ಮಂಡ್ಯ : ಹಾಡಹಗಲೇ ಕುಖ್ಯಾತ ರೌಡಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆ ಕೆ.ಆರ್.ಪೇಟೆ ಪಟ್ಟಣದ ಈಶ್ವರನ ದೇವಸ್ಥಾನ ಮುಂಭಾಗದಲ್ಲಿಯೇ ನಡೆದಿದೆ. 38 ವರ್ಷದ ಅರುಣ್ ಅಲ್ಲು ಎಂಬಾತನೇ ಕೊಲೆಯಾದವ ಈತ ಗಡಿಪಾರಾಗಿದ್ರೂ ಸಹ ಕೆ.ಆರ್.ಪೇಟೆಗೆ ಬಂದಿದ್ದ ಸಂದರ್ಭದಲ್ಲಿ ಹೊಂಚು ಹಾಕಿದ ಐವರು ಈತನನ್ನು ದೇವಾಲಯದ ಮುಂಭಾದಲಿಯೇ ಕೊಚ್ಚಿ ಹತ್ಯೆಗೈದಿದ್ದಾರೆ.
ಈ ಹಿಂದೆಯೇ ಈತ ಕೊಲೆ, ಅಪಹರಣ, ಕೊಲೆ ಬೆದರಿಕೆ, ಹಫ್ತಾ ವಸೂಲಿ ಸೇರಿದಂತೆ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಜೊತೆಗೆ ಜೈಲಿನಲ್ಲಿದ್ದಾಗಲೇ ಅಧಿಕಾರಿಯ ಸಹಾಯ ಪಡೆದು ಮಾರ್ವಾಡಿ ಒಬ್ಬರನ್ನು ಕಿಡ್ನಾಪ್ ಮಾಡಿದ್ದ ಅರುಣ್, ಮತ್ತು ಇದರಲ್ಲಿ ಭಾಗಿಯಾಗಿದ್ದ ಜೈಲು ಅಧಿಕಾರಿಗೂ ಶಿಕ್ಷೆಯಾಗಿತ್ತು. ಎರಡನೇ ದರ್ಜೆ ರಾಜಕಾರಣಿಗಳಿಂದಲೂ ಹಫ್ತಾ ವಸೂಲಿ ಮಾಡುತ್ತಿದ್ದನಂತೆ, ಜೈಲಿನಿಂದ ಬಂದ ಬಳಿಕ ಈತನನ್ನು ಪೊಲೀಸರು ಗಡಿಪಾರು ಮಾಡಿದ್ದರು, ಹಲವರ ಜೊತೆ ವೈಷಮ್ಯೆವನ್ನು ಬೆಳಸಿಕೊಂಡಿದ್ದ ಈತನನ್ನು ಕೊಲ್ಲುವುದಕ್ಕಾಗಿ ಮುಂಚಿನಿಂತದಲೂ ತಯಾರಿ ಯಾಗಿತು ಎಂದು ಹೇಳಲಾಗುತ್ತಿದೆ. ಕೊಲೆಯು ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.