ಪರಿಚಿತರಿಂದಲೇ ಬರ್ಬರ ಹತ್ಯೆಯಾದ ಅರ್ಜುನ್ ಎಂಬ ಯುವಕ

ಮೈಸೂರು: ಅರ್ಜುನ್(24) ಎಂಬ ಯುವಕನ ಬರ್ಬರ ಹತ್ಯೆಯಾಗಿದೆ. ದುಷ್ಕರ್ಮಿಗಳು ಚಾಕುವಿನಿಂದ ಮನಬಂದಂತೆ ಚುಚ್ಚಿ ಅಟ್ಟಾಡಿಸಿ ಕೊಂದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ತಾಲ್ಲೂಕಿನ ರಮ್ಮನಹಲ್ಲಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಜೆಸಿಬಿ ವಾಹನ ಚಾಲಕನಾಗಿದ್ದ ಅರ್ಜುನ್ ಅವರ ಪರಿಚಿತರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ರಾತ್ರಿ ಫೋನ್ ಮಾಡಿ ಗ್ರಾಮದ ಹೊರ ವಲಯಕ್ಕೆ ಕರೆಸಿಕೊಂಡು ಹತ್ಯೆ ಮಾಡಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ. ಕೊಲೆ ಪಾತಕರು ಕೊನೆಗೆ ಹಳ್ಳಕ್ಕೆ ತಳ್ಳಿ ತಲೆ ಮೇಲೆ ಕಲ್ಲನ್ನು ಎತ್ತಿ ಹಾಕಿದ್ದಾರೆ.

ಸ್ಥಳಕ್ಕೆ ಅಡಿಷನಲ್ ಎಸ್ಪಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೈಸೂರಿನ ಶವಾಗಾರದಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us