ʻಆಂದೋಲನʼ ಐಪಿಎಲ್‌ ಕ್ವಿಜ್ ಸ್ಪರ್ಧೆ ವಿಜೇತರಿಗೆ ಬಹುಮಾನ; ಟ್ವಿಟರ್‌ನಲ್ಲಿ ಹಂಚಿಕೊಂಡ ಶಾಸಕ ಜಿಟಿಡಿ

ಮೈಸೂರು: ʻಆಂದೋಲನʼ ದಿನಪತ್ರಿಕೆ ವತಿಯಿಂದ ನಡೆಸುತ್ತಿರುವ ಐಪಿಎಲ್‌ ಕ್ವಿಜ್‌ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪತ್ರಿಕಾ ಕಚೇರಿಯಲ್ಲಿ ಶನಿವಾರ ಶಾಸಕ ಜಿ.ಟಿ.ದೇವೇಗೌಡ ಅವರು ಬಹುಮಾನ ವಿತರಿಸಿದರು.

ಸ್ಪರ್ಧೆ ವಿಜೇತರಿಗೆ ಟಿ ಶರ್ಟ್‌ ಹಾಗೂ ಮಾಸ್ಕ್‌ ನೀಡಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಟೈಲರ್ ರಾಜಣ್ಣ ಹಾಗೂ ಕಾಂಗ್ರೆಸ್ ಮುಖಂಡ ಬುಲೆಟ್ ಮಹದೇವು ಉಪಸ್ಥಿತರಿದ್ದರು. ಬಹುಮಾನ ವಿತರಣೆ ಸಂದರ್ಭದ ಫೋಟೊವನ್ನು ಜಿ.ಟಿ.ದೇವೇಗೌಡ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಆಂದೋಲನ ಪತ್ರಿಕೆ ನಡೆಸುತ್ತಿರುವ ಕ್ವಿಜ್‌ ಸ್ಪರ್ಧೆಗೆ ಜಿ.ಟಿ.ದೇವೇಗೌಡ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

× Chat with us