ಕೋವಿಡ್‌ ಲಸಿಕೆ ಎರಡನೇ ಡೋಸ್‌ ಪಡೆದ ಪ್ರಧಾನಿ ಮೋದಿ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಏಮ್ಸ್‌ನಲ್ಲಿ ಇಂದು (ಗುರುವಾರ) ಬೆಳಿಗ್ಗೆ ಕೊರೊನಾ ಲಸಿಕೆ ಎರಡನೇ ಡೋಸ್‌ ಪಡೆದಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ʻಇಂದು ಏಮ್ಸ್‌ನಲ್ಲಿ ಕೊವಿಡ್ ಲಸಿಕೆಯ 2ನೇ ಡೋಸ್ ಪಡೆದಿದ್ದೇನೆ. ವೈರಸ್ ವಿರುದ್ಧ ಹೋರಾಡಲು ಲಸಿಕೆ ನಮ್ಮಲ್ಲಿರುವ ಕೆಲವು ವಿಧಾನಗಳಲ್ಲಿ ಒಂದಾಗಿದೆ. ನೀವು ಲಸಿಕೆ ಪಡೆಯಲು ಅರ್ಹರಾಗಿದ್ದರೆ, ಶೀಘ್ರದಲ್ಲೇ ಲಸಿಕೆ ಪಡೆಯಿರಿʼ ಎಂದು ಹೇಳಿದ್ದಾರೆ.

× Chat with us