ಆರೋಗ್ಯ ಸಚಿವ ಸುಧಾಕರ್‌ ರಾಜೀನಾಮೆ ನೀಡಲಿ: ಬಿಜೆಪಿ ಶಾಸಕ ರೇಣುಕಾಚಾರ್ಯ ಆಗ್ರಹ

ಬೆಂಗಳೂರು: ಹಾಸಿಕೆ ಕೊರತೆ ಹೆಚ್ಚಾಗಿದ್ದು, ಕೋವಿಡ್‌ ಸೋಂಕಿತರಿಗೆ ಸಮಸ್ಯೆಯಾಗಿದೆ. ಬಿಕ್ಕಟ್ಟನ್ನು ನಿರ್ವಹಿಸಲಾಗದ ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ʻಕೆಲವರು ತುಂಬಾ ಆರಾಮಾಗಿ ಇದ್ದಾರೆ. ಬಡಜನರನ್ನು ಕಾಪಾಡುವ ಬದ್ಧತೆ ಅವರಿಗಿಲ್ಲ. ಅವರಿಗೆ ಕೆಲಸ ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಲಿʼ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

× Chat with us