ಎಚ್‌.ಡಿ.ಕೋಟೆಯಲ್ಲಿ ಪ್ರಾಧ್ಯಾಪಕರಿಂದ ಸುಲಿಗೆ: ಕೊನೆಗೆ ಕಾರನ್ನೂ ಬಿಡ್ಲಿಲ್ಲ ಸುಲಿಗೆಕೋರರು!

ಮೈಸೂರು: ಪ್ರಾಧ್ಯಾಪಕರಿಂದ ಹಣ ಸುಲಿಗೆ ಮಾಡಿದ್ದಲ್ಲದೇ, ಅವರ ಕಾರಿನ ಸಮೇತ ದರೋಡೆಕೋರರು ಪರಾರಿಯಾಗಿರುವ ಘಟನೆ ಎಚ್.ಡಿ.ಕೋಟೆ ತಾಲ್ಲೂಕಿನ ಹಳ್ಳದ ಮನುಗನಹಳ್ಳಿ ಗೇಟ್‌ ಬಳಿ ನಡೆದಿದೆ.

ಮಂಗಳೂರಿನ ಕಾಲೇಜೊಂದರ ಪ್ರಾಧ್ಯಾಪಕ ರಮೇಶ್‌ ಹಣ, ಕಾರು ಕಳೆದುಕೊಂಡವರು.

ರಮೇಶ್‌ ತಮ್ಮ ಸಂಬಂಧಿಯನ್ನು ದೊಡ್ಡಮಾರಗೌಡನಹಳ್ಳಿಗೆ ಬಿಡಲು ಬಂದಿದ್ದರು. ವಾಪಸ್ಸು ತೆರಳುವಾಗ ನಿದ್ರೆ ಬಂದಿದ್ದು, ಕಾರನ್ನು ನಿಲ್ಲಿಸಿ ವಿಶ್ರಾಂತಿ ಪಡೆಯಲು ಮಲಗಿದ್ದಾರೆ. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸುಲಿಗೆ ಮಾಡಿದ್ದಾರೆ. ರಮೇಶ್‌ರನ್ನು ಬೆದರಿಸಿ ಅವರ ಬಳಿಯಿದ್ದ ಡೆಬಿಟ್ ಕಾರ್ಡ್, ಮೊಬೈಲ್ ಕಸಿದು ಬಳಿಕ ಕಾರಿನಿಂದ ಅವರನ್ನು ಇಳಿಸಿ ಕಾರು ಸಮೇತ ಪರಾರಿಯಾಗಿದ್ದಾರೆ.

ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us