ಸಿಎಂ ಆಗಲು ಅರ್ಹ ದಲಿತ ನಾಯಕರಿದ್ದಾರೆ, ಅವಕಾಶ ಕೊಟ್ನೋಡಿ… ದಲಿತ ಸಿಎಂಗಾಗಿ ಶಾಸಕ ಎನ್.ಮಹೇಶ್‌ ಕರೆ

ಚಾಮರಾಜನಗರ: ರಾಜ್ಯದಲ್ಲಿ ಮುಂದಿನ ಸಿಎಂ ಬಗ್ಗೆ ಚರ್ಚೆ ಜೋರಾಗಿದೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂಬ ಮಾತುಗಳು ಇವೆ. ಇದರ ಬೆನ್ನಲ್ಲೇ, ದಲಿತ ಮುಖ್ಯಮಂತ್ರಿಗಾಗಿ ಶಾಸಕ ಎನ್.ಮಹೇಶ್‌ ಕರೆಕೊಟ್ಟಿದ್ದಾರೆ.

ರಾಜ್ಯದಲ್ಲಿ ಮುಂದಿನ ಸಿಎಂ ಬಗ್ಗೆ ಚರ್ಚೆ ಜೋರಾಗಿದೆ. ಜಮೀರ್ ಸೇರಿದಂತೆ ಕೆಲವು ಶಾಸಕರು ಸಿದ್ದರಾಮಯ್ಯ ಸಿಎಂ ಆಗಲಿ ಎನ್ನುತ್ತಿದ್ದಾರೆ. ರಾಜ್ಯದಲ್ಲಿ ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯವಿಲ್ಲ ಎನ್ನುವಂತಾಗಿದೆ. ಈ ಬಾರಿಯೂ ಕೂಡ ದಲಿತರನ್ನು ಸಿಎಂ ಮಾಡುವ ಬಗ್ಗೆ ಯಾರೂ ಮಾತನಾಡ್ತಿಲ್ಲ. ಇನ್ನಾದರೂ ಜನರು ದಲಿತರನ್ನು ಸಿಎಂ ಮಾಡುವತ್ತ ಮುಖ ಮಾಡಲಿ. ಈ ಹೋರಾಟದಲ್ಲಿ ನಾನು ಕೂಡ ನಿಮ್ಮ ಜೊತೆ ಇರುತ್ತೇನೆ ಎಂದು ಕರೆ ನೀಡಿದ್ದಾರೆ.

ರಾಜ್ಯದ ಜನಸಂಖ್ಯೆಯಲ್ಲಿ ಶೇ 1 ಇರುವ ಸಮುದಾಯದವರು ಮುಖ್ಯಮಂತ್ರಿಯಾಗುತ್ತಾರೆ. ದಲಿತರು ರಾಜ್ಯದಲ್ಲಿ ಒಂದೂವರೆ ಕೋಟಿ ಇದ್ದಾರೆ. ದಲಿತರನ್ನು ಮತ ಬ್ಯಾಂಕ್ ಆಗಿ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ. ಪ್ರತಿ ಬಾರಿಯೂ ಕೂಡ ದಲಿತರಿಗೆ ಅನ್ಯಾಯವಾಗ್ತಿದೆ. 30 ವರ್ಷದಿಂದಲೂ ದಲಿತರಿಗೆ ಅಧಿಕಾರ ಸಿಗುತ್ತಿಲ್ಲ. ಪಕ್ಷಗಳಲ್ಲಿ ಹಿರಿಯ ದಲಿತ ನಾಯಕರಿದ್ದು, ಸಿಎಂ ಆಗಲೂ ಅರ್ಹರಾಗಿದ್ದಾರೆ. ಎಲ್ಲ ಅಧಿಕಾರಿಗಳು ದಲಿತ ನಾಯಕರ ಕೆಲಸ ಹೊಗಳುತ್ತಾರೆ. ಒಂದು ಬಾರಿ ಅವಕಾಶ ಕೊಟ್ಟಿ ನೋಡಿ ಎಂದು ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.

ಈಗಿರುವ ದಲಿತ ಶಾಸಕರ ಪರಿಸ್ಥಿತಿ ದಿಕ್ಕಿಲ್ಲದವರು ದಯ್ಯ ತಪ್ಪಿಕೊಂಡಂತೆ ಆಗಿದೆ. ದಲಿತ ಬಿಕ್ಯಾಮ್ ವೋಟ್ ಬ್ಯಾಂಕ್ ಆಗಿದೆ. ಬಾಯಿ ಮುಚ್ಚಿಕೊಂಡು ದಲಿತರು ಓಟ್ ಹಾಕಿ ಎಂದು ವ್ಯಂಗ್ಯ ಮಾಡಲಾಗುತ್ತಿದೆ. ರಾಜ್ಯದಲ್ಲಿ ಸಿಎಂ ಆಗುವ ಆರ್ಹತೆಯಿದ್ದ ನಾಯಕರು ಅಧಿಕಾರದಿಂದ ವಂಚಿತರಾಗಿದ್ದಾರೆ. ಬಿ.ರಾಚಯ್ಯ, ಬಸವಲಿಂಗಪ್ಪ, ಮಲ್ಲಿಕಾರ್ಜುನ್ ಖರ್ಗೆ, ರಂಗನಾಥ್, ಪರಮೇಶ್ವರ್ ಸೇರಿದಂತೆ ಎಲ್ಲ ನಾಯಕರು ಸಿಎಂ ಸ್ಥಾನದಿಂದ ವಂಚಿತರಾಗಿದ್ದಾರೆ ಎಂದು ಎನ್‌.ಮಹೇಶ್‌ ಬೇಸರ ವ್ಯಕ್ತಪಡಿಸಿದ್ದಾರೆ.

× Chat with us