ನಾಗ್ಪುರ, ಮಹಾರಾಷ್ಟ್ರ: ಬಿಜೆಪಿಯ ಪ್ರಮುಖ ನಾಯಕರೂ ಆಗಿರುವ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ರಾಜಕೀಯ ನಿವೃತ್ತಿಯ ಬಗ್ಗೆ ಸುಳಿವು ನೀಡಿದ್ದಾರೆ.
ಇದರೊಂದಿಗೆ ಬಿಜೆಪಿ ಹೈಕಮಾಂಡ್ ಜತೆಗಿನ ಅವರ ಮುನಿಸು ಬಹಿರಂಗಗೊಂಡಿದೆ. ಕೆಲವು ಮೂಲಗಳ ಪ್ರಕಾರ 2024ರ ಚುನಾವಣೆಯಲ್ಲಿ ಗಡ್ಕರಿ ಅವರಿಗೆ ಬಿಜೆಪಿಯು ಟಿಕೆಟ್ ನಿರಾಕರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಭಾನುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿತಿನ್ ಗಡ್ಕರಿ ಅವರು, ತಾವು ಎರಡು ಚುನಾವಣೆಗಳನ್ನು ಗೆದ್ದಿದ್ದರೂ, ಜನರಿಗೆ ತಾನು ಯೋಗ್ಯ ಎನಿಸಿದರೆ ಮಾತ್ರವೇ ವೋಟ್ ಮಾಡಲಿ ಎಂದಿದ್ದಾರೆ. ಒಂದು ಮಿತಿಯನ್ನು ದಾಟಿ ನಾನು ಯಾರನ್ನೂ ಓಲೈಸಲು ಹೋಗುವುದಿಲ್ಲ. ಒಂದು ವೇಳೆ, ನನ್ನ ಜಾಗದಲ್ಲಿ ಮತ್ತೊಬ್ಬರು ಯಾರೇ ಬಂದರೂ ಪರ್ವಾಗಿಲ್ಲ. ಆಗಲೂ ನಾನು ನನ್ನ ಕೆಲಸಕ್ಕೆ ಹೆಚ್ಚು ಸಮಯವನ್ನು ಕೊಡುತ್ತೇನೆ ಎಂದು ಗಡ್ಕರಿ ಅವರು ಹೇಳಿದ್ದರು.
ಇದೇ ವೇಳೆ, ನಿತಿನ್ ಗಡ್ಕರಿ ಅವರ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಯಿಸಿವೆ. ಗಡ್ಕರಿ ಅವರು ಮತಗಳನ್ನು ಪಡೆಯಲು ಓಲೈಕೆ ರಾಜಕಾರಣವನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆಂದು ಗಡ್ಕರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆಯೂ ಸಾರ್ವಜನಿಕ ವೇದಿಕೆಯಲ್ಲಿ ಇದೇ ರೀತಿಯಲ್ಲಿ ಗಡ್ಕರಿ ಅವರು ನಿವೃತ್ತಿಯ ಸುಳಿವು ಬಿಟ್ಟುಕೊಟ್ಟಿದ್ದರು. ಜನವರಿ ತಿಂಗಳಲ್ಲಿ ಆಯೋಜಿಸಲಾಗಿದ್ದ ಹಬ್ಬಾ ಆದಿವಾಸಿ ಮಹಾಸಂಘ ಸದಸ್ಯರ ಸಭೆಯಲ್ಲಿ ಅವರು, ನೀವು ಯಾರಿಗೆ ಬೇಕಾದರೂ ವೋಟ್ ಮಾಡಬಹುದು ಅದು ನಿಮಗೆ ಬಿಟ್ಟ ವಿಷಯ ಎಂದು ಹೇಳಿದ್ದರು. ಆ ಮೂಲಕ ನಾನಾ ಊಹೆಗಳಿಗೆ ಅವಕಾಶ ಕಲ್ಪಿಸಿದ್ದರು.
ಕಳೆದ ವರ್ಷ ಜುಲೈನಲ್ಲಿ ಅವರು ಇದೇ ರೀತಿ ಆಗಿ ಹೇಳಿದ್ದರು. ಕೆಲವೊಮ್ಮೆ ರಾಜಕೀಯ ನಿವೃತ್ತಿಯನ್ನು ತೆಗೆದುಕೊಳ್ಳಬೇಕು ಎನಿಸುತ್ತದೆ ಎಂದು ಹೇಳಿದ್ದರು. ಇದು ಕೂಡ ಭಾರೀ ಸುದ್ದಿಯಾಗಿತ್ತು.
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…