ಅರಸು ಅವರಿಗೇ ವಂಚಿಸಿದ ವಿಶ್ವನಾಥ್‌, ಸಿದ್ದರಾಮಯ್ಯರನ್ನು ಟೀಕಿಸುವುದು ಸಹಜವೇ!

ಮೈಸೂರು: ಸಿದ್ದರಾಮಯ್ಯ ಅವರನ್ನು ಕರ್ನಾಟಕದ ಡೊನಾಲ್ಡ್‌ ಟ್ರಂಪ್‌ ಎಂದು ಟೀಕಿಸಿರುವ ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರನ್ನು ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ.

ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ವಿಶ್ವನಾಥ್‌ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಅವರು, ಮತಸಂತೆಯಲ್ಲಿ ತನ್ನನ್ನು ಮಾರಿಕೊಂಡ ವಿಶ್ವನಾಥ್ ಯಾರು ಮತ್ತು ಅವರ ಕಥೆ ಏನು ಎಂಬುದರ ಬಗ್ಗೆ ಎಲ್ಲರಿಗೂ ತಿಳಿದಿದೆ.

ವಿಶ್ವನಾಥ್ ಅವರಿಗೆ ಯಾವುದೇ ಸಿದ್ಧಾಂತವಿಲ್ಲ. ಹೀಗಾಗಿಯೇ ಇವರು ಹಿಂದುಳಿದ ವರ್ಗಗಳ ಹರಿಕಾರರಾದ ದೇವರಾಜ ಅರಸು ಅಂತಹ ನಾಯಕನ ಬೆನ್ನಿಗೇ ಚೂರಿ ಹಾಕುವ ಕೆಲಸ ಮಾಡಿದರು. ಅರಸು ಅವರಿಗೇ ವಂಚಿಸಿದ ಇವರು ಸಿದ್ಧಾಂತಕ್ಕಾಗಿ ಹೋರಾಟ ನಡೆಸುವ ಸಿದ್ದರಾಮಯ್ಯ ಮತ್ತು ನನ್ನಂತವರನ್ನು ಟೀಕಿಸುವುದು ಸಹಜವೇ ಆಗಿದೆ. ಇಂತಹವರ ಮಾತಿಗೆ ಪ್ರಾಮುಖ್ಯತೆ ಇರುವುದಿಲ್ಲ.

× Chat with us