ಮೈಸೂರು ಪಾಲಿಕೆ ಉಪ ಚುನಾವಣೆ: ಇಂದು, ನಾಳೆ ಅಭ್ಯರ್ಥಿಗಳ ಹೆಸರು ಅಂತಿಮ

ಮೈಸೂರು: ನಗರ ಪಾಲಿಕೆ 36ನೇ ವಾರ್ಡಿನ ಉಪ ಚುನಾವಣೆಗೆ ಸ್ಪರ್ಧಿಸಲು ಅಣಿಯಾಗಿರುವ ಕಾಂಗ್ರೆಸ್, ಬಿಜೆಪಿ ತನ್ನ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿದೆ.

ಅಭ್ಯರ್ಥಿಗಳಾಗಲು ಬಯಸುವವರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಗುರುವಾರ ಕಾಂಗ್ರೆಸ್ ತನ್ನ ಅಭ್ಯರ್ಥಿ ಪ್ರಕಟಿಸಿದರೆ, ಬಿಜೆಪಿ ಶುಕ್ರವಾರ ರಾತ್ರಿ ಅಂತಿಮಪಡಿಸಲಿದೆ. ಜಾ.ದಳವು ಈಗಾಗಲೇ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಾದೇಗೌಡರ ಸಹೋದರನ ಪತ್ನಿ ಎಸ್.ಲೀಲಾವತಿ ಅವರನ್ನು ಅಭ್ಯರ್ಥಿಯೆಂದು ಘೋಷಿಸಿದೆ. ಹೀಗಾಗಿ, ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಕಟಿಸಿದ ಬಳಿಕ ನಾಮಪತ್ರ ಸಲ್ಲಿಕೆ ಭರಾಟೆಯು ನಡೆಯಲಿದೆ.

ಕಾಂಗ್ರೆಸ್‌ನಲ್ಲಿ ಪರಾಜಿತ ರಜನಿ ಅಣ್ಣಯ್ಯ ಅವರೇ ಅಂತಿಮ ಎಂದು ಹೇಳಲಾಗಿದ್ದರೂ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ, ಈಗಾಗಲೇ ವಾರ್ಡಿನಲ್ಲಿ ಬಿರುಸಿನ ಪ್ರಚಾರ ಕೈಗೊಂಡು ಮತದಾರರನ್ನು ಸೆಳೆಯಲು ಹೊರಟಿದ್ದಾರೆ.

× Chat with us