ಮಕ್ಕಳು ಮನೆಗೆಲಸ, ಕೂಲಿ ಮಾಡೋದನ್ನ ತಪ್ಪಿಸಲು ಶಾಲೆ ತೆರೆಯಲೇಬೇಕು: ಜಿಟಿಡಿ

ಮೈಸೂರು: ಶಾಲೆಗಳು ಪುನಾರಂಭವಾಗದೇ ಮಕ್ಕಳನ್ನು ಮನೆಗೆಲಸ, ಕೂಲಿ ಕೆಲಸಕ್ಕೆ ತೊಡಗಿಸಿಕೊಳ್ಳಲಾಗಿದೆ. ಇದನ್ನು ತಪ್ಪಿಸಲು ಶಾಲೆ ತೆರೆಯುವುದು ಅನಿವಾರ್ಯ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷಗಳಿಂದ ಭೌತಿಕವಾಗಿ ಶಾಲೆಗಳು ತೆರೆಯದೇ ಮಕ್ಕಳು ಸಮಸ್ಯೆಗಳ ಸುಳಿಗೆ ಸಿಲುಕಿದ್ದಾರೆ ಎಂದರು.

ಪ್ರೌಢಶಾಲೆ ಶಿಕ್ಷಕರು ಒಂದು ಸಮಿತಿ ರಚಿಸಿ ಶಾಲೆ ಆರಂಭದ ನಂತರ ಒಂದು ವಾರ ಮುನ್ನೆಚ್ಚರಿಕೆ ಕ್ರಮವಹಿಸಬೇಕು. ಶಾಲೆಗಳಲ್ಲಿ ಸ್ಯಾನಿಟೈಸೇಷನ್‌, ಮಾಸ್ಕ್‌ ಧರಿಸುವುದು, ಸಾರ್ವಜನಿಕ ಅಂತರ, ಬಿಸಿನೀರು ವ್ಯವಸ್ಥೆ, ಸ್ವಚ್ಛತೆ ಸೇರಿದಂತೆ ಕೋವಿಡ್‌ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಸಲಹೆ ನೀಡಿಲಾಗಿದೆ ಎಂದು ತಿಳಿಸಿದರು.

× Chat with us