BREAKING NEWS

ಜಾಗತಿಕ ಮಟ್ಟದ ಮನ್ನಣೆ ಪಡೆದುಕೊಂಡ ಕನ್ನಡಿಗರ ಹೆಮ್ಮೆಯ ಮೈಸೂರ್ ಪಾಕ್​

ಮೈಸೂರು : ಒಂದೊಂದು ಊರಿಗೆ ಹೋದಾಗಲೂ ಒಂದೊಂದು ಆಹಾರದ ವಿಶೇಷತೆಗಳು ಇರುತ್ತವೆ. ಅವು ಕೆಲ ಪ್ರದೇಶಗಳಿಗೆ ಮಾತ್ರ ಫೇಮಸ್​ ಆಗಿವೆ. ಆದ್ರೆ, ತನ್ನ ಹೆಸರಿನಲ್ಲಿಯೇ ಮೈಸೂರನ್ನು ಪ್ರತಿನಿಧಿಸುವ ಮೈಸೂರ್‌ ಪಾಕ್‌ ದೇಶ ವಿದೇಶಗಳ ತನಕ ಹೆಸರು ವಾಸಿಯಾಗಿದೆ. ಇದೀಗ ಈ ಮೈಸೂರುಪಾಕ್​ ವಿಶ್ವದ ಸ್ಟ್ರೀಟ್​ ಫುಡ್​ನಲ್ಲಿ 14ನೇ ಸ್ಥಾನ ಪಡೆದುಕೊಂಡಿದೆ.

ಮೈಸೂರು ಅರಸರ ಕಾಲದಲ್ಲಿ ತಯಾರಾಗಿದ್ದ ಮೈಸೂರುಪಾಕ್, ಮೈಸೂರು ಅಂದ್ರೆ ಮೈಸೂರುಪಾಕ್ ಎನ್ನುವಷ್ಟು ಖ್ಯಾತಿ ಗಳಿಸಿದ್ದು, ಇದೀಗ ಜಾಗತಿಕ ಮಟ್ಟದ ಮನ್ನಣೆ ಪಡೆದುಕೊಂಡಿದೆ. 4.4 ರೇಟಿಂಗ್ ಪಡೆದ ಮೈಸೂರುಪಾಕ್, ಆನ್‌ಲೈನ್‌ ಮಾರ್ಕೆಟ್​ನಲ್ಲಿ ವಿಶ್ವದ 50 ತಿಂಡಿ ತಿನಿಸುಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಇನ್ನು ಕುಲ್ಫಿಗೆ 18ನೇ ಸ್ಥಾನ, ಕುಲ್ಫಿ ಫಲೂದಾಗೆ 32ನೇ ಸ್ಥಾನ ಸಿಕ್ಕಿದೆ.

ಟೇಸ್ಟ್ ಅಟ್ಲಾಸ್, ವಿಶ್ವದ ಬೆಸ್ಟ್ ಸ್ಟ್ರೀಟ್ ಫುಡ್ ಸ್ವೀಟ್​ನ ಟಾಪ್ 50​ ಪಟ್ಟಿ ಬಿಡುಗಡೆ ಮಾಡಿದ್ದು,  ಇದರಲ್ಲಿ ಮೈಸೂರುಪಾಕ್​ಗೆ 4.4 ರೇಟಿಂಗ್​ನಿಂದಿಗೆ 14ನೇ ಸ್ಥಾನ​ ಸಿಕ್ಕಿದೆ. ಇನ್ನು ಕುಲ್ಫಿಗೆ 4.3 ರೇಟಿಂಗ್​ ನೋಂದಿಗೆ 18ನೇ ಸ್ಥಾನ ನೀಡಲಾಗಿದೆ. ಫಲೂದಾ 4.0 ರೇಟಿಂಗ್​ನೊಂದಿಗೆ 32ನೇ ಸ್ಥಾನ ಪಡೆದುಕೊಂಡಿದೆ.

ಇಂತಹ ಮೈಸೂರ್ ಪಾಕ್ ನಮ್ಮ ಮೈಸೂರಿನಲ್ಲಿಯೇ ತಯಾರಾಗಿದ್ದು ಎನ್ನುವುದೇ ಕನ್ನಡಿಗರೆಲ್ಲರಿಗೂ ಹೆಮ್ಮೆ ತರುವ ವಿಚಾರ. ಅಷ್ಟೇ ಅಲ್ಲದೆ ದೇಶ ವಿದೇಶಗಳಿಗೆ ಮೈಸೂರಿನ ಹೆಸರನ್ನು ಪರಿಚಯಿಸಿದ ಸಿಹಿ ತಿನಿಸು ಕೂಡ ಹೌದು. ಇಂತಹ ತಿನಿಸು ಮೈಸೂರು ಅರಮನೆಯ ಪಾಕಶಾಲೆಯಲ್ಲಿಯೇ ತಯಾರಾಗಿದ್ದು ಎನ್ನುವುದೇ ಸಂತಸದ ವಿಚಾರ.

andolanait

Recent Posts

ನಮ್ಮ ತಂದೆ ಆರೋಗ್ಯ ಸ್ಥಿತಿ ಗಂಭೀರ: ಈಶ್ವರ್‌ ಖಂಡ್ರೆ

ಬೀದರ್:‌ ನಮ್ಮ ತಂದೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಸತತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ…

17 mins ago

ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ರಾಜ್ಯದಲ್ಲಿ ಸಿಎಂ ಕುರ್ಚಿ ಕಿತ್ತಾಟ, ನಾಯಕತ್ವ ಬದಲಾವಣೆ ವಿಚಾರ ತಣ್ಣಗಾಗಿರುವ ಬೆನ್ನಲ್ಲೇ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಎಐಸಿಸಿ…

22 mins ago

ಕಿಚ್ಚ ಸುದೀಪ್‌ ವಿರುದ್ಧ ರಣಹದ್ದು ಸಂರಕ್ಷಣಾ ಟ್ರಸ್ಟ್‌ ದೂರು: ಕಾರಣ ಇಷ್ಟೇ.!

ಬೆಂಗಳೂರು: ಬಿಗ್‌ಬಾಸ್-‌12 ರಿಯಾಲಿಟಿ ಶೋನಲ್ಲಿ ರಣಹದ್ದುಗಳ ಬಗ್ಗೆ ನಟ ಕಿಚ್ಚ ಸುದೀಪ್‌ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ…

32 mins ago

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ಮುಹೂರ್ತ ಫಿಕ್ಸ್‌

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಚುನಾವಣೆ ಮುಹೂರ್ತ ಫಿಕ್ಸ್‌ ಆಗಿದ್ದು, ಜೂನ್.‌30ರೊಳಗೆ ಜಿಬಿಎ ವ್ಯಾಪ್ತಿಯಲ್ಲಿರುವ 5 ಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ…

1 hour ago

ಮೈಸೂರು| ಹುಬ್ಬಳ್ಳಿಯಲ್ಲಿ ಮಹಿಳೆ ಮೇಲಿನ ದೌರ್ಜನ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ

ಮೈಸೂರು: ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಮಹಿಳೆ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಮೈಸೂರು ಜಿಲ್ಲಾ ಬಿಜೆಪಿ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಲಾಯಿತು.…

2 hours ago

ಆಂದೋಲನ ವರದಿ ಫಲಶೃತಿ: ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಭಕ್ತರಿಗೆ ಸರತಿ ಸಾಲಿನ ಶೆಡ್ ನಿರ್ಮಾಣಕ್ಕೆ ಗುದ್ದಲಿಪೂಜೆ

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಪ್ರಸಿದ್ದ ಪ್ರೇಕ್ಷಣಿಯ ಕ್ಷೇತ್ರ ಹಾಗೂ ಹಿಮವದ್ ಗೋಪಾಲಸ್ವಾಮಿ ನೆಲೆಸಿರುವ ಕ್ಷೇತ್ರವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟದ…

2 hours ago