ಬೆಂಗಳೂರು : ಹಸುವಿನ ಸಗಣಿ ಮತ್ತು ಗಂಜಲಗಳಿಂದ ಹಲವು ಉತ್ಪನ್ನಗಳನ್ನು ತಯಾರಿಸುತ್ತಿರುವ ಜೇಡ್ಲ ಆರ್ಗಾನಿಕ್ಸ್ ಎಂಬ ಸಂಸ್ಥೆ ಈಗ ಹೊಸದೊಂದು ಅವಿಷ್ಕಾರದ ಮೂಲಕ ಜನರನ್ನು ಅಚ್ಚರಿಗೆ ನೂಕಿದೆ . ಗೋಮೂತ್ರದಿಂದ ಮೌತ್ ಫ್ರೆಶನರ್ ಮಾತ್ರವಲ್ಲದೇ ಸುಗಂಧ ದೃವ್ಯ ತಯಾರಿಕೆಯಲ್ಲಿಯೂ ತೊಡಗಿಕೊಂಡಿದೆ.
ಶ್ರೀರಾಮಚಂದ್ರಾಪುರ ಮಠದ ಗುರುಗಳಾದ ರಾಘವೇಶ್ವರ ಭಾರತಿ ಅವರ ಸಲಹೆ ಪಡೆದು ಈ ಉತ್ಪನ್ನಗಳನ್ನು ತಯಾರಿಸಿರುವುದಾಗಿ ಸಂಸ್ಥೆಯು ಹೇಳಿಕೊಂಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜೇಡ್ಲ ಆರ್ಗಾನಿಕ್ಸ್ ಸಂಸ್ಥೆಯ ಮುಖ್ಯಸ್ಥರಾದ ರಾಜಾರಾಮ್ ಅವರು, ಗೋಮೂತ್ರ ಬಳಕೆಗೆ ತುಂಬಾ ಕಷ್ಟ. ಅದನ್ನು ಹೇಗೆ ಕುಡಿಯುವುದು , ಹೇಗೆ ಬಳಸುವುದು ಎಂದು ಜನರಲ್ಲಿ ತಾತ್ಸಾರವಿರುತ್ತದೆ. ಅಂಥವರಿಗಾಗಿ ನಾವು ಗೋಮೂತ್ರದ ಉತ್ಪನ್ನಗಳನ್ನು ತಯಾರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಕ್ಯಾನ್ಸರ್ ಮಹಾಮಾರಿಗೆ ಗೋಮೂತ್ರ ಬಳಕೆಯ ಬಗ್ಗೆ ಆಯುರ್ವೇದದಲ್ಲಿಯೂ ಉಲ್ಲೇಖವಿದೆ. ನಮ್ಮ ಸಂಸ್ಥೆಯು ಗೋಮೂತ್ರ ಬಳಸಿ ಮೌತ್ ಗಾರ್ಗಲ್ (ಬಾಯಿ ಮುಕ್ಕಳಿಸುವ ದ್ರಾವಣ) ತಯಾರಿಸಿದೆ ಎಂದ ರಾಜಾರಾಮ್ ಹೇಳಿದ್ದಾರೆ.
ಇದರಿಂದ ಹಲ್ಲು, ಒಸಡುಗಳ ಆರೋಗ್ಯ ಕಾಪಾಡಿಕೊಳ್ಳುವುದಲ್ಲದೇ, ಹಸುವಿನ ಮೂತ್ರ ಬಳಸಿ ಬಾಯಿ ವಾಸನೆಯನ್ನೂ ನಿವಾರಿಸಿಕೊಳ್ಳಬಹುದಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಛತ್ತೀಸಗಢ : ನಾರಾಯಣಪುರ ಗಡಿ ಪ್ರದೇಶದಲ್ಲಿ ನೆಲಬಾಂಬ್ ತೆಗೆಯುವ ಕಾರ್ಯಾಚರಣೆಯ ಸಮಯದಲ್ಲಿ ಐಇಡಿ ಸ್ಛೋಟಗೊಂಡಿದ್ದು ನಾಲ್ವರು ಡಿಆರ್‌ಜಿ ಯೋಧರು ಹುತಾತ್ಮರಾಗಿದ್ದಾರೆ.…
ಮಂಡ್ಯ : ತಾಲ್ಲೂಕಿನ ಜವನಹಳ್ಳಿ ಗ್ರಾಮದಲ್ಲಿ ನೀರಿನ ಕೊಳದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿಯ ಮೃತ ದೇಹ ಪತ್ತೆಯಾಗಿದ್ದು, ಕೊಲೆ ಶಂಕೆ…
ಮದ್ದೂರು : ಜಾಗತಿಕ ತಾಪಮಾನ ಏರಿಕೆಗೆ ವೃಕ್ಷ ಸಂವರ್ಧನೆ, ಸಂರಕ್ಷಣೆಯೇ ಮಾರ್ಗವಾಗಿದ್ದು, ಹಸಿರು ಹೊದಿಕೆ ಹೆಚ್ಚಿಸುವಂತೆ ಮತ್ತು ಮಂಡ್ಯ ನಗರದ…
ಬೆಂಗಳೂರು : ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳು ಘೋಷಣೆಯಾಗಿಯೇ ಉಳಿಯಬಾರದು. ಅನುಷ್ಠಾನದಲ್ಲಿ ವಿಳಂಬವಾದರೆ ಸಂಬಂಧಪಟ್ಟ ಕಾರ್ಯದರ್ಶಿಗಳೇ ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…
ಹನೂರು : ಮಲೆ ಮಹದೇಶ್ವರ ಬೆಟ್ಟದಿಂದ ತಮಿಳುನಾಡಿನ ಮೆಟ್ಟೂರಿಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ…
ಬೆಂಗಳೂರು : ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನೀಟ್ ಯುಜಿ ಭಾನುವಾರ…