ಲೋನ್‌ ಕಟ್ಟಿ ಬಡವರು ಟಿವಿ, ಬೈಕ್ ತಗೋತಾರೆ… ಕತ್ತಿ ಹೇಳಿಕೆಗೆ ಸುರೇಶ್‌ಕುಮಾರ್‌ ಟೀಕೆ

ಮೈಸೂರು: ಬಿಪಿಎಲ್‌ ಪಡಿತರ ಚೀಟಿ ಹೊಂದಿರುವವರು ಟಿವಿ, ಫ್ರಿಡ್ಜ್‌, ಬೈಕ್‌ ವಾಪಸ್‌ ನೀಡಬೇಕು ಎಂದಿರುವ ಉಮೇಶ್‌ ಕತ್ತಿ ಅವರ ಹೇಳಿಕೆಗೆ ಸ್ವಪಕ್ಷದಲ್ಲೇ ಅಪಸ್ವರ ಕೇಳಿಬಂದಿದೆ.

ಬಡವರು ತಿಂಗಳ ಕಂತು ಕಟ್ಟಿ ಬೈಕ್‌, ಟಿವಿ, ಫ್ರಿಡ್ಜ್‌ ತೆಗೆದುಕೊಂಡಿರುತ್ತಾರೆ. ಅವರನ್ನು ವಾಪಸ್‌ ಕೊಡು ಎಂದು ಕೇಳುವುದು ಸರಿಯಲ್ಲ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ತಿಳಿಸಿದ್ದಾರೆ.

ಲಾಕ್‌ಡೌನ್‌ ಸಮಯದಲ್ಲಿ ಮಕ್ಕಳು ಹೆಚ್ಚು ಟಿವಿ ನೋಡಿ ಪಾಠ ಕಲಿತಿದ್ದಾರೆ. ಟಿವಿ ಇಲ್ಲದಿದ್ದರೆ ವರ್ಚುವಲ್‌ ಶಿಕ್ಷಣ ಕಷ್ಟವಾಗುತ್ತಿತ್ತು. ಪ್ರತೀ ಶ್ರೀಸಾಮಾನ್ಯನ ಮನೆಯಲ್ಲೂ ಟಿವಿ ಇದ್ದೇ ಇರುತ್ದೆ. ಕತ್ತಿ ಅವರು ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ. ಕತ್ತಿ ಅವರ ಜೊತೆ ನಾನು ಚರ್ಚಿಸುತ್ತೇನೆ ಎಂದು ಸುರೇಶ್‌ ಕುಮಾರ್‌ ಅವರು ತಿಳಿಸಿದ್ದಾರೆ.

× Chat with us