ಗಾಳಿಯ ಮೂಲಕವೂ ಕಪ್ಪು ಶಿಲೀಂಧ್ರ ಹರಡುತ್ತೆ: ಏಮ್ಸ್‌ ವೈದ್ಯರು

ಹೊಸದಿಲ್ಲಿ: ಕೊರೊನಾ ಸೋಂಕಿನ ನಂತದ ದೇಶದ ಜನರನ್ನು ಕಂಗೆಡಿಸಿರುವ ಕಪ್ಪು ಶಿಲೀಂಧ್ರ (ಮ್ಯೂಕರ್‌ ಮೈಕ್ರೋಸಿಸ್)‌ ಗಾಳಿಯ ಮೂಲವೂ ಹರಡುತ್ತದೆ ಎಂದು ಏಮ್ಸ್‌ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದ್ದಾರೆ.

ಏಮ್ಸ್‌ನ ಪ್ರೊಫೆಸರ್‌ ಡಾ. ನಿಖಿಲ್‌ ಟಂಡನ್‌, ʻಕಪ್ಪು ಶಿಲೀಂಧ್ರ ಆರೋಗ್ಯವಂತ ವ್ಯಕ್ತಿಯ ದೇಹ ಹೊಕ್ಕರೆ ಯಾವುದೇ ತೊಂದರೆ ಮಾಡುವುದಿಲ್ಲ. ಇದು ನೇರವಾಗಿ ಶ್ವಾಸಕೋಶಕ್ಕೆ ಪ್ರವೇಶಿಸಬಹುದು. ಆದರೆ, ಆ ಸಾಧ್ಯತೆ ತುಂಬಾ ಕಡಿಮೆ ಎಂದು ತಿಳಿಸಿದ್ದಾರೆ.

ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದರೆ, ದೇಹವು ಅದರ ವಿರುದ್ಧ ಹೋರಾಡಲು ಸಮರ್ಥವಾಗಿರುತ್ತದೆ ಎಂದು ಅವರು ವಿಶ್ಲೇಷಿಸಿದ್ದಾರೆ.

× Chat with us