ಎಚ್‌.ಡಿ.ಕೋಟೆ: ಹಣಕ್ಕೆ ಚೌಕಾಸಿ ಮಾಡಿ ಹೆತ್ತ ಮಗುವನ್ನೇ ಮಾರಿದ್ದ ತಾಯಿ, ಮತ್ತೆ ಮಗು ಬೇಕೆಂದು ರಂಪಾಟ!

ಎಚ್‌.ಡಿ.ಕೋಟೆ: ಹಣಕ್ಕಾಗಿ ಚೌಕಾಸಿ ಮಾಡಿ ಹೆತ್ತ ಮಗುವನ್ನೇ ಮಾರಾಟ ಮಾಡಿದ್ದ ತಾಯಿ, 7 ತಿಂಗಳ ಬಳಿಕ ತನ್ನ ಮಗುವನ್ನು ವಾಪಸ್‌ ನೀಡುವಂತೆ ಒತ್ತಾಯಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಗು ಮಾರಾಟದ ವೇಳೆ ನಡೆಸಿದ ಸಂಭಾಷಣೆಯ ಆಡಿಯೊ ವೈರಲ್‌ ಆಗಿದೆ.

ಬೆಂಗಳೂರಿನ ರೋಜ ಎಂಬ ಮಹಿಳೆ ಎಚ್.ಡಿ.ಕೋಟೆಯ ಟೈಗರ್ ಬ್ಲಾಕ್‌ನ ಅಲೆಮಾರಿ ಸಮುದಾಯದ ಅಂಬರೀಶ್‌ ಮತ್ತು ಮಧುಮಾಲತಿ ದಂಪತಿಯೊಂದಿಗೆ ಮೊಬೈಲ್‌ನಲ್ಲಿಯೇ ಸಂಭಾಷಣೆ ನಡೆಸಿ 1.5 ಲಕ್ಷ ರೂ.ಗೆ ತನ್ನ ಗಂಡು ಮಗುವನ್ನು ಮಾರಾಟ ಮಾಡಿದ್ದರು.

ಅಂಬರೀಶ್‌ ದಂಪತಿ ಆನ್ಲೈನ್‌ನಲ್ಲಿ ತಲೆಕೂದಲು ಮಾರಾಟ ಮಾಡುವಾಗ ಬೆಂಗಳೂರಿನ ರೋಜ ಎಂಬ ಮಹಿಳೆ ಪರಿಚಯವಾಗಿದ್ದಾಳೆ. ನನಗೆ ಹೆಣ್ಣು ಮಗು ಬೇಕಿತ್ತು ಗಂಡು ಮಗು ಬೇಡ ಎಂದು ಹೇಳಿದ ಮಹಿಳೆ ಮೊಬೈಲ್ ಕರೆಯಲ್ಲಿ ಚೌಕಾಸಿ ನಡೆಸಿ ಅಂತಿಮವಾಗಿ 1.5 ಲಕ್ಷಕ್ಕೆ ಮಗು ಮಾರಾಟ ಮಾಡಿದ್ದಾಳೆ. ಇದಾದ ಬಳಿಕ ಕಳೆದ 7 ತಿಂಗಳಿನಿಂದ ಅಂಬರೀಷ್ ಮತ್ತು ಮಧುಮಾಲತಿ ದಂಪತಿ ಬಳಿ ಆಶ್ರಯ ಪಡೆದಿತ್ತು.

ಆದರೆ, ಮಗು ಮಾರಾಟ ಮಾಡಿದ ಏಳು ತಿಂಗಳ ಬಳಿಕ ಮಗು ವಾಪಸ್ ನೀಡುವಂತೆ ರೋಜ ಒತ್ತಾಯ ಮಾಡುತ್ತಿದ್ದಾರೆ. ಕೊನೆಗೆ ಒತ್ತಾಯ ರಂಪಾಟಕ್ಕೆ ತಿರುಗಿ ಪ್ರಕರಣ ಬೆಳಕಿಗೆ ಬಂದಿದೆ. ಮಧುಮಾಲತಿ ದಂಪತಿ ಆ ಮಗುವನ್ನು ರೋಜರಿಗೆ ಹಿಂದಿರುಗಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us