ಕೊರೊನಾ ಹಿಂದೂ, ಮುಸ್ಲಿಂ ಅಂತ ನೋಡಲ್ಲ: ರಿಝ್ವಾನ್ ಅರ್ಷದ್

ಬೆಂಗಳೂರು: ಬೀದಿಲಿ ಜನ ಸಾಯುತ್ತಿದ್ದಾರೆ. ಇವರು ಹಿಂದೂ ಮುಸ್ಲಿಂ ಅಂತ ಮಾತನಾಡುತ್ತಿದ್ದೀರಾ, ನಿಯಮ ಆತ್ಮಸಾಕ್ಷಿ ಇದೆಯಾ ಎಂದು ಶಾಸಕ ರಿಝ್ವಾನ್‌ ಅರ್ಷದ್‌ ಆಕ್ರೋಶ ವ್ಯಕ್ತಪಡಿಸಿದರು.

ಒಬ್ಬ ದರೋಡೆಕೋರನನ್ನು ಹಿಂದೂ ಕಳ್ಳ, ಮುಸ್ಲಿಂ ಕಳ್ಳ ಅಂತ ನೋಡಲು ಆಗುತ್ತದೆಯೇ? ನೀವು 17 ಜನ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದವರು. ಅವರಿಗೆ ಅಲ್ಲಿ ಕೆಲಸ ಸಿಕ್ಕಿದೆ. ನೀವು ಏನ್ ಮಾಡೋಕೆ ಹೋಗಿದ್ದಿರಿ ವಾರ್ ರೂಮ್‌ಗೆ ಎಂದು ಪ್ರಶ್ನಿಸಿದರು.

ಬಿಬಿಎಂಪಿ ಬಿಜೆಪಿ ನೇತೃತ್ವದ ಸರ್ಕಾರದ ಕೈಯಲ್ಲಿದೆ. ಮುಸ್ಲಿಂ ಹುಡುಗರು ಅಲ್ಲಿ ಏನ್ ಮಾಡೋಕಾಗುತ್ತೆ. ನಿಮ್ಮ ಸರ್ಕಾರ ಏನು ಕತ್ತೆ ಕಾಯ್ದಿದ್ಯಾ? ಈ ಕೊರೊನಾ ಮುಸ್ಲಿಂನ ನೋಡೋದಿಲ್ಲ, ಹಿಂದೂನು ನೋಡಲ್ಲ. ನೀವು ಕೋಮುವಾದ ರಾಜಕಾರಣ ಮಾಡುತ್ತಿದ್ದೀರಿ ಎಂದು ಟೀಕಿಸಿದರು.

× Chat with us