತ್ರಿಕೆಯ ಉತ್ತರ ಆಯ್ಕೆಯಲ್ಲಿ ಲೋಪವಿದ್ದರೆ ತಜ್ಞರ ಸಮಿತಿಗೆ ನೀಡಿ ಪರಿಶೀಲಿಸಲಾಗುವುದು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್‌ ತಿಳಿಸಿದ್ದಾರೆ.

ಕೆ-ಸೆಟ್‌ ಪರೀಕ್ಷೆ ಪ್ರಶ್ನೆ ಪತ್ರಿಕೆಯ ಉತ್ತರ ಆಯ್ಕೆಯಲ್ಲಿ ಲೋಪವಾಗಿದೆ ಎಂದು ಸಂಸದ ಪ್ರತಾಪಸಿಂಹ ಅವರು ಪತ್ರ ಬರೆದಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಕುಲಪತಿ ಹೇಮಂತ್‌ಕುಮಾರ್‌, ಕೆ-ಸೆಟ್ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆ ಯುಜಿಸಿ ನಿಯಮದಂತೆ ವಿಷಯ ತಜ್ಞರ ಸಮಿತಿ ನೇತೃತ್ವದಲ್ಲಿ ಸಿದ್ಧಪಡಿಸಲಾಗಿದೆ. ಈ ಸಮಿತಿ ಮೈಸೂರು ಹಾಗೂ ಹೊರಗಿನ ವಿವಿಯ ತಜ್ಞರು ಒಳಗೊಂಡಿರುತ್ತಾರೆ. ಪ್ರಶ್ನೆ ಪತ್ರಿಕೆಯ ಉತ್ತರ ಆಯ್ಕೆಯಲ್ಲಿ ಲೋಪ ಕಂಡು ಬಂದಿದ್ದರೆ ಅದನ್ನು ತಜ್ಞರ ಸಮಿತಿಗೆ ನೀಡಿ ಪರಿಶೀಲಿಸಲಾಗುವುದು. ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗದು ಎಂದು ಸ್ಪಷ್ಟಪಡಿಸಿದ್ದಾರೆ.

ಉತ್ತರ ಆಯ್ಕೆ ಆಕ್ಷೇಪಣೆಗೆ 1,000 ರೂ. ಶುಲ್ಕ ನಿಗದಿ ಮಾಡಿರುವುದು ಯುಜಿಸಿ. ಇದರಲ್ಲಿ ಮೈಸೂರು ವಿವಿ ಪಾತ್ರವಿಲ್ಲ. ಸಿಸಿಟಿವಿ ಕ್ಯಾಮೆರಾಗಳು ಸಂಪೂರ್ಣ ಸುಸ್ಥಿತಿಯಲ್ಲಿವೆ. ಕಳೆದ ಒಂದು ತಿಂಗಳ ವಿಡಿಯೊ ಫೂಟೇಜ್ ಕೂಡ ಲಭ್ಯವಿರುತ್ತದೆ ಎಂದು ಹೇಳಿದ್ದಾರೆ.

× Chat with us