ಆಡಳಿತದಲ್ಲಿ ಪಾರದರ್ಶಕತೆ ಮುಖ್ಯ: ಮೈಸೂರು ಡಿಸಿಗೆ ಚಾಟಿ ಬೀಸಿದ ಪ್ರತಾಪಸಿಂಹ

ಮೈಸೂರು: ಆಡಳಿತದಲ್ಲಿ ಪಾರದರ್ಶಕತೆ ಮುಖ್ಯ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸಂಸದ ಪ್ರತಾಪಸಿಂಹ ತಿರುಗೇಟು ನೀಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಅಭಿರಾಂ ಜಿ.ಶಂಕರ್‌ ಅವರಲ್ಲಿ ಪಾರದರ್ಶಕತೆ ಇತ್ತು. ಹೀಗಾಗಿ, ಅವರನ್ನು ಪ್ರಶ್ನಿಸುವ ಪ್ರಸಂಗವೇ ಬಂದಿರಲಿಲ್ಲ. ನೀವು 4, 5 ಕೋಟಿ ಅಂತ ರೌಂಡ್‌ ಫಿಗರ್‌ ಕೊಟ್ಟರೆ ಹೇಗೆ? ಸಾರ್ವಜನಿಕ ಹಣದ ಬಗ್ಗೆ ಲೆಕ್ಕ ಕೇಳುತ್ತಿದ್ದೇವೆ. ಅದನ್ನು ವೈಯಕ್ತಿಕ ದಾಳಿ ಎನ್ನುವುದು ಸರಿಯಲ್ಲ. ಪಾರದರ್ಶಕತೆಯನ್ನು ನಾವು ಕಾಪಾಡಿಕೊಳ್ಳಬೇಕು ಎಂದು ಚಾಟಿ ಬೀಸಿದರು.

ಇನ್ನೊಬ್ಬರು ಬೆರಳು ತೋರಿಸಿ ಮಾತನಾಡದ ಹಾಗೆ ನನಗೆ ವಹಿಸಿರುವ ಕೆಲಸವನ್ನು ಮಾಡಿದ್ದೇನೆ. ಕೋವಿಡ್‌ ಲಸಿಕೆ, ಸರ್ವೆ ವಿಚಾರವನ್ನೂ ವೈಯಕ್ತಿಕವಾಗಿ ಪರಿಗಣಿಸಿ ಕೆಲಸ ಮಾಡ್ತೀನಿ. ಬೆಡ್‌ ವ್ಯವಸ್ಥೆಗೆ 4, ಊಟಕ್ಕೆ 5 ಕೋಟಿ ಅಂತ ಲೆಕ್ಕ ಕೊಟ್ಟರೆ ಪರಿಗಣಿಸಲು ಸಾಧ್ಯವೆ? ಪ್ರತಿ ವಸ್ತು, ವೆಚ್ಚದ ಲೆಕ್ಕವನ್ನು ನಿಖರವಾಗಿ ನೀಡಬೇಕು. ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಮುಖ್ಯವೆಂದು ಲೆಕ್ಕ ಕೇಳಿದೆ ಅಷ್ಟೆ ಎಂದು ಪ್ರತಾಪಸಿಂಹ ಸ್ಪಷ್ಟಪಡಿಸಿದರು.

× Chat with us