ಕೋವಿಡ್‌ ಸೋಂಕಿಗೆ ಮೌಖಿಕ ಔಷಧ ಕಂಡುಹಿಡಿದ ಮೈಸೂರಿನ ವೈದ್ಯರು!!

ಮೈಸೂರು: ವ್ಯಾಪಕವಾಗಿ ಹರಡುತ್ತಿರುವ ಕೋವಿಡ್‌ ಸೋಂಕಿಗೆ ಮೈಸೂರಿನ ಮೂವರು ತಜ್ಞರನ್ನೊಳಗೊಂಡ ತಂಡವು ಪರಿಣಾಮಕಾರಿ ಔಷಧವನ್ನು ಅನ್ವೇಷಿಸಿದ್ದಾರೆ.

ಈ ಔಷಧವನ್ನು ಜೆಎಎಸ್‌ಎಸ್‌ ವೈದ್ಯಕೀಯ ಕಾಲೇಜಿನ ಪ್ರಯೋಗಾಲಯದಲ್ಲಿ ಇಲಿಯ ಮೇಲೆ ಪ್ರಯೋಗಿಸಲಾಗಿದ್ದು, ಫಲಿತಾಂಶ ಉತ್ತಮವಾಗಿದೆ ಎಂದು ಮೈಸೂರು ವಿವಿ ಸಾವಯವ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಸಪ್ಪ ಅವರು ಆಂದೋಲನ ಡಿಜಿಟಲ್‌ಗೆ ತಿಳಿಸಿದ್ದಾರೆ.

ಕೋವಿಡ್‌ 19 ವೈರಸ್‌ ಮುಂದೆ ಯಾವ ರೀತಿ ರೂಪಾಂತರವಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಈಗ ನೀಡುತ್ತಿರುವ ಲಸಿಕೆಯು ಭವಿಷ್ಯದ ರೂಪಾಂತರಿ ಕೊರೊನಾ ವಿರುದ್ಧ ಕೆಲಸ ಮಾಡದೇ ಇರಬಹುದು. ಹಾಗಾಗಿ ಮೌಖಿಕ ಔಷಧವೇ ಉತ್ತಮ ಮದ್ದು.

ಈ ನಿಟ್ಟಿನಲ್ಲಿ ಡಿಆರ್‌ಡಿಒ ಕೂಡ 2ಡಿಜಿ ಔಷಧವನ್ನು ಬಿಡುಗಡೆ ಮಾಡಿದೆ. ಡಿಆರ್‌ಎಂ ಲ್ಯಾಬ್‌ನ ಸಹಯೋಗದೊಂದಿಗೆ ನಾವು ನಡೆಸಿದ ಪ್ರಯೋಗವೂ ಯಶಸ್ವಿಯಾಗಿದ್ದು, ಸರ್ಕಾರವು ಸಮ್ಮತಿ ನೀಡಿದರೆ ಕೋವಿಡ್‌ ಔಷಧ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ಕೂಡ ಸೇರಲಿದೆ ಎಂದು ಅವರು ತಿಳಿಸಿದ್ದಾರೆ.

ಜಾನ್ಸನ್‌ ಆಂಡ್‌ ಜಾನ್ಸನ್‌ ಸಂಸ್ಥೆಯು ಈ ಔಷಧ ಮಾನವ ಬಳಕೆಗೆ ಯೋಗ್ಯವಾಗಿದೆ ಎಂದು ಹೇಳಿದೆ. ಯಾವುದೇ ಔಷಧವು ಕ್ಲಿನಕಲ್‌ ಟ್ರಯಲ್‌ಗೆ ಒಳಪಡಬೇಕಾದರೆ ಅದು ಹೆಚ್ಚು ವಿಷಕಾರಿ ಅಂಶವನ್ನು ಹೊಂದಿರಬಾರದು. ಇದನ್ನು ಪ್ರಯೋಗಾಲಯ ವರದಿಯಲ್ಲಿ ಈ ಔಷಧ ಟಾಕ್ಸಿಕ್‌ ರೇಟ್‌ ತುಂಬ ಕಡಿಮೆ ಇದೆ ಎಂದು ಹೇಳಲಾಗಿದೆ. ಹಾಗಾಗಿ ಇದನ್ನು ಮಾನವ ಬಳಕೆಗೆ ಬಳಸಲು ಅನುಮತಿ ಬೇಕಿದೆ ಎಂದು ಅವರು ತಿಳಿಸಿದರು.

ಈ ಪ್ರಯೋಗದಲ್ಲಿ ಡಾ. ಬಿಎಚ್‌ ಮಂಜುನಾಥ್‌, ಪ್ರೊ. ಪಿ.ಎ. ಮಹೇಶ್‌ ಅವರು ಪಾಲ್ಗೊಂಡಿದ್ದಾರೆ.

× Chat with us