ನಿಯಮ ಉಲ್ಲಂಘಿಸಿದವರ ವಿರುದ್ಧ ಚಾಟಿ ಬೀಸಿದ ಪೊಲೀಸರು; ಒಂದೇ ದಿನ 461 ಪ್ರಕರಣ!

ಮೈಸೂರು: ವೀಕೆಂಡ್ ಕರ್ಫ್ಯೂ ನಿಯಮಗಳ ಉಲ್ಲಂಘನೆ ಮಾಡಿರುವವರ ವಿರುದ್ದ ಮೈಸೂರು ನಗರ ಪೊಲೀಸರು ಚಾಟಿ ಬೀಸಿದ್ದು, ಶನಿವಾರ ನಗರದ ವಿವಿಧ ಕಡೆಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅನಾವಶ್ಯಕವಾಗಿ ಸಂಚರಿಸುತ್ತಿದ್ದ ೨ ವಾಹನಗಳನ್ನು ವಶಪಡಿಸಿಕೊಂಡಿದ್ದು, ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದವರ ವಿರುದ್ದ ೪೬೧ ಪ್ರಕರಣ ದಾಖಲಿಸಿ ೮೦,೭೫೦ ರೂ. ದಂಡ ವಿಧಿಸಿದ್ದಾರೆ. ಜತೆಗೆ ಕರ್ಫ್ಯೂ ನಿಯಮ ಉಲ್ಲಂಘಿಸಿ ವ್ಯಾಪಾರ ವಹಿವಾಟು ನಡೆಸಿದ ಎಂಟು ಮಂದಿ ವ್ಯಾಪಾರಸ್ಥರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಬಿ.ಎನ್ ರಸ್ತೆಯಲ್ಲಿರುವ ಪಲ್ಲವ ಫ್ಲವರ್ ಡೆಕೊರೇಷನ್‌ನ ಮಾಲೀಕರು, ದಿ ಉದಯಗಿರಿ ಠಾಣಾ ವ್ಯಾಪ್ತಿಯ ಪಠಾಣ್ ಹಾರ್ಡ್‌ವೇರ್‌ನ ಮಾಲೀಕರು, ದೇವೆಗೌಡ ಸರ್ಕಲ್ ಬಳಿ ಇರುವ ಕೇರಳ ಹೋಟೆಲ್ ಮಾಲೀಕ ಅಸ್ಕರ್, ಜೆ.ಕೆ ಟೈರ್ ್ಯಾಕ್ಟರಿ ಸರ್ಕಲ್ ಬಳಿ ಇರುವ ಚಿಲ್ಲರೆ ಅಂಗಡಿ ನಾಗಣ್ಣ ,ಕುಂಬಾರಕೊಪ್ಪಲುನ ಬಳಿ ಇರುವ ಶ್ರೀರಾಮಮಂದಿರ ಹೋಟಲ್‌ನ ಮಾಲೀಕರ ಭರತ್,ಎಸ್.ಎಸ್ ನಗರದ ಬಳಿ ಇರುವ ಕೇರಳ ಕೆಫೆೆ ಹೋಟಲ್‌ನ ಮಾಲೀಕ ಸತೀಶ್, ಕೆ.ಆರ್. ಮಿಲ್ ಕಾಲೋನಿ ಬಳಿ ಇರುವ ಗುಜರಿ ಅಂಗಡಿಯ ಮಾಲೀಕ ಸುನೀಲ್ ಕುಮಾರ್,ಹಳೆ ಕೆಸರೆಯಲ್ಲಿರುವ ಕಬ್ಬಿಣ ಮತ್ತು ಹಾರ್ಡ್‌ವೇರ್ ಅಂಗಡಿಯ ಮಾಲೀಕರಾದ ಕುಶಾಲ್‌ಗೌಡ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

× Chat with us