ನಾಗನಹಳ್ಳಿ ರೈಲ್ವೆ ಸ್ಯಾಟಲೈಟ್ ಟರ್ಮಿನಲ್ ನಿರ್ಮಾಣಕ್ಕೂ ಯೋಜನೆ: ಸಂಸದ ಪ್ರತಾಪಸಿಂಹ
ಮೈಸೂರು:ಮೈಸೂರು ರೈಲ್ವೆ ನಿಲ್ದಾಣ ಅಭಿವೃದ್ಧಿ ಹಾಗೂ ನಾಗನಹಳ್ಳಿ ರೈಲ್ವೆ ಸ್ಯಾಟಲೈಟ್ ಟರ್ಮಿನಲ್ ನಿರ್ಮಾಣದ ೪೯೩ ಕೋಟಿ ರೂ.ಯೋಜನೆಗೆ ಕೇಂದ್ರ ಸರ್ಕಾರ ಹಾಗೂ ಕೇಂದ್ರ ರೈಲ್ವೆ ಸಚಿವಾಲಯದಿಂದ ಅನುಮತಿ ದೊರೆತಿದ್ದು ಶೀಘ್ರದಲ್ಲೇ ಯೋಜನೆಯನ್ನು ಕಾರ್ಯಗತಗೊಳಿಸಲು ಅಗತ್ಯ ಕ್ರಮವನ್ನು ರೈಲ್ವೆ ಇಲಾಖೆ ಕೈಗೊಳ್ಳಲಿದೆ ಎಂದು ಮೈಸೂರು- ಕೊಡಗು ಕ್ಷೇತ್ರ ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ನಗರದ ರೈಲ್ವೆಭವನದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದ ಸಭಾಂಗಣದಲ್ಲಿ ಕೇಂದ್ರ ರೈಲ್ವೆ ಸಚಿವಾಲಯದಿಂದ ಅನುಮೋದನೆ ದೊರೆತಿರುವ ಪ್ರಮುಖ ಯೋಜನೆಗಳ ಅನುಷ್ಟಾನ ಕುರಿತು ಗುರುವಾರ ನಡೆದ ವಿವಿಧ ರೈಲ್ವೆ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.
ಜನವರಿ ವೇಳೆಗೆ ಟೆಂಡರಿಂಗ್ ಕೆಲಸವಾಗಲಿದೆ. ೨೦೨೩ರ ಜೂನ್ ವೇಳೆಗೆ ಈ ಕಾರ್ಯ ಪೂರ್ಣಗೊಳ್ಳಲಿದೆ. ರಾಜ್ಯ ಸರ್ಕಾರ ತನ್ನಪಾಲಿನ ೧೧೯ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಹಾಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುವುದಾಗಿ ಹೇಳಿದರು
೫೩. ೧ ಕೋಟಿ ರೂ. ವೆಚ್ಚದಲ್ಲಿ ಮೈಸೂರು ರೈಲು ನಿಲ್ದಾಣ ಮರು ಅಭಿವೃದ್ಧಿಪಡಿಸಲು ೩ ಹಂತದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು.ಮೊದಲ ಹಂತವಾಗಿ ಕ್ವಾಟ್ರಸ್‌ಗಳು ಮತ್ತು ಕಚೇರಿಗಳ ನಿರ್ಮಾಣ ಮಾಡಲಾಗುವುದು. ಈ ಕಾರ್ಯಕ್ಕಾಗಿ ಈ ವ್ಯಾಪ್ತಿಗೆ ಬರುವ ರೈಲ್ವೆ ಕ್ವಾಟ್ರಸ್‌ಗಳನ್ನು ತೆರವುಗೊಳಿಸಲಾಗುವುದು. ಅಲ್ಲಿ ವಾಸವಿರುವವರಿಗೆ ಶಾಶ್ವತ ವ್ಯವಸ್ಥೆ ಕಲ್ಪಿಸುವವರೆಗೆ ನಗರದ ವಿವಿಧಕಡೆ ಖಾಸಗಿ ಅಪಾರ್ಟ್‌ಮೆಂಟ್‌ಗಳಲ್ಲಿ ತಾತ್ಕಾಲಿಕವಾಗಿ ವಾಸಕ್ಕೆ ಉತ್ತಮ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಮೈಸೂರು ನಿಲ್ದಾಣ ಪ್ರದೇಶ ಮೇಲ್ದರ್ಜೆಗೇರಿಸುವುದು ಮತ್ತು ೩ ನೇ ಹಂತದಲ್ಲಿ ನಾಗನಹಳ್ಳಿಯಲ್ಲಿ ಯಾರ್ಡ್ ನಿರ್ಮಾಣ ಮಾಡಲಾಗುವುದು.ನಾಗನಹಳ್ಳಿ ಸ್ಯಾಟಲೈಟ್ ಟ್ರಕ್‌ಟರ್ಮಿನಲ್ ನಿರ್ಮಾಣಕ್ಕಾಗಿ ಈ ಮಾರ್ಗದ ಶಾಲೆಗಳ ತೆರವು, ಭೂಮಿ ಪಡೆಯುವುದು,ಈ ಮಾರ್ಗದಲ್ಲಿ ಬರುವ ಮರಗಳ ತೆರವಿಗಾಗಿ ಸಂಬಂಧಪಟ್ಟವರಿಗೆ ಪತ್ರ ಬರೆದು ಚರ್ಚಿಸಲಾಗಿದೆ. ಈ ಕೆಲಸ ನಿರ್ವಹಿಸಲು ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ವಿವರಿಸಿದರು.
ಕುಶಾಲನಗರ ರೈಲು ಯೋಜನೆ
ಮೈಸೂರು- ಕುಶಾಲನಗರ ನಡುವಿನ ೮೭ ಕಿ.ಮೀ. ಉದ್ದದ ನೂತನ ರೈಲು ಯೋಜನೆ ಅನುಷ್ಟಾನಕ್ಕೆ ಈಗಾಗಲೇ ೧೮೫೪ ಕೋಟಿ ರೂ.ಬಿಡುಗಡೆಯಾಗಿದೆ. ಶೀಘ್ರದಲ್ಲಿ ಟೆಂಡರ್ ನೀಡುವ ಸಲುವಾಗಿ ಅಗತ್ಯ ಭೂಮಿ ಪಡೆಯಲು ಸರ್ವೇ ಕಾರ್ಯ ಪ್ರಗತಿಯಲ್ಲಿದೆ.ಈ ರೈಲು ಮಾರ್ಗದಲ್ಲಿ ಬೆಳಗೊಳ,ಇಲವಾಲ, ಬಿಳಿಕೆರೆ,ಉದ್ದೂರು, ಹುಣಸೂರು, ಸತ್ಯಗಾಲ,ಪಿರಿಯಾಪಟ್ಟಣ,ದೊಡ್ಡಹೊನ್ನೂರು,ಕುಶಾಲನಗರ ಸೇರಿದಂತೆ ಒಟ್ಟು ೯ ರೈಲ್ವೆ ನಿಲ್ದಾಣಗಳ ಬರಲಿವೆ. ಈ ರೈಲುಮಾರ್ಗದ ಸಂಚಾರ ವೇಗ ಗಂಟೆಗೆ ೧೬೦ ಕಿ.ಮೀ ಆಗಿದ್ದು ಕೊಡಗು ಮತ್ತು ಮೈಸೂರು ಜನತೆಗೆ ಇದರ ಸೇವೆ ಲಭ್ಯವಾಗಲಿದೆ ಎಂದರು.
ಅಶೋಕಪುರಂ ರೈಲು ನಿಲ್ದಾಣ ಮೇಲ್ದರ್ಜೆಗೆ
ಅಶೋಕಪುರಂ ನಿಲ್ದಾಣವನ್ನು ಅಭಿವೃದ್ಧಿಗೊಳಸಲು ಮೊದಲ ಹಂತದಲ್ಲಿ ೧೫.೧೭ ಕೋಟಿ ರೂ. ಮತ್ತು ಎರಡನೇ ಹಂತದಲ್ಲಿ ೧೩.೩೯ ಕೋಟಿ ರೂ. ಬಿಡುಗಡೆ ಯಾಗಿದ್ದು ಮೂರು ಹೆಚ್ಚುವರಿ ಪ್ಲಾಟ್ ಫಾರ್ಮ್‌ಲೈನ್‌ಗಳ ನಿರ್ಮಾಣ ಮತ್ತು ಈಗ ಇರುವ ಪ್ಲಾಟ್ ಫಾರ್ಮ್‌ಗಳ ವಿಸ್ತರಣೆ, ವರ್ಕ್‌ಶಾಪ್‌ಗೆ ತೆರಳಲು ಎರಡು ಮಾರ್ಗಗಳ ರಚನೆ,ಕೋಚ್‌ಗಳನ್ನು ಸ್ವಚ್ಛಗೊಳಿಸಲು ನೀರು ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ೫೩೧೦ ಚದರಡಿ ಹಾಗೂ ೩೪೪ ಚದರಡಿ ಖಾಸಗಿ ಜಾಗದ ಅವಶ್ಯಕತೆ ಇದ್ದು ಈ ಕೆಲಸವನ್ನು ಶೀಘ್ರದಲ್ಲಿ ಮುಗಿಸಿ ಕೆಲಸ ಆರಂಭಿಸಲಾಗುವುದು ಎಂದು ಪ್ರತಾಪಸಿಂಹ ಹೇಳಿದರು.
ಸಿಂಹ ಹೇಳಿದ್ದೇನು?
ಕುಕ್ಕರಹಳ್ಳಿ ಕೆರೆ ಎದುರಿನ ಗೇಟ್ ಸ್ಥಳದಲ್ಲಿ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ೨೬.೫೪ ಕೋಟಿ ರೂ ಬಿಡುಗಡೆಗೊಂಡಿದೆ
ಕೆಆರ್‌ಎಸ್ ರಸ್ತೆಯಲ್ಲಿ ರೈಲ್ವೆ ಮೇಲು ಸೇತುವೆ ಕೆಲಸ ಕಾರ್ಯಗತಕ್ಕೆ ೪೧.೮೨ ಕೋಟಿ ರೂ. ಬಿಡುಗಡೆಯಾಗಿದೆ.
ಮೈಸೂರು-ಚಾಮರಾಜನಗರ ನಡುವೆ ಎಲೆಕ್ಟ್ರಿಕ್ ರೈಲು ಸಂಚಾರಕ್ಕೆ ಅಗತ್ಯವಾದ ಎಲ್ಲ ಕೆಲಸ ಪೂರ್ಣಗೊಂಡಿದೆ.
ಮೈಸೂರು ರೈಲ್ವೆ ನಿಲ್ದಾಣದಲ್ಲಿ ಸ್ಥಳಾಭಾವದಿಂದ ರೈಲುಗಳ ಸಂಚಾರ ಚಾಮರಾಜನಗರಕ್ಕೆ ವಿಸ್ತರಿಸಲು ಯೋಜನೆ
ಕಡಕೊಳ ರೈಲು ನಿಲ್ದಾಣದ ಬಳಿ ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಪಾರ್ಕ್ ೨.೫ ಕೋಟಿ ರೂ. ಬಿಡುಗಡೆ
ಯಾದವಗಿರಿ ಬಳಿ ಹೊಸ ಟರ್ಮಿನಲ್ ನಿರ್ಮಾಣ,ಹೊಸ ಸ್ಟೇಷನ್,ಬೆಳಗೊಳದಲ್ಲಿ ೨ ಸ್ಟೆಬಲಿಂಗ್ ಲೈನ್.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ಯೋಗದಿನದಂದು ಮೈಸೂರಿಗೆ ಆಗಮಿಸಿದ್ದ ವೇಳೆ ೧೦ ಮಾರ್ಗಗಳ ಹೈವೇ ಸ್ಯಾಟಲೈಟ್ ಟರ್ಮಿನಲ್ ಘೋಷಣೆ ಮಾಡಿದ್ದರು.ಜಾಗದ ಸಮಸ್ಯೆ ತೊಡಕಾಗಿತ್ತು. ಈಗ ಈ ಯೋಜನೆ ಅನುಷ್ಟಾನಗೊಳಿಸಲು ಅವಕಾಶ ದೊರೆತಿದೆ.
-ಪ್ರತಾಪಸಿಂಹ, ಸಂಸದ
ಎಚ್.ಡಿ.ಕೋಟೆ : ತಾಲೂಕಿನ ಚೌಡಹಳ್ಳಿ ಗ್ರಾಮದ ಪಕ್ಕದಲ್ಲೇ ಇರುವ ಜಮೀನೊಂದರಲ್ಲಿ ಹಸುವಿನ ಮೇಲೆ ದಾಳಿ ನಡೆಸಿರುವ ಹುಲಿ ಹಸುವನ್ನು ಕೊಂದು…
ಮೈಸೂರು : ಮೈಸೂರು ಮೂಲದ ಗೃಹಿಣಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್ ಟೇಬಲ್ ನೊಂದಿಗೆ…
ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹನುಮ ಜಯಂತ್ಯೋತ್ಸವ ಸಮಿತಿ ವತಿಯಿಂದ ಶನಿವಾರ ನಡೆದ ಏಳನೇ ವರ್ಷದ ಹನುಮೋತ್ಸವ ಮೆರವಣಿಗೆಯು…
ಮನೆಯಲ್ಲಿ ರಾತ್ರಿಯಿಡೀ ಕೂಡಿಹಾಕಿ ಹಲ್ಲೆ ನಡೆಸಿದ ಮೂವರು ಆರೋಪಿಗಳು; ಹನಿಟ್ರ್ಯಾಪ್ ಶಂಕೆ, ತನಿಖೆ ಚುರುಕು ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ…
ಮೈಸೂರು : ನಗರದಲ್ಲಿ ಯುನಿಟಿ ಮಾಲ್ ನಿರ್ಮಿಸಲು ನಮ್ಮ ವಿರೋಧ ಇಲ್ಲ. ಆದರೆ, ಸರ್ಕಾರ ಗೊಂದಲವಿಲ್ಲದ ಸ್ಥಳ ನೀಡದೆ ದಿಕ್ಕು…
ಮೈಸೂರು : ಚುಮು ಚುಮು ಚಳಿಯ ನಡುವೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಗ್ರಾಹಕರ ಆಕರ್ಷಿಸುವ ಹಾಗೂ ಗ್ರಾಮೀಣ ಸೊಗಡಿನ…