BREAKING NEWS

ಮೈಸೂರು: ಮೈಮುಲ್‌ ಅಧ್ಯಕ್ಷ ರಾಜೀನಾಮೆ..

ಮೈಸೂರು: ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ(ಮೈಮುಲ್) ಒಕ್ಕೂಟದ ಅಧ್ಯಕ್ಷ ಪಿ.ಎಂ ಪ್ರಶನ್ನ ಕುಮಾರ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪಿರಿಯಾಪಟ್ಟಣ ಮಾಜಿ ಶಾಸಕ ಕೆ.ಮಹದೇವ‌ ಅವರ ಪುತ್ರರಾಗಿರುವ ಪಿ.ಎಂ ಪ್ರಶನ್ನ ಕುಮಾರ್‌ ಅವರು, ಸಚಿವ ಕೆ.ವೆಂಕಟೇಶ್‌ ಅವರ ಕಿರುಕುಳಕ್ಕೆ ಬೇಸತ್ತು ರಾಜೀನಾಮೆ ನೀಡಿದ್ದಾರೆ ಎನ್ನಲಾಗ್ತಿದೆ.

ಸಚಿವ ಕೆ.ವೆಂಕಟೇಶ್ ಅವರು ಆರು ತಿಂಗಳಲ್ಲಿ 24 ನೋಟಿಸ್ ಕೊಟ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ಇತ್ತೀಚೆಗಷ್ಟೇ ಪ್ರಸನ್ನ ಅವರು ನೇರವಾಗಿ ಆರೋಪಿಸಿದ್ದರು. ಆದರೆ, ಇದೀಗ ಪ್ರಸನ್ನ ಅವರು ದಿಢೀರ್ ಅಂತ ತಮ್ಮ ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಈವರೆಗೂ ಪ್ರಶನ್ನ ಅವರ ರಾಜೀನಾಮೆ ಅಂಗೀಕಾರವಾಗಿಲ್ಲ‌.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಮೈಸೂರು | ಗನ್‌ ಹಿಡಿದು ರೀಲ್ಸ್‌ , ಖಾಕಿ ಗ್ರೀಲ್‌

ಮೈಸೂರು : ಯುವಜನರಿಗೆ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್‌ ಆಗುವ ಹುಚ್ಚು ಕಡಿಮೆಯೇನಿಲ್ಲ. ಹೀಗಾಗಿ, ತರಹೇವಾರಿ ರೀಲ್ಸ್‌ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ…

7 mins ago

ಶ್ರೀ ರಾಮನವಮಿ| ದೇಶದ ಜನತೆಗೆ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಶುಭಾಶಯ

ನವದೆಹಲಿ/ಬೆಂಗಳೂರು: ಭಾರತದೆಲ್ಲೆಡೆ ಇಂದು ಶ್ರೀ ರಾಮನವಮಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದ್ದು, ದೇಶದ ಜನತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ…

20 mins ago

ಮೈಸೂರು | ಜೋರಾಯ್ತು ಬಂಡೀಪುರ ಉಳಿಸಿ ಅಭಿಯಾನ

ಮೈಸೂರು : ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ತೆರವಿಗೆ ವಿರೋಧಿಸುತ್ತಿರುವ…

42 mins ago

ಇಂದಿನಿಂದ ಕೊಡವ ಕೌಟುಂಬಿಕ ಚೆಕ್ಕೇರ ಕ್ರಿಕೆಟ್ ನಮ್ಮೆ

ಪುರುಷರ ವಿಭಾಗದಲ್ಲಿ 281 ತಂಡಗಳು ಮಹಿಳೆಯರ 84 ತಂಡಗಳು ಭಾಗಿ ಪುನೀತ್ ಮಡಿಕೇರಿ ಮಡಿಕೇರಿ: ಚೆಕ್ಟೇರ ಕುಟುಂಬ ಮತ್ತು ಕೊಡವ…

1 hour ago

ಶಿಕ್ಷ ಣದ ಅರಿವಿನ ಸಂಕೇತ ಈ ‘ಅನನ್ಯ ’

‘ಶಿಕ್ಷಣ ಒಂದು ಪ್ರಬಲವಾದ ಅಸ್ತ್ರ. ವಿಶ್ವವನ್ನೇ ಬದಲಾವಣೆ ಮಾಡುವ ಶಕ್ತಿ ಅದಕ್ಕಿದೆ’ ಎಂದು ಶೋಷಿತ ವರ್ಗಗಳ ವಿಮೋಚನೆಗೆ ಶಿಕ್ಷಣ, ಸಂಘಟನೆ…

1 hour ago

ಪಾಷಾಣ ಮೂರ್ತಿ ಎಂಬ ಹೆಣ್ಣು ದೈವ

ಮೇದ ಜನಾಂಗದವರು ಹಳೆಯ ಕಾಲದಿಂದಲೂ 'ಪಾಷಾಣ ಮೂರ್ತಿ' ಎನ್ನುವ ಹೆಣ್ಣು ದೈವವನ್ನು ಆರಾಧಿಸಿಕೊಂಡು ಬಂದಿದ್ದಾರೆ ಆರತಿ ಎಂ. ಎಸ್‌. 'ಪಾಷಾಣ…

4 hours ago