ಕಳೆದ ಐದಾರು ದಿನಗಳಿಂದ ಮಿಚಾಂಗ್ ಚಂಡಮಾರುತ ತಮಿಳುನಾಡಿನಲ್ಲಿ ಜನಜೀವನವನ್ನು ಅಸ್ತವ್ಯಸ್ತಗವಾಗುವಂತೆ ಮಾಡಿದೆ. ಅದರಲ್ಲಿಯೂ ಸಮುದ್ರ ತೀರದಲ್ಲಿರುವ ಚೆನ್ನೈ ನಗರದ ಮೇಲೆ ಮಿಚಾಂಗ್ ಪರಿಣಾಮ ದೊಡ್ಡ ಮಟ್ಟದಲ್ಲಿದ್ದು, ನಗರದ ಅನೇಕ ಪ್ರದೇಶಗಳು ಜಲಾವೃತವಾಗಿವೆ. ಚೆನ್ನೈ ನಗರದ ಹಲವು ಪ್ರದೇಶಗಳಲ್ಲಿ ನೀರು ನದಿಯ ಹಾಗೆ ಹರಿಯುತ್ತಿರುವ ಹಾಗೂ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಹೀಗೆ ಚೆನ್ನ ನಗರವನ್ನು ನರಳುವ ಹಾಗೆ ಮಾಡಿರುವ ಮಿಚಾಂಗ್ ಚಂಡಮಾರುತ ಇದೀಗ ಆಂಧ್ರ ಪ್ರದೇಶದ ಕಡೆ ಮುಖ ಮಾಡಿದ್ದು ಕರಾವಳಿ ಭಾಗ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಅವಾಂತರ ಉಂಟುಮಾಡಿದೆ. ತಿರುಪತಿ ನಗರದಲ್ಲಿ ಮಿಚಾಂಗ್ ಚಂಡಮಾರುತದಿಂದಾಗಿ ದೊಡ್ಡ ಪ್ರಮಾಣದಲ್ಲಿ ಮಳೆ ಉಂಟಾಗಿದ್ದು ಪರಿಣಾಮ ನಿನ್ನೆ ( ಡಿಸೆಂಬರ್ 4 ) ಒಟ್ಟು 16 ವಿಮಾನಗಳು ರದ್ದಾಗಿವೆ.
ಹೌದು, ಆಂಧ್ರ ಪ್ರದೇಶದ ರೇಣಿಗುಂಟ ವಿಮಾನ ನಿಲ್ದಾಣದಿಂದ ನಿನ್ನೆ ಹಾರಬೇಕಿದ್ದ 16 ವಿಮಾನಗಳು ತೀವ್ರ ಮಳೆ ಹಾಗೂ ಮಾರುತದ ಕಾರಣದಿಂದಾಗಿ ರದ್ದಾಗಿವೆ. ಈ ಬಗ್ಗೆ ವಿಮಾನಯಾನ ಸಂಸ್ಥೆಗಳು ತಮ್ಮ ಪ್ರಯಾಣಿಕರಿಗೆ ವಿಮಾನ ನಿಲ್ದಾಣಕ್ಕೂ ಬರುವ ಮುನ್ನ ತಾವು ಪ್ರಯಾಣಿಸಲಿರುವ ವಿಮಾನದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಂಡು ಬರತಕ್ಕದ್ದು ಎಂದು ಸೂಚನೆಯನ್ನೂ ಸಹ ನೀಡಿದೆ.
ಆಂಧ್ರ ಪ್ರದೇಶಕ್ಕೆ ಅಪ್ಪಳಿಸಿರುವ ಮಿಚಾಂಗ್ ಚಂಡಮಾರುತದ ವೇಗ ಗಂಟೆಗೆ 90 – 100 ಕಿಲೋಮೀಟರ್ ಇದ್ದು, ಇದರ ವೇಗ ಇನ್ನಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಸೋಮವಾರ ನಿರಂತರವಾಗಿ ತಿರುಪತಿ ನಗರದಲ್ಲಿ ಮಳೆ ಸುರಿದಿದ್ದು, ತಿರುಪತಿ ಜಿಲ್ಲೆಯಲ್ಲಿನ ಎಲ್ಲಾ 5 ನದಿಗಳು ತುಂಬಿಹರಿಯುತ್ತಿವೆ.
ತಿರುಪತಿ ಮಾತ್ರವಲ್ಲದೇ ಮಚಲಿಪಟ್ಟಣಂ, ಪಶ್ಚಿಮ ಗೋದಾವರಿ, ಕಾಕಿನಾಡ ಹಾಗೂ ನೆಲ್ಲೂರು ಜಿಲ್ಲೆಗಳಲ್ಲಿಯೂ ಮಿಚಾಂಗ್ ಪರಿಣಾಮ ತೀವ್ರವಾಗಿ ಮಳೆಯಾಗುತ್ತಿದ್ದು, ಹಲವೆಡೆ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಕೆಲವೆಡೆ ಭೂಕುಸಿತವೂ ಸಹ ಉಂಟಾಗಿದೆ.
ಬೆಂಗಳೂರು : ನಟ ಕಿಚ್ಚ ಸುದೀಪ್ ಮಗಳು, ಗಾಯಕಿ ಸಾನ್ವಿ ಸುದೀಪ್ ಬಗ್ಗೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ…
ಬೆಂಗಳೂರು: ಮಹಾರಾಷ್ಟ್ರದ ಎಎನ್‌ಟಿಎಫ್ ಅಧಿಕಾರಿಗಳು ಬೆಂಗಳೂರಿನಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿಗಳ ಮೇಲೆ ದಾಳಿ ನಡೆಸಿ ಬರೋಬ್ಬರಿ 55 ಕೋಟಿ ಮೌಲ್ಯದ…
ಹುಣಸೂರು : ಹುಣಸೂರು ನಗರದಲ್ಲಿ ಹಾಡಹಗಲೇ ದೊಡ್ಡ ದರೋಡೆ ನಡೆದಿದ್ದು, ಸುಮಾರು 4 ರಿಂದ 5 ಕೋಟಿ ರೂಪಾಯಿ ಮೌಲ್ಯದ…
ನವದೆಹಲಿ: ಪ್ರಧಾನಿ ಮೋದಿ ಅವರು ಇಂದು ತಮ್ಮ 129ನೇ ಮನ್ ಕಿ ಬಾತ್ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದರು. 2025ರಲ್ಲಿ ಭಾರತದ…
ಕಾರವಾರ: ದೇಶದ ಪ್ರಥಮ ಪ್ರಜೆಯಾಗಿರುವ ಸೇನಾ ಪಡೆಗಳ ಮಹಾದಂಡ ನಾಯಕಿ ರಾಷ್ಟ್ರಪತಿ ದ್ರೌಪದ ಮುರ್ಮು ಅವರು ಇಂದು ಜಲಾಂತರಗಾಮಿ ನೌಕೆಯಲ್ಲಿ…
ಮೈಸೂರು: ಅಯ್ಯಪ್ಪ ಸ್ವಾಮಿ ದೇವಸ್ಥಾನ ಪಕ್ಕದ ಕೇರಳ ರಾಜ್ಯದಲ್ಲಿ ಇದ್ದರೂ ಅಯ್ಯಪ್ಪನಿಗೆ ಹೆಚ್ಚಿನ ಭಕ್ತರು ಇರುವುದು ನಮ್ಮ ಕರ್ನಾಟಕದಲ್ಲಿಯೇ ಪ್ರತಿ…