ಬೆಂಗಳೂರು : ಕಲ್ಲು ತೂರುವವರು, ಬೆಂಕಿ ಹಚ್ಚುವವರು, ಬಾಂಬ್ ಸ್ಪೋಟಿಸುವವರು, ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಿಸುವವರು, ದೇಶದ್ರೋಹದ ಕೃತ್ಯ ಎಸಗುವವರು, ಪಾಕಿಸ್ಥಾನ್ ಜಿಂದಾಬಾದ್ ಎಂದು ಕೂಗುವವರು ಸಿದ್ದರಾಮಯ್ಯ ಅವರ ಸರ್ಕಾರದ ಕಣ್ಣಿಗೆ ಅಮಾಯಕರಂತೆ ಕಾಣುತ್ತಾರೆ. ಅವರೆಲ್ಲರೂ ಎಸಗುವ ದುಷ್ಕೃತ್ಯ ಕಾಂಗ್ರೆಸ್‍ನವರ ಪಾಲಿಗೆ ಕೇವಲ ಮಕ್ಕಳಾಟ ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.
ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ದೇಶದ ಬಗ್ಗೆ ಕಿಂಚಿತ್ತೂ ಅಭಿಮಾನವಿಲ್ಲದ, ದೇಶಭಕ್ತರ ದೇಶಪ್ರೇಮವನ್ನು ಹಂಗಿಸುತ್ತಿದ್ದ, ದೇಶದ ವ್ಯವಸ್ಥೆಯನ್ನು ವಿದೇಶಗಳಲ್ಲಿ ವ್ಯಂಗ್ಯಕ್ಕೆ ಬಳಸಿಕೊಂಡ ಆಷಾಢಭೂತಿಗಳೆಲ್ಲರೂ ಸೇರಿ ತಮ್ಮ ಸ್ವಾರ್ಥ ಸಾಧನೆಯ ಗುಂಪಿಗೆ ಐ.ಎನ್.ಡಿ.ಐ.ಎ ಎಂದು ಹೆಸರಿಟ್ಟಿರುವುದು ಎಲ್ಲರಿಗೂ ತಿಳಿದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪರ ಆಡಳಿತದಿಂದ ಹತಾಶೆಗೊಳಗಾಗಿರುವ ವಿಪಕ್ಷಗಳು ತಮ್ಮ ಗುಂಪಿಗೆ ಐ.ಎನ್.ಡಿ.ಐ.ಎ ಎಂಬ ಹೆಸರಿಟ್ಟ ಮಾತ್ರಕ್ಕೆ ಅದು ದೇಶದ ಮೇಲೆ ಅವರಿಗಿರುವ ಅಭಿಮಾನವಲ್ಲ ಎಂದಿದೆ.
ಬದಲಿಗೆ ಸ್ವಾರ್ಥ ರಾಜಕೀಯ ಉದ್ದೇಶಗಳನ್ನು ಸಾಸಲು ಇಷ್ಟು ವರ್ಷಗಳ ಕಾಲ ಜಾತಿ, ಧರ್ಮಗಳನ್ನು ಬಳಸಿಕೊಂಡಿದ್ದವು, ಈ ಬಾರಿ ಸ್ವಲ್ಪ ಮುಂದುವರೆದು ಐ.ಎನ್.ಡಿ.ಐ.ಎಎಂದು ದೇಶದ ಹೆಸರು ಬಳಸಿಕೊಂಡಿವೆ ಎಂದು ದೂರಿದೆ.
ದೇಶದ್ರೋಹಿ ಸಂಘಟನೆಗಳಾದ ಇಂಡಿಯನ್ ಮುಜಾಹಿದ್ದೀನ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಹೆಸರಿನಲ್ಲಿಯೂ ಐ.ಎನ್.ಡಿ.ಐ.ಎ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈಗ ವಿಪಕ್ಷಗಳು ಸೇರಿ ಮಾಡಿಕೊಂಡಿರುವ ಅವಕಾಶವಾದಿ ಗುಂಪು ಸಹ ಬಹುತೇಕ ಆ ಸಂಘಟನೆಗಳಂತೆ, ದೇಶದ ಹಿತದೃಷ್ಟಿಗಿಂತ, ತಮ್ಮ ವೈಯಕ್ತಿಕ ಹಿತ ಸಾಧನೆ ಹಾಗೂ ಕುಟುಂಬ ರಾಜಕಾರಣ ಮತ್ತು ಸ್ವಜನ ಪಕ್ಷಪಾತವನ್ನು ಪ್ರೇರೇಪಿಸುತ್ತದೆ ಎಂದು ಆರೋಪಿಸಿದೆ.
ಇಂತಹ ದಿಕ್ಕಿಲ್ಲದ, ಶೂನ್ಯ ನಾಯಕತ್ವದ, ವೈಯುಕ್ತಿಕ ಹಿತಾಸಕ್ತಿಗಳ ಸ್ಥಾಪನೆಗಾಗಿ ರೂಪುಗೊಂಡಿರುವ ಐ.ಎನ್.ಡಿ.ಐ.ಎ ನೈಜ ಕಾಂಗ್ರೆಸ್ ನವರು ಯಾವ ಹೆದರಿಕೆಯಿಂದ ಯುಪಿಎ ಹೆಸರನ್ನು ಬದಲಿಸಿದರು.
ಅವರ ಹಳೆಯ ಲೂಟಿಗಳನ್ನು ಮುಚ್ಚಿಡಲು ಇರಬೇಕು. ಜನರಿಗೆ ಐ.ಎನ್.ಡಿ.ಐ.ಎ ಹಾಗು ಯುಪಿಎ ನಡುವೆ ಯಾವುದೇ ವ್ಯತ್ಯಾಸವಿಲ್ಲ, ಅದು ಕೇವಲ ಹಳೇ ನೀರು ಹೊಸ ಬಾಟ್ಲಿಯಲ್ಲಿ ಹಾಕಿದ್ದು ಎಂಬುದು ಗೊತ್ತಾಗಬೇಕು ಎಂದಿದೆ.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…