BREAKING NEWS

ಮೈಸೂರಿನಲ್ಲಿ ಮೋದಿ ರೋಡ್ ಶೋ: ಪ್ರಧಾನಿ ನೋಡಲು ಮುಗಿಬಿದ್ದ ಜನಸಾಗರ.!

ಮೈಸೂರು: ಕರ್ನಾಟಕದಲ್ಲಿ ಪ್ರಧಾನಿ ಮೋದಿ ಮೇನಿಯಾ ಬಿಜೆಪಿ ಉತ್ಸಾಹ ಹೆಚ್ಚಿಸಿದೆ. ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಆಗಮಿಸಿರುವ ಮೋದಿ, ನಿನ್ನೆ ಬೆಂಗಳೂರಿನಲ್ಲಿ ಅಬ್ಬರದ ರೋಡ್ ಶೋ ನಡೆಸಿದ್ದರು. ಇದೀಗ ಮೈಸೂರಿನಲ್ಲಿ ರೋಡ್ ಶೋ ನಡೆಸಿದ್ದಾರೆ.

ಬೇಲೂರಿನಿಂದ ಮೈಸೂರುಗೆ ತೆರಳಿದೆ ಮೋದಿ, ರೋಡ್ ಶೋ ನಡೆಸಿದ್ದಾರೆ. ದಾರಿಯುದ್ದಕ್ಕೂ ಜನರು ಮೋದಿಗೆ ಹೂಮಳೆ ಸ್ವಾಗತ ನೀಡಿದ್ದಾರೆ. ಹಳೇ ಮೈಸೂರು ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿರುವ ಮೋದಿ, ಸಾಂಸ್ಕೃತಿಕ ನಗರಿಯಲ್ಲಿ 4.3 ಕಿಲೋಮೀಟರ್ ರೋಡ್ ಶೋ ನಡೆಸಿದ್ದಾರೆ.

ಮೈಸೂರಿನ ಓವಲ್ ಮೈದಾನಕ್ಕೆ ಆಗಮಿಸಿದ ಮೋದಿ ಕಾರಿನ ಮೂಲಕ ಮೈಸೂರು ವಿವಿ ಕ್ರಾಫರ್ಡ್ ಹಾಲ್‌ಗೆ ತೆರಳಿದರು. ವಿದ್ಯಾಪೀಠ ವೃತ್ತದಲ್ಲಿ ನಿಂತಿದ್ದ ತೆರೆದ ವಾಹನ ಏರಿದ ಮೋದಿಯನ್ನು ಸಚಿವ ರಾಮದಾಸ್ ಮೈಸೂರು ಪೇಟ ಹಾಗೂ ಕೇಸರಿ ಶಾಲು ತೊಡಿಸಿ ಸ್ವಾಗತಿಸಿದರು. ಬಳಿಕ ಮೋದಿ ಅಬ್ಬದ ರೋಡ್ ಶೋ ಆರಂಭಗೊಂಡಿತು.

ಮೋದಿ ಜೊತೆ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆಎಸ್ ಈಶ್ವರಪ್ಪ, ಎಸ್ ಎ ರಾಮದಾಸ್ ತೆರದ ವಾಹನದ ಮೂಲಕ ರೋಡ್ ಶೋನಲ್ಲಿ ಪಾಲ್ಗೊಂಡರು. ಮೋದಿ ರೋಡ್ ಶೋ ನೋಡಲು ಜನಸಾಗರವೇ ಹರಿದು ಬಂದಿತ್ತು. ಕಲಾ ತಂಡಗಳ ಪ್ರದರ್ಶನ ರೋಡ್ ಶೋ ಮೆರುಗು ಹೆಚ್ಚಿಸಿತ್ತು. ನಮ್ಮ ಮೋದಿ ನಮ್ಮ ಹೆಮ್ಮೆ ಸೇರಿದಂತೆ ಹಲವು ಪ್ಲೇಕಾರ್ಡ್‌ಗಳು, ಮೋದಿ ಮೋದಿ ಜಯಘೋಷ ಮೊಳಗಿತ್ತು.

ನಿನ್ನೆ ಬೆಂಗಳೂರಿನಲ್ಲಿ ಮೋದಿ ರೋಡ್ ಶೋ ನಡೆಸಿದ್ದರು. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂಜೆ ಬೆಂಗಳೂರಲ್ಲಿ ಭರ್ಜರಿ ರೋಡ್‌ಶೋ ನಡೆಸಿದರು. ದೆಹಲಿಯಿಂದ ವಿಶೇಷವಾಗಿ ತರಿಸಲಾದ ತೆರದ ವಾಹನವು ಬುಲೆಟ್‌ಫ್ರೂಫ್‌ನಿಂದ ಕೂಡಿತು.

ಮಾಗಡಿ ರೋಡ್‌ ನೈಸ್‌ ಜಂಕ್ಷನ್‌ನಿಂದ ಆರಂಭಗೊಂಡ ರೋಡ್‌ ಶೋ ಸುಮನಹಳ್ಳಿ ಜಂಕ್ಷನ್‌ವರೆಗೆ ಸುಮಾರು 5.3 ಕಿ.ಮೀ. ನಡೆಯಿತು. ಸುಮಾರು ಒಂದು ಗಂಟೆ ಕಾಲ ನಡೆದ ರೋಡ್‌ ಶೋ ವೇಳೆ ನರೇಂದ್ರ ಮೋದಿ ಅವರನ್ನು ಕಣ್ತುಂಬಿಕೊಳ್ಳಲು ರಸ್ತೆಗಳ ಇಕ್ಕೆಲಗಳಲ್ಲಿ ಜನರು ನೆರೆದಿದ್ದರು. ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಮೋದಿ ಮೇಲೆ ಹೂವಿನ ಮಳೆಗರೆದು ಜೈಕಾರ ಕೂಗಿದರು. ರೋಡ್‌ಶೋನಲ್ಲಿ ಜನಸಾಗರವೇ ಹರಿದು ಬಂದಿತು.

ಬೆಳಗಾವಿಯಲ್ಲಿ ಪ್ರಚಾರ ಮುಗಿಸಿ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ ಮೋದಿ, ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿಐಇಸಿ) ಬಳಿಯ ಹೆಲಿಪ್ಯಾಡ್‌ಗೆ ಬಂದಿಳಿದರು. ಬಳಿಕ ರಸ್ತೆಯ ಮೂಲಕ ಮಾಗಡಿ ರಸ್ತೆ ಜಂಕ್ಷನ್‌ಗೆ ತೆರಳಿದರು.

ಮಾಗಡಿ ರಸ್ತೆ ಜಂಕ್ಷನ್‌ನಿಂದ ರೋಡ್‌ ಶೋ ಆರಂಭವಾಗುತ್ತಿದ್ದಂತೆ ಮೋದಿ ಅವರಿಗೆ ರಸ್ತೆಯ ಇಕ್ಕೆಲಗಳಲ್ಲಿ ಸೇರಿದ ಜನಸಾಗರದಿಂದ ಹೂಮಳೆ ಸ್ವಾಗತ ದೊರಕಿತು. ಜನರತ್ತ ಕೈ ಬೀಸಿದ ಮೋದಿಗೆ ಹೂವು ಹಾಕಿ ಜೈಕಾರ ಕೂಗಿದರು. ಮೋದಿಯ ಸ್ವಾಗತಕ್ಕಾಗಿ ಸಾಂಸ್ಕೃತಿಕ ಕಲಾತಂಡಗಳನ್ನು ಆಯೋಜನೆ ಮಾಡಲಾಗಿದ್ದು, ಈಸ್‌ವೆಸ್ಟ್‌ ಜಂಕ್ಷನ್‌ ಬಳಿಕ ಡೊಳ್ಳು ಕುಣಿತ, ವೀರಗಾಸೆ ನೃತ್ಯ ಪ್ರದರ್ಶನ ಮಾಡಲಾಯಿತು. ರಸ್ತೆಯುದ್ದಕ್ಕೂ ಬಿಜೆಪಿ ಬಾವುಟ, ಕೇಸರಿ ಶಾಲು ರಾರಾಜಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

andolanait

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

3 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago