ಅಧಿಕಾರಿಗಳು ಒಂದೇ ಕಡೆ ಇರಲ್ಲ, ಯಾರು ಎಲ್ಲಿರಬೇಕೆಂದು ಸರ್ಕಾರ ತೀರ್ಮಾನಿಸುತ್ತೆ: ತನ್ವೀರ್‌ ಸೇಠ್‌

ಮೈಸೂರು: ಐಎಎಸ್‌ ಅಧಿಕಾರಿಗಳು ಬೀದಿಯಲ್ಲಿ ನಿಂತು ಆರೋಪ ಪ್ರತ್ಯಾರೋಪ ಮಾಡುವುದು ಆಡಳಿತ ವ್ಯವಸ್ಥೆಗೆ ಶೋಭೆ ತರಲ್ಲ ಎಂದು ಶಾಸಕ ತನ್ವೀರ್‌ ಸೇಠ್‌ ಅಸಮಾಧಾನ ವ್ಯಕ್ತಪಡಿಸಿದರು.

ಆಡಳಿತಾಧಿಕಾರಿಗಳ ಜಟಾಪಟಿ ವಿಚಾರವಾಗಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಕೊರೊನಾದಿಂದ ಜನ ತತ್ತರಿಸಿದ್ದಾರೆ. ಪ್ರಾಣ ಉಳಿಸುವುದು ಅಧಿಕಾರಿಗಳು, ಜನಪ್ರತಿನಿಧಿಗಳ ಕರ್ತವ್ಯ. ಕೇವಲ ಒಬ್ಬರ ಮೇಲೆ ಜವಾಬ್ದಾರಿ ಕೊಟ್ಟಿದ್ದು, ಈ ಯಡವಟ್ಟಿಗೆ ಕಾರಣವಾಗಿದೆ ಎಂದು ಬೇಸರಿಸಿದರು.

ಸಿಎಸ್‌ಆರ್ ಫಂಡ್ ವಿಚಾರ ತನಿಖೆಯಾಗಬೇಕು. ನಾನು ಯಾರ ಪರ, ಯಾರ ವಿರುದ್ಧವೂ ಅಲ್ಲ. ಅಧಿಕಾರಿಗಳು ಒಂದೇ ಕಡೆ ಶಾಶ್ವತ ಇರಲ್ಲ. ಯಾರು ಎಲ್ಲಿರಬೇಕೆಂದು ತೀರ್ಮಾನಿಸುವುದು ಸರ್ಕಾರ. ಈ ಸಂಬಂಧ ಸತ್ಯ ಸಂಗತಿ ಹೊರ ಬರಬೇಕು. ವರ್ಗಾವಣೆ ಮಾಡುತ್ತಾರೋ ಅಥವಾ ಬುದ್ದಿಮಾತು ಹೇಳುತ್ತಾರೋ ಅವರಿಗೆ ಬಿಟ್ಟಿದ್ದು. ಇಲ್ಲಿ ವ್ಯಕ್ತಿ ಮುಖ್ಯ ಅಲ್ಲ, ಜನರ ಸಮಸ್ಯೆ ಮುಖ್ಯ ಎಂದು ತಿಳಿಸಿದರು.

× Chat with us